ಬೈಲಹೊಂಗಲ
30: ಮಲಪ್ರಭಾ ನದಿಗೆ ಈ ಭಾಗದ ರೈತ
ಸಮುದಾಯದಿಂದ ಪ್ರಗತಿಪರ ರೈತರಾದ ಸುರೇಶ ರೇಣುಕಾ ಹೋಳಿ ದಂಪತಿಗಳಿಂದ ಮಂಗಳವಾರ
ನಯಾನಗರ ಸಮೀಪ ಬಾಗಿನ ಅರ್ಪಣೆ
ಮಾಡಲಾಯಿತು.
ಬಾಗಿನ ಅರ್ಪಣೆಯ ಮೊದಲು ವೇ.ಮೂ ವಿಶ್ವನಾಥ
ಹಿರೇಮಠ(ಬಾಳೇಕುಂದ್ರಿ) ಶಾಸ್ತ್ರೋಕ್ತವಾಗಿ
ಕಳಸ ಮತ್ತು ಪೂಜಾ ಕಂಕೈರ್ಯಗಳನ್ನು ನೆರವೇರಿಸಿದರು.
ಬಾಗಿನ ಅರ್ಪಣ ಕಾರ್ಯಕ್ರಮದಲ್ಲಿ ಸುಮಾರು 15 ಹಳ್ಳಿಗಳಿಂದ ನೂರಾರು ರೈತರು, ಮಹಿಳಾ ರೈತರು ಆಗಮಿಸಿದ್ದರು.
ಬಾಗಿನ ಅರ್ಪಣೆ ನಂತರ ರೈತನ್ನುದ್ದೇಶಿಸಿ ಎಪಿಎಂಸಿ
ಸದಸ್ಯ ಎಫ್.ಎಸ್.ಸಿದ್ದನಗೌಡರ
ಮಾತನಾಡಿ, 32 ಟಿಎಂಸಿ
ಸಂಗ್ರಹ ಶಕ್ತಿ ಹೊಂದಿರುವ ಮಲಪ್ರಭಾ ನದಿಯಲ್ಲಿ ಸದ್ಯ 20ರಿಂದ 22 ಟಿಎಂಸಿ ನೀರು ಸಂಗ್ರಹವಾಗಿದೆ. ಈ
ಭಾಗದ ಅನೇಕ ರೈತರ ಜಮೀನುಗಳು
ಮಲಪ್ರಭೆಯ ನದಿಯ ಒಡಲಿನಲ್ಲಿ ಮುಳುಗಡೆಯಾಗಿವೆ.
ಇಷ್ಟು ನೀರಿನ ಸಂಗ್ರಹ ವಿದ್ದರೂ ಆಣೆಕಟ್ಟಿನ ಕೆಳಭಾಗದ ರೈತರಿಗೆ ಮಾತ್ರ ಹೆಚ್ಚಿನ ನೀರಾವರಿಗೆ ಅನುಕೂಲವಾಗಿದೆ ಎಂದರು.
ಅಚ್ಚುಕಟ್ಟು ಪ್ರದೇಶದ ಏತ ನೀರಾವರಿ ಕಾಲುವೆಗಳು ಹೂಳು
ತುಂಬಿ ಮುಚ್ಚಿ ಹೋಗಿವೆ. ಇವುಗಳ ದುರಸ್ತಿ ಕೇವಲ ಕಾಗದಲ್ಲಿ ಮಾತ್ರ
ಆಗುತ್ತಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ಸಂಬಂದಿಸಿದ
ಅಧಿಕಾರಿಗಳು ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು
ತಕ್ಷಣ ಕಾಲುವೆಗಳ ಹೂಳು ಎತ್ತಿ ನೀರು
ಹರಿಸುವತ್ತ ಗಮನ ಹರಿಸಬೇಕೆಂದರು.
ಭಾರತೀಯ ಕೃಷಿಕ ಸಮಾಜದ ರಾಜ್ಯ ಕಾರ್ಯದಶರ್ಿ ಮಹಾಂತೇಶ ಕಮತ ಮಾತನಾಡಿ, ಮಲಪ್ರಭಾ
ನದಿಯ ದಡದಲ್ಲಿಯ ಹಳ್ಳಿಗಳು ಮತ್ತು ಬೈಲಹೊಂಗಲ ಪಟ್ಟಣಕ್ಕೆ ಕುಡಿಯುವ ನೀರಿನ ಸಂಗ್ರಹಕ್ಕಾಗಿ ಮಾಟೋಳ್ಳಿ, ಹಿಟ್ಟಣಗಿ ಮದ್ಯದಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿಮರ್ಾಣವಾದಾಗ
ಮಾತ್ರ ಅಚ್ಚುಕಟ್ಟು ಪ್ರದೇಶದ ಭೂಮಿ ಕಳೆದುಕೊಂಡ ರೈತರಿಗೆ
ಅಳಿದುಳಿದ ಭೂಮಿಗೆ ನೀರಾವರಿ ಕಲ್ಪಸಿದಂತಾಗುತ್ತದೆ ಎಂದರು.
ಭೂಮಿ
ಕಳೆದುಕೊಂಡ ರೈತರು ಆಗಿನ ಬಜಾರ್ ದರದ
ಪ್ರಕಾರ ಕಡಿಮೆ ಹಣ ಪಡೆದುಕೊಂಡು ಫಲವತ್ತಾದ
ಭೂಮಿ ಕಳೆದುಕೊಂಡಿದ್ದಾರೆ. ನದಿ ಸಮೀಪದಲ್ಲಿದ್ದರೂ ಉಳಿದ
ಭೂಮಿಗೆ ಸರಿಯಾದ ನೀರಾವರಿ ಇಲ್ಲದೆ ರೈತರು ಆಥರ್ಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗದಲ್ಲಿ ನೀರಾವರಿಯ
ಯೋಜನೆಗಳು ಜಾರಿಯಾಗಬೇಕು. ನದಿಯ ಹೂಳು ಎತ್ತಲು
ಸಕರ್ಾರ ಅನುಮತಿ ನೀಡಬೇಕು. ಚಾಲ್ತಿಯಲ್ಲಿದ್ದ ಏತ ನೀರಾವರಿ ಜಾಕವೆಲ್ಗಳಿಗೆ
ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಿ, ಕಾಲುವೆಗಳ ದುರಸ್ಥಿಗೊಳಿಸಿ ನೀರಾವರಿಗೆ ಆದ್ಯತೆ ನೀಡಬೇಕೆಂದರು.
ಅನಸೂಯಾ ಬಾಳಿಕಾಯಿ, ಮಲ್ಲವ್ವ ಬುಳ್ಳಿ, ಪಾರವ್ವ ಕರಡಿಗುದ್ದಿ, ಸುಮಿತ್ರಾ ಶ್ರೀಪತಿ ಪಠಾಣಿ, ವಿಠ್ಠಲ ವಕ್ಕುಂದ, ಬಸವರಾಜ ಬೂದಿಹಾಳ, ಮಂಜು ಬರಮನ್ನವರ, ಬಸವರಾಜ
ದುಗ್ಗಾಣಿ, ಈರಣ್ಣ ಅಂಗಡಿ, ಮಂಜುನಾಥ ಕಾರಿಮನಿ, ಉಳವಪ್ಪ ಕಲಬಾಂವಿ, ಶಿವಪ್ಪ ಹೋಳಿ, ಸೋಮಪ್ಪ ಬುಳ್ಳಿ, ಅಣ್ಣಪ್ಪ
ಯಕ್ಕುಂಡಿ, ಅಕ್ಬರ ರಪಾಯಿ, ಈರಣ್ಣ ಹುಬ್ಬಳ್ಳಿ, ರಾಚಯ್ಯಾ ಕಪರ್ೂರಮಠ, ಬಸವರಾಜ ಬಾಳಿಕಾಯಿ, ಗುರಪಾದಯ್ಯ
ಮರಕುಂಬಿಮಠ, ಹೊಸೂರ, ಕೊರವಿಕೊಪ್ಪ, ಇಂಗಳಗಿ, ಬುಡರಕಟ್ಟಿ, ಹಿರೇಕೊಪ್ಪ, ಮಳಗಲಿ, ಬೆಳವಡಿ, ಬೈಲಹೊಂಗಲ ಮೊದಲಾದ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.