ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಸುರೇಶ್ ಕುಮಾರ್

ಬೆಂಗಳೂರು, ಮಾ.23,ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ಸೋಮವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ , ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಏರ್ಪಡಿಸಿರುವ ಅಗತ್ಯ ವ್ಯವಸ್ಥೆಯನ್ನು ಪರಿಶೀಲಿಸಿದರು."ನಾನು ಗಗನಯಾತ್ರಿಗಳ (ಅಸ್ಟ್ರೋನಾಟ್) ರೀತಿಯ ಪೂರ್ಣ ರಕ್ಷಾ ಕವಚ ಧರಿಸಿಕೊಂಡಾಗ, ಅದನ್ನು ದೀರ್ಘ ಕಾಲ ಧರಿಸಿರಲೇಬೇಕಾದ ವೈದ್ಯರು ಮತ್ತು ದಾದಿಯರ ಪರಿಸ್ಥಿತಿ ಎಷ್ಟು ಕಷ್ಟವಿದೆ ಎಂಬ ಅನುಭವವಾಯಿತು" ಎಂದು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.