ಗದಗ 13: ಜಿಲ್ಲೆಯಲ್ಲಿನ ಎಲ್ಲಾ ಇಲಾಖೆಗಳು ಸಕರ್ಾರದ ಸಕಾಲ ಸೇವೆಗಳ ಅಜರ್ಿಗಳನ್ನು ಪಟ್ಟಿ ಮಾಡಿ ದಿ. 28ರೊಳಗಾಗಿ ನಿಗದಿತ ಸಮಯಕ್ಕೆ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧಿಕಾರಿಗಳಿಗೆ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಸಕಾಲ ಸೇವೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು ಸರ್ಕಾರದ ಸಕಾಲ ಸೇವೆಗಳ ಪ್ರಮಾಣ ಪತ್ರ ಹಾಗೂ ಸಮಾಜಿಕ ಬದ್ರತಾ ಯೋಜನೆಯ ಪಿಂಚಣಿ ಇತರ ಇಲಾಖೆಗಳ ಸೇವೆಗಳಾಗಿ ಸ್ವೀಕೃತವಾಗುತ್ತಿರುವ ಅಜರ್ಿಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಬೇಕು, ಹಾಗೂ ಜಿಲ್ಲೆಯ ಸಂಬಂದಿಸಿದ ಎಲ್ಲಾ ಇಲಾಖೆಗಳ ಕಾಯರ್ಾಲಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಸಕಾಲ ಯೋಜನೆಯ ಸೂಚನಾ ಫಲಕ ಅಳವಡಿಸಬೇಕೆಂದು ಜಿಲ್ಲಾಧಿಕಾರಿಗಳು ನುಡಿದರು.
ಜಿಲ್ಲಾ ಜಿ.ಪಂ ಉಪಕಾರ್ಯದಶರ್ಿಗಳು ಪ್ರಾಣೇಶ ರಾವ್ ಮಾತನಾಡಿ ಗ್ರಾಮ ಪಂಚಾಯತ ಮಟ್ಟದಲ್ಲಿ ಸಕರ್ಾರದ ಸಕಾಲ ಸೇವೆಗಳ ಅಜರ್ಿಗಳನ್ನು ವಿಳಂಬಿಸದೇ ವಿಲೇವಾರಿ ಮಾಡಬೇಕು ಸಕಾಲ ಸೇವೆಗಳ ಬಗ್ಗ ಗ್ರಾ.ಪಂ ಡಾಟಾ ಎಂಟ್ರಿ ಆಪರೇಟರಗಳಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.