ಪ್ಲೋರೋಸಿಸ್ ಕಾರ್ಯಕ್ರಮದ ತಾಲೂಕಾ ಮಟ್ಟದ ಸಭೆ

ಲೋಕದರ್ಶನ ವರದಿ

ವಿಜಯಪುರ 01:ಪ್ಲೋರೋಸಿಸ್ ಕಾರ್ಯಕ್ರಮದ ಕುರಿತು ವಿಜಯಪುರ ತಹಶೀಲ್ದಾರ ಶ್ರೀಮತಿ ಮೋಹನ್ಕುಮಾರ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ಜರುಗಿತು. 

ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಮೋಹನ ಕುಮಾರಿ ಅವರು ಮಾತನಾಡಿ, ಪ್ಲೋರೋಸಿಸ್ ತಡೆಗಟ್ಟಲು ಎಲ್ಲ ಅಧಿಕಾರಿಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. 

 ತಾಲೂಕಾ ಆರೋಗ್ಯ ಅಧಿಕಾರಿ ಡಾ. ಗುಂಡಬಾವಡಿ ಅವರು ಮಾತನಾಡಿ, ಪ್ಲೋರೋಸಿಸ್ ತಡೆಗಟ್ಟಲು ಕ್ಯಾಲ್ಸಿಯಂ ಇರುವ ಬೆಲ್ಲ, ನುಗ್ಗೇಕಾಯಿ ಮತ್ತು ಇ-ಅನ್ನಾಂಗ ಇರುವ ಮಳಕೆ, ಕಾಳು, ಹಸಿರು ತರಕಾರಿ, ವನಸ್ಪತಿಗಳು ಹಾಗೂ ಸಿ ಅನ್ನಾಂಗ ಇರುವ ಪಪ್ಪಾಯಿ, ನೆಲ್ಲಿಕಾಯಿ, ಲಿಂಬೆ, ಹುಣಸೆ, ಟೊಮ್ಯಾಟೋ ಆಹಾರದಲ್ಲಿ ಬಳಸಬೇಕು. ಕರಿ ಉಪ್ಪು, ಅಡಕಿ, ತಂಬಾಕುಗಳಲ್ಲಿ ಹೆಚ್ಚಿನ ಪ್ಲೋರೈಡ್ ಇರುವುದರಿಂದ ಇದರ ಸೇವನೆ ತ್ಯಜಿಸಬೇಕು ಎಂದು ಹೇಳಿದರು. 

ಒಂದು ವೇಳೆ ಕೊಳವೆ ಬಾವಿ ಅಥವಾ ಬಾವಿ ನೀರಿನಲ್ಲಿ ಪ್ರತಿ ಲೀಟರ್ ನೀರಿನಲ್ಲೂ 1.5 ಮಿ.ಗ್ರಾಂ ಪ್ಲೋರೈಡ್ ಇದ್ದಲ್ಲಿ ಹಾಗೂ ಅನೇಕ ಸಮಯದವರೆಗೆ ಅದೇ ನೀರನ್ನು ಕುಡಿಯಲು ಮತ್ತು ಅಡುಗೆಗೆ ಉಪಯೋಗಿಸದ್ದಲ್ಲಿ ಅದರಿಂದಾಗಿ ಹಲ್ಲಿನಲ್ಲಿ, ಅಸ್ಥಿಪಂಜರದಲ್ಲಿ ಸಿಸ್ಟಮೆಟಿಕ್ ಪ್ಲೋರೋಸಿಸ್ ಉಂಟಾಗುತ್ತದೆ ಎಂದು ಹೇಳಿದರು. 

ತಾಲೂಕಾ ಆರೋಗ್ಯ ಅಧಿಕಾರಿ ಎನ್.ಆರ್.ಬಾಗವಾನ್ ಅವರು ಮಾತನಾಡಿ, ನಿಮ್ಮ ಸಮೀಪದಲ್ಲಿರುವ ಸಾರ್ವಜನಿಕ ಆರೋಗ್ಯ ಪ್ರಯೋಗಶಾಲೆಯಲ್ಲಿ ಕುಡಿಯುವ ನೀರಿನ್ನು ಪರೀಕ್ಷೆ ಮಾಡಿಸಬೇಕು.  ಕುಡಿಯುವ ನಿರೀನ ಮೂಲವನ್ನು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಮಾಡಿಬೇಕು. ಕೃಷಿ ಮತ್ತು ಇತರೆ ಕೆಲಸಗಳಿಗಾಗಿ ನದಿ, ಕಾಲುವೆ, ಕೊಳ್ಳಗಳು, ಅಥವಾ ಮೈಲ್ಮೈ ನೀರನ್ನು ಉಪಯೋಗಿಸಬೇಕು. 

ಪ್ಲೋರೋಸಿಸ್ ತಡೆಗಟ್ಟಲು ತಾಜಾ ತರಕಾರಿ, ಹಣ್ಣು, ಹಂಪಲುಗಳು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು. ಒಂದು ವೇಳೆ ತಮ್ಮಲ್ಲಿ ಈ ಕುರಿತು ಯಾವುದೇ ಸಂದೇಹ ಕಂಡು ಬಂದಲ್ಲಿ ಕೂಡಲೇ ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರನ್ನು ಸಂಪಕರ್ಿಸಬೇಕು. ನೀರು ಹಾಳಾಗಿರುವುದರಿಂದ ಬರವು ರೋಗಗಳನ್ನು ಆರಂಭದಲ್ಲೇ ಚಿಕಿತ್ಸೆ ಪಡೆಯುವುದರ ಮೂಲಕ ರೋಗವನ್ನು ಗುಣಪಡಿಸಬಹುದಾಗಿದ್ದು, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ  ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಹೇಳಿದರು.