2023.24 ರ ಯುವನಿಧಿ ಯೋಜನೆಯ ನೊಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ ತಾಲೂಕು ಇ ಓ ಕೆ.ಎಂ.ಮಲ್ಲಿಕಾರ್ಜುನ

Taluk EO K.M. Mallikarjuna initiated the registration process of Yuvanidi Yojana for 2023.24

2023.24 ರ ಯುವನಿಧಿ ಯೋಜನೆಯ ನೊಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ ತಾಲೂಕು ಇ ಓ ಕೆ.ಎಂ.ಮಲ್ಲಿಕಾರ್ಜುನ

ಬ್ಯಾಡಗಿ 16: ಕಾಂಗ್ರಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೇಯ ಯುವನಿಧಿ ಯೋಜನೆಯ 2024.25 ರ ನೊಂದಣಿ ಪ್ರಕ್ರಿಯೆಯ ಬಿತ್ತಿ ಪತ್ರವನ್ನು ಇಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಮಲ್ಲಿಕಾರ್ಜುನ ಅವರುತಾಲೂಕು ಪಂಚಾಯತ್ ಆವರಣದಲ್ಲಿ ಬಿಡುಗಡೆ ಮಾಡಲಾಯಿತು ಈ ವೇಳೆ ಮಾತನಾಡಿದ ಅವರು ಪ್ರತಿ ಯೊಬ್ಬ ಯುವ  ನಿರುದ್ಯೋಗಿ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. 

ಈ ವೇಳೆ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಂಭನಗೌಡ ಪಾಟೀಲ ಮಾತನಾಡಿ ಯುವ ನಿಧಿ ಯೋಜನೆಯನ್ನು ಭತ್ಯೆ ಪಡೆಯಲು ಮಾನದಂಡಗಳು ರೂಪಿಸಿದ್ದು 2023.24 ರಲ್ಲಿ ಪದವಿ.ಸ್ನಾತಕೋತ್ತರ ಪದವಿ.ಡಿಪ್ಲೋಮಾ ಪದವಿ ಉತ್ತಿರ್ಣರಾದ ವಿಧ್ಯಾರ್ಥಿಗಳು ಹಾಗೂ ಪದವಿ ಮುಗಿಸಿದ ನಂತರ ಕನಿಷ್ಠ ಆರು ತಿಂಗಳ ವರೆಗೆ ಸರ್ಕಾರಿ.ಖಾಸಗಿ ಉದ್ಯೋಗ ಹೊಂದಿಲ್ಲದವರು.ಸ್ವಯಂ ಉದ್ಯೋಗ ಹೊಂದಿಲ್ಲದವರು.ಪದವಿ ಮುಗಿಸಿ ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು.ಕರ್ನಾಟಕದಲ್ಲಿ ವಾಸವಾಗಿರುವವರು ಕನಿಷ್ಠ 6 ವರ್ಷಗಳ ವರೆಗೆ ಯಾವುದೇ ಪದವಿ ಅಧ್ಯಯನ ಮಾಡಿದವರು ಪ್ರತಿ ಯೊಬ್ಬ ನೀರುದ್ಯೋಗಿ ಯುವಕರು ತಮ್ಮ ದಾಖಲಾತಿಗಳನ್ನು ಪ್ರತಿ ತಿಂಗಳು ದಿನಾಂಕ 1. ರಿಂದ 25 ರ ವರೆಗೆ ಸೇವಾ ಸಿಂಧು ಪೊರ್ಟಲ್ ಮೂಲಕ ಹಾಗೂ ಕರ್ನಾಟಕ ಒನ್‌.ಗ್ರಾಮ್ ಒನ್ ಹಾಗೂ ಬಾಪೂಜಿ ಸೇವಾ ಕೆಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಿ ನಮ್ಮ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಯನ್ನು ಪಡೆದುಕೊಳ್ಳಲು ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಸದಸ್ಯರಾದ ಪ್ರಕಾಶ ಹೀರೆಮಠ.ರಾಮಪ್ಪ ಕೋಟಿಯವರ.ಪಿರಾಂಬಿ ವರ್ದಿ.ಸುಶೀಲಾ ಲಮಾಣಿ.ಇಮಾಮಸಾಬ್ ಓಲೇಕಾರ .ಹೈದರಲಿ ಬೆಂಗಳೂರಿ.ವೀರೆಶ ಲಮಾಣಿ.ಸುರೇಶ ಬಂಗಾರಿ.ವೀರಭದ್ರಗೌಡ ಪಾಟೀಲ .ಅಲ್ಹಾದ್ ಅಹ್ಮದ್ ಹಾವೇರಿ ರಾಜಪ್ಪ ಅಂಗರಗಟ್ಟಿ.ಗುಡ್ಡಪ್ಪ ಚಿಕ್ಕಣ್ಣನವರ.ಗ್ಯಾರಂಟಿ ಯೋಜನೆಗಳು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.