ರಾಯಚೂರು ಜಿಲ್ಲಾ ಸಿದ್ದರಾಜ್ಯಾಧ್ಯಕ್ಷರಿಂದ ಏಕಪಕ್ಷೀಯ ನೇಮಕಾತಿ ಆದೇಶಕ್ಕೆ ತೀವ್ರ ಖಂಡನೆ
Raichur District Siddaramaiah President strongly condemns unilateral appointment order
ರಾಯಚೂರು 09 : ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಸದಸ್ಯರ ಅಭಿಪ್ರಾಯ ಕಡೆಗಣನೆ ಆರೋಪ ಪ್ರಜಾಪ್ರಭುತ್ವ ವಿಧಾನದಲ್ಲಿ ಹೊಸ ಜಿಲ್ಲಾ ಸಮಿತಿ ಆಯ್ಕೆ ಮಾಡಲು ಆಗ್ರಹ, ಛಲವಾದಿ ಮಹಾಸಭಾ ರಾಯಚೂರು ಜಿಲ್ಲಾ ಸಮಿತಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ. ಸಂಘಟನೆಯ ಬೈಲಾ ನಿಯಮಗಳು ಹಾಗೂ ಸದಸ್ಯರ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಸಮಿತಿಯವರು ತಿಳಿಸಿದ್ದಾರೆ. ಸುಮಾರು ಆರು ತಿಂಗಳ ಹಿಂದೆಯೇ ರಾಜ್ಯಾಧ್ಯಕ್ಷರಾದ ವಾಣಿ ಶಿವರಾಂ ಅವರಿಗೆ ರಾಯಚೂರು ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ಸಮುದಾಯದ ಹಿರಿಯರು ಹಾಗೂ ಮಹಾಸಭಾದ ಸದಸ್ಯತ್ವ ಹೊಂದಿರುವವರ ಸಾಮಾನ್ಯ ಸಭೆ ನಡೆಸಿ, ಅವರ ಅಭಿಪ್ರಾಯದ ಮೇರೆಗೆ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಲಾಗಿತ್ತು.
ಆದರೆ ಆ ಮನವಿಗೆ ಸ್ಪಂದನೆ ನೀಡದೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಯಾವುದೇ ಬದಲಾವಣೆ ಮಾಡದೇ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಪದಾಧಿಕಾರಿಗಳ ಬದಲಾವಣೆ ಮಾಡಲು ಏಕಪಕ್ಷೀಯ ಆದೇಶ ನೀಡಿರುವುದನ್ನು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.ಜಿಲ್ಲೆಯಲ್ಲಿ ತುರ್ತು ಸಂದರ್ಭವು ಇಲ್ಲ, ತಕ್ಷಣವೇ ಜಿಲ್ಲಾ ಸಮಿತಿ ನೇಮಕ ಮಾಡದಿದ್ದಲ್ಲಿ ದೊಡ್ಡ ಅನಾಹುತ ಆಗುತ್ತದೆ ಅನ್ನೋದ ಇಲ್ಲ, ಈಗಿರುವ ಜಿಲ್ಲಾ ಸಮಿತಿ ಸಂಘಟನಾ ವಿರೋಧಿ ಚಟುವಟಿಕೆ ನಡೆಸಿಲ್ಲ ರಾಜ್ಯಾಧ್ಯಕ್ಷರು ಯಾಕೆ ಇಷ್ಟೊಂದು ಇಂಟರೆಸ್ಟ್ ತೋರಿಸುತ್ತಿದ್ದಾರೆಂದು ತಿಳಿಯುತ್ತಿಲ್ಲ. ಈ ಅವಸರ ಗಮನಿಸಿದರೆ ಏನೋ ಒಂದು ಡೀಲ್ ಕುದರಿಸಿ ಆದೇಶ ಮಾಡಿದ್ದಾರೆಯೇ? ಎಂಬ ಅನುಮಾನ ಜಿಲ್ಲೆಯ ಛಲವಾದಿ ಮಹಾಸಭಾದ ಸದಸ್ಯತ್ವ ಪಡೆದವರ ಅಭಿಪ್ರಾಯವಾಗಿದೆ. ಸಮಾಜದ ಸಂಘಟನೆಗಳಲ್ಲಿ ನೇಮಕಾತಿ ಆದೇಶಗಳ ಮೂಲಕ ಪದಾಧಿಕಾರಿಗಳನ್ನು ನೇಮಿಸುವುದು ಸರಿಯಾದ ಕ್ರಮವಲ್ಲ.
