ಎಸ್‌.ಜಿ.ಬಿ.ಐ.ಟಿ ಯಲ್ಲಿ ಅಧ್ಯಾಪಕರ ತರಬೇತಿ ಕಾರ್ಯಾಗಾರ

ಎಸ್‌.ಜಿ.ಬಿ.ಐ.ಟಿ ಯಲ್ಲಿ ಅಧ್ಯಾಪಕರ ತರಬೇತಿ ಕಾರ್ಯಾಗಾರ  Teacher training workshop at SGBIT

ಲೋಕದರ್ಶನ ವರದಿ 

ಬೆಳಗಾವಿ 16: ನಗರದ ಎಸ್‌. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್ ,  ಸಿವಿಲ್ ಇಂಜಿನಿಯರಿಂಗ್ ವಿಭಾಗಗಳು, ಸ್ಟೀಮ್ ಹೆಚ್ ತರಬೇತಿ ಹಾಗೂ ಸಂಶೋಧನಾ ಪ್ರತಿಷ್ಠಾನ ಮತ್ತು ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಸಹಯೋಗದೊಂದಿಗೆ “ಸುಸ್ಥಿರ ಅಭಿವೃದ್ಧಿಗಾಗಿ ವಸ್ತುಗಳನ್ನು ಬಳಸಿಕೊಳ್ಳುವುದು ಹಿ ಒಂದು ಪ್ರಾಯೋಗಿಕ ವಿಧಾನ”ಎಂಬ  ವಿಷಯದ ಕುರಿತು ಆರು ದಿನಗಳ ರಾಷ್ಟ್ರೀಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು 2026 ರ ಮೇ 18 ರಿಂದ 23 ರವರೆಗೆ ಎಸ್‌.ಜಿ.ಬಿ.ಐ.ಟಿಯ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ.   

ಪರಮಪೂಜ್ಯ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಹಾಗೂ ಪರಮ ಪೂಜ್ಯಶ್ರೀ ಡಾ. ಅಲ್ಲಮಪ್ರಭು ಸ್ವಾಮೀಜಿಯವರ ಆಶೀರ್ವಾದದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಎಫ್‌.ಡಿ.ಪಿ ಕಾರ್ಯಾಗಾರವನ್ನು ಎಸ್‌.ಜಿ.ಬಿ.ಐ.ಟಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಎಪ್‌.ವಿ.ಮಾನ್ವಿಯವರು ಮತ್ತು ಪ್ರಾಂಶುಪಾಲರಾದ ಡಾ.ಬಿ.ಆರ್‌.ಪಟಗುಂದಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ.  

ಈ ಕಾರ್ಯಾಗಾರದ ಉದ್ದೇಶ ತಜ್ಞರ ಉಪನ್ಯಾಸಗಳು, ಪ್ರಾಯೋಗಿಕ ಅವಧಿಗಳು,ಪ್ರಾತ್ಯಕ್ಷಿಕೆಗಳು ಮತ್ತು ಸುಸ್ಥಿರ ಇಂಜಿನಿಯರಿಂಗ್ ಮತ್ತು ನಾವಿನ್ಯತೆಯ ಅನ್ವಯಗಳ ಕುರಿತು ಚರ್ಚೆಗಳನ್ನು ಒಳಗೊಂಡಿರುತ್ತದೆ.ಅಧ್ಯಾಪಕ ಸದಸ್ಯರು,ಸಂಶೋಧನಾ ವಿದ್ವಾಂಸರು,ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಉದ್ಯಮ ವೃತ್ತಿಪರರನ್ನು ಭಾಗವಹಿಸಲು ಆಹ್ವಾನಿಸಲಾಗಿದೆ.   ಈ ಕಾರ್ಯಾಗಾರವನ್ನು ಸಂಚಾಲಕರಾದ ಡಾ.ಸುಪಣ್ಣಾ ಶಿರಗುಪ್ಪೆ ಮತ್ತು ಡಾ. ಸಂತೋಷ ಚಿಕ್ಕಬಾಗೇವಾಡಿ ಹಾಗೂ ಸಂಯೋಜಕರಾದ ಪ್ರೋ.ಶರಣಬಸವ ಮಾರಿಹಾಳ ಮತ್ತು ಪ್ರೋ. ಸಂದೀಪ್ ಕುಲಕರ್ಣಿ ಅವರು ನಡೆಸಿಕೊಡಲಿದ್ದಾರೆ.  ಆಸಕ್ತರು ಈ ಕಾರ್ಯಾಗಾರದಲ್ಲಿ ಭಾಗಿಯಾಗಬೇಕೆಂದು ಎಸ್‌.ಜಿ.ಬಿ.ಐ.ಟಿ ಯ ಆಡಳಿತ ಮಂಡಳಿ ತಿಳಿಸುತ್ತಿದೆ.