ಕಾಯಕನಿಷ್ಠೆ ಬೆಳೆಸಿಕೊಂಡರೆ ಸಮಾಜದಲ್ಲಿ ಬಹು ಎತ್ತರಕ್ಕೆ ಬೆಳೆಯಬಹುದು

If you develop self-respect, you can grow very high in the society

ಕಾಯಕನಿಷ್ಠೆ ಬೆಳೆಸಿಕೊಂಡರೆ  ಸಮಾಜದಲ್ಲಿ ಬಹು  ಎತ್ತರಕ್ಕೆ ಬೆಳೆಯಬಹುದು

ಹೂವಿನಹಡಗಲಿ 06: ಪ್ರತಿಯೊಬ್ಬರು  ಜೀವನದಲ್ಲಿ ಶಿಸ್ತು ಧೃಡ ಸಂಕಲ್ಪ  ಗುರು ಹಿರಿಯರಲ್ಲಿ ನಮ್ರತೆ  ಕಾಯಕ ನಿಷ್ಠೆ ಬೆಳೆಸಿಕೊಂಡರೆ ಮಾತ್ರ ಸಮಾಜದಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯ ಎಂದು ಹಡಗಲಿ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಡಾ ಹಿರಿ ಶಾಂತವೀರ ಮಹಾಸ್ವಾಮಿಗಳು ಹೇಳಿದರು.  

   ಅವರು ಪಟ್ಟಣದ ಗವಿಸಿದ್ದೇಶ್ವರ ಮಠದಲ್ಲಿ  ಆಯೋಜಿಸಿದ್ದ 199ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಬಸವ ಸಂಸ್ಕೃತಿ ನಮ್ಮೆಲ್ಲರಿಗೂ ಜೀವಾಳ. ಆಧುನಿಕತೆ ನೆಪದಲ್ಲಿ ಸಂಸ್ಕೃತಿ ಮರೆತು ಜೀವನ ಹಾಳು ಮಾಡಿಕೊಳ್ಳುವ  ಬದಲು ಎಚ್ಚರಿಕೆ ವಹಿಸಬೇಕು. ಮಕ್ಕಳಲ್ಲಿ ಸಂಸ್ಕಾರವನ್ನು ರೂಪಿಸುವಲ್ಲಿ  ತಂದೆ ತಾಯಿ ಪಾತ್ರ ದೊಡ್ಡದು. ಶಿಕ್ಷಣ ಜೀವನವನ್ನು ಸಮೃದ್ಧ ಗೊಳಿಸಬೇಕು ವಿನ ಹಾಳು ಮಾಡುವಂತಾಗಾಬಾರದು. ಸಂಸ್ಕಾರ  ಶಿಕ್ಷಣ ದಾಸೋಹ ನೀಡುವ ನಿಟ್ಟಿನಲ್ಲಿ ಮಠ, ಮಾನ್ಯಗಳ ಕೊಡುಗೆ ಅಪಾರವಾದುದು ಎಂದರು. 

2025ನೇ ಸಾಲಿನ ಶ್ರೀಮಠದ ತೂಗು ಪಂಚಾಂಗ ಕ್ಯಾಲೆಂಡರ ಬಿಡುಗಡೆಗೆ ಮಾಡಲಾಯಿತು ಸಂತರ ವಿಚಾರ ಧಾರೆ ಕುರಿತು ಜಿಬಿಆರ್ ಕಾಲೇಜಿನ ಉಪನ್ಯಾಸಕಿ  ಬೀರಬ್ಬಿ ಶ್ವೇತಾ ಮಾತನಾಡಿದರು .ಸಮಾಜ ಸುಧಾರಣೆಯಲ್ಲಿ ಶಿವಶರಣೆಯರ ಕೊಡುಗೆ ಕುರಿತು ಉಪನ್ಯಾಸವನ್ನು ಶ್ರೀಮತಿ ಸುಭಾಷಿಣಿ ನೀಡಿದರು  

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಎ ಕೊಟ್ರಗೌಡ್ರು, ಭಾರತೀಯ ವೈದ್ಯರ ಸಂಘ ಅಧ್ಯಕ್ಷರಾದಡಾ.ಹೆಚ್‌.ಎಂ ವೀರೇಶ , ಪ್ರಾಧ್ಯಪಕರಾದ ಡಾ.ಸುರೇಶ್ ಬೂದನೂರು,  ಜೆ.ಸಿ.ಐ ಹೂವಿನಹಡಗಲಿ ರಾಯಲ್ ಅಧ್ಯಕ್ಷ ಕೋಡಿಹಳ್ಳಿ ವಿನಾಯಕ,    ಜಿ.ಸಿ.ಐ ಹೂವಿನಹಡಗಲಿ ರಾಯಲ್ ಕಾರ್ಯದರ್ಶಿ  ಹಿತೇಶ್ ಕುಮಾರ ಬಿ ಚೌಹ್ವಾಣ್  ಸೇರಿದಂತೆ ಇತರರಿದ್ದರು. ನಂತರ ಮಠದ ಭಕ್ತರಿಗೆ ಸೇವಾರ್ತಿಗಳಿಗೆ ಗೌರವಿಸಲಾಯಿತು. ಕುಮಾರಿ ಅಂಬಿಕಾ, ಉಪನ್ಯಾಸಕಿ ನಾಗವೇಣಿ, ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.