ಸಂಘಟನೆಯ ಬೈಲಾ ನಿಯಮಗಳ ಪ್ರಕಾರ ಸದಸ್ಯರ ಸಾಮಾನ್ಯ ಸಭೆ ಅಥವಾ ಚುನಾವಣೆ ಮೂಲಕವೇ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು. ಆದರೆ “ನಾನೇ ಹೇಳುತ್ತೇನೆ, ನೀವು ಕೇಳಬೇಕು” ಎಂಬ ರೀತಿಯ ಸರ್ವಾಧಿಕಾರಿ ಧೋರಣೆ ಸಂಘಟನೆಯ ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ.ರಾಯಚೂರು ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ಜನರು ರೂ. 2100 ನೀಡಿ ಮಹಾಸಭಾದ ಸದಸ್ಯತ್ವ ಪಡೆದಿದ್ದಾರೆ. ಆ ಸದಸ್ಯರ ಹಕ್ಕು ಮತ್ತು ಅಭಿಪ್ರಾಯಗಳನ್ನು ಕಡೆಗಣಿಸಿ ಏಕಪಕ್ಷೀಯವಾಗಿ ಆದೇಶ ಹೊರಡಿಸುವುದು ಅವರ ಹಕ್ಕುಗಳನ್ನು ಕಿತ್ತುಕೊಳ್ಳುವ ಕ್ರಮವಾಗಿದ್ದು, ಇದು ಬೈಲಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ 07.12.2025 ರಂದು ರಾಯಚೂರು ನಗರದ ಕನ್ನಡ ಭವನದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಖಜಾಂಚಿ ಮೈಕೋ ನಾಗರಾಜ್ ಮತ್ತು ರಾಜ್ಯ ಸಮಿತಿಯ ಸಲಹೆಗಾರರು ಕೆಂಪರಾಜು ಅವರ ನೇತೃತ್ವದ ಸಭೆಯ ಬಗ್ಗೆ ಮಾಹಿತಿ ಪಡೆದು ದಿನಾಂಕ : 27.12.2025 ರಂದು ನಡೆದ ರಾಜ್ಯ ಸಮಿತಿ ಸಭೆಯಲ್ಲಿ ರಾಯಚೂರು ಜಿಲ್ಲೆಯ ಸದಸ್ಯರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ನೋಟಿಸ್ ನೀಡಿ, ಸಂಪೂರ್ಣ ರಾಜ್ಯ ಸಮಿತಿ ಸಮ್ಮುಖದಲ್ಲಿ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಈಗ ಆ ತೀರ್ಮಾನಗಳನ್ನು ಕಡೆಗಣಿಸಿ ರಾಜ್ಯಾಧ್ಯಕ್ಷರು ಏಕಪಕ್ಷೀಯವಾಗಿ ಆದೇಶ ಹೊರಡಿಸಿರುವುದು ಅತ್ಯಂತ ಖಂಡನೀಯ ಎಂದು ಜಿಲ್ಲಾ ಸಮಿತಿ ತಿಳಿಸಿದೆ.ಮಹಾಸಭಾದ ಸದಸ್ಯತ್ವ ಹೊಂದಿರುವವರು ಜಿಲ್ಲಾ ಸಮಿತಿ ಆಯ್ಕೆ ಮಾಡಲು ಅರ್ಹರಲ್ಲವೇ? ಸದಸ್ಯತ್ವವನ್ನು ಕೇವಲ ಹಣ ಸಂಗ್ರಹಿಸಲು ಮಾತ್ರ ಬಳಸಲಾಗುತ್ತಿದೆಯೇ?
ಎಂಬ ಪ್ರಶ್ನೆಗಳನ್ನೂ ಜಿಲ್ಲಾ ಸಮಿತಿ ಎತ್ತಿದೆ.ಇದಲ್ಲದೆ, ಸಮಾಜದ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವ ಬದಲು ಎಲ್ಲರನ್ನು ಒಂದಾಗಿ ಸೇರಿಸುವ ಕೆಲಸ ಮಾಡಬೇಕಾದ ಹೊಣೆಗಾರಿಕೆ ರಾಜ್ಯಾಧ್ಯಕ್ಷರದ್ದು ಎಂದು ಹೇಳಲಾಗಿದೆ. ಜಿಲ್ಲೆಯಲ್ಲಿ ಸಮುದಾಯದ ನಡುವೆ ಅನಾವಶ್ಯಕ ಗೊಂದಲ ಸೃಷ್ಟಿಸುವ ಕ್ರಮವನ್ನು ನಿಲ್ಲಿಸಿ, ಬೈಲಾ ನಿಯಮಗಳ ಪ್ರಕಾರ ಸದಸ್ಯರ ಸಾಮಾನ್ಯ ಸಭೆ ನಡೆಸಿ ಪ್ರಜಾಪ್ರಭುತ್ವ ರೀತಿಯಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು ಎಂದು ಜಿಲ್ಲಾ ಸಮಿತಿ ಆಗ್ರಹಿಸಿದೆ. ಇಲ್ಲವಾದಲ್ಲಿ ಸಂಘಟನೆಯೊಳಗಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಮಾಜದ ಮುಂದೆ ಸತ್ಯಾಂಶಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.ಕೆ.ನಾಗಲಿಂಗಸ್ವಾಮಿ ಜಿಲ್ಲಾಧ್ಯಕ್ಷರು ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ರಾಯಚೂರುಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮಂಚಾಲ್, ಜಿಲ್ಲಾ ಉಪಾಧ್ಯಕ್ಷರಾದ ವಿಜಯ್ ಗಾರ್ಲೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿಧರ್, ಜಿಲ್ಲಾ ಖಜಾಂಚಿ ತಿಮ್ಮಗುರು ಹಾಗೂ ಬಾಬು, ಅಶೋಕ್ ಅರೋಲಿಕರ್, ಉಮೇಶ ಸರ್ತಿಗೇರಿ, ಮಹೇಶ್, ನಾಗೇಶ್ ಸೇರಿದಂತೆ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 