ರಂಗನಾಯಕ ಸಾಗರ ಜಲಾಶಯಕ್ಕೆ ಗೋದಾವರಿ ನದಿ ನೀರು ಯಶಸ್ವೀ ಹರಿವು

ಸಿದ್ದಿಪೇಟೆ, ಏಪ್ರಿಲ್ 24, ತೆಲಂಗಾಣದ ಕಾಳೇಶ್ವರಂ ಏತ ನೀರಾವರಿ ಯೋಜನೆಯ (ಕೆಎಲ್‌ಐಪಿ) ಮತ್ತೊಂದು ಮೈಲಿಗಲ್ಲಿನಲ್ಲಿ  ಗೋದಾವರಿ ನದಿ ನೀರನ್ನು 3,000 ದಶಲಕ್ಷ ಘನ ಅಡಿ ನೀರು ಸಂಗ್ರಹ ಸಾಮರ್ಥ್ಯದ ರಂಗನಾಯಕ ಸಾಗರ ಜಲಾಶಯಕ್ಕೆ ಗುರುವಾರ ಯಶಸ್ವಿಯಾಗಿ ಬಿಡುಗಡೆ ಮಾಡಲಾಗಿದೆ.ಗೋದಾವರಿ ನೀರನ್ನು ಜಲಾಶಯಕ್ಕೆ ಬಿಡುಗಡೆ ಮಾಡಲು ಅಳವಡಿಸಲಾಗಿರುವ ನಾಲ್ಕು ಪಂಪ್‌ಗಳ ಪೈಕಿ ಒಂದಕ್ಕೆ ಸ್ವಿಚ್‍ ಆನ್‍ ಮಾಡುವ ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ ಟಿ ರಾಮರಾವ್ ಮತ್ತು ಹಣಕಾಸು ಸಚಿವ ಟಿ.ಹರೀಶ್ ರಾವ್ ಅವರು ಯೋಜನೆಯನ್ನು ಔಪಚಾರಿಕವಾಗಿ ಉದ್ಘಾಟಿಸಿದರು.463 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸಿದ್ದಿಪೇಟೆ ಜಿಲ್ಲೆಯ ಚಿನ್ನಕೋಡೂರ್ ಮಂಡಲದ ಚಂದಲಾಪುರ ಗ್ರಾಮದ ಬಳಿ ನಿರ್ಮಿಸಲಾಗಿರುವ ಜಲಾಶಯ ಸುಮಾರು 1.10 ಲಕ್ಷ ಎಕರೆಗಳಿಗೆ ನೀರು ಒದಗಿಸಲಿದ್ದು, ಸಿದ್ದಿಪೇಟೆ ಮತ್ತು ರಾಜನ್ನ ಸಿರ್ಸಿಲ್ಲಾ ಜಿಲ್ಲೆಗಳ ನೀರಿನ ಅವಶ್ಯಕತೆಗಳನ್ನು ಪೂರೈಸಲಿದೆ.  60 ವರ್ಷಗಳ ಹಿಂದಿನ ಕನಸಾದ ರಂಗನಾಯಕ ಸಾಗರ ಯೋಜನೆ ಇದೀಗ ನಸಾಗಿದ್ದು, ಯೋಜನೆಗಾಗಿ ತಮ್ಮ ಜಮೀನನ್ನು ಬಿಟ್ಟುಕೊಟ್ಟ ರೈತರಿಗೆ ಸಚಿವರು ಧನ್ಯವಾದ ಅರ್ಪಿಸಿದರು.
ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ರಾಜ್ಯ ಸರ್ಕಾರ ಪರಿಹಾರವನ್ನು ನೀಡಿದೆ ಎಂದು ಅವರು ಹೇಳಿದರು.
ಈ ಮಧ್ಯೆ, ರಂಗನಾಯಕ ಸಾಗರ ಜಲಾಶಯದಿಂದ ಕೊಂಡಪೋಚಮ್ಮ ಸಾಗರ ಜಲಾಶಯಕ್ಕೆ ನೀರು ಪೂರೈಸಲು ವಿದ್ಯುತ್ ಇಲಾಖೆ ಮಾಡುತ್ತಿರುವ ವ್ಯವಸ್ಥೆಗಳ ಬಗ್ಗೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸಂತಸ ವ್ಯಕ್ತಪಡಿಸಿದ್ದಾರೆ.ಇದಕ್ಕೂ ಮೊದಲು ಸಚಿವರು ಇಲ್ಲಿನ ರಂಗನಾಯಕ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಜಲಾಶಯದ ಅಚ್ಚುಕಟ್ಟು 8.65 ಕಿ.ಮೀ ಉದ್ದವಿದ್ದು, ಅತಿ ಎತ್ತರದ  ಹಂತದಲ್ಲಿ 32.4 ಮೀಟರ್ ಎತ್ತರವನ್ನು ಇದು ಹೊಂದಿರುತ್ತದೆ. ಅಚ್ಚುಕಟ್ಟು ಆರು ಮೀಟರ್ ಅಗಲವಿದ್ದರೆ, ನೆಲ ಮಟ್ಟದಲ್ಲಿ  ಅದು 196 ಮೀಟರ್ ಅಗಲವಾಗಿರುತ್ತದೆ.
ರಂಗನಾಯಕ ಸಾಗರ ದೊಂದಿಗೆ ಕೊಮುರವೆಲ್ಲಿ ಮಲ್ಲನ ಮತ್ತು ಕೊಂಡ ಪೊಚಮಮ್ಮ ಜಲಾಶಯಗಳು ಸಿದ್ದಿಪೇಟೆ ಮತ್ತು ಮೇಡಕ್ ಜಿಲ್ಲೆಗೆ ನೀರಾವರಿ ಒದಗಿಸುವುದಲ್ಲದೆ ಜನರಿಗೆ ಕುಡಿಯುವ ನೀರನ್ನು ಸಹ ಪೂರೈಸಲಿವೆ. ರಂಗನಾಯಕ ಸಾಗರ  ಜಲಾಶಯ, ಕಾಲೇಶ್ವರಂನಿಂದ  ಮಾನೇರು ಯೋಜನೆ ಮಾರ್ಗವಾಗಿ ನೀರು ಪಡೆಯುತ್ತದೆ. ಇಲ್ಲಿಂದ ಕೊಮುರವೆಲ್ಲಿ ಮಲ್ಲಾನಾಗೆ ಮತ್ತು ನಂತರ ಕೊಂಡ ಪೊಚಮ್ಮ ಜಲಾಶಯಗಳಿಗೆ ನೀರು ಹರಿಯುತ್ತದೆ.ನೀರಾವರಿ ಮತ್ತು ವಿದ್ಯುತ್ ಇಲಾಖೆಗಳು ಎಲ್ಲಾ ನಾಲ್ಕು ಪಂಪ್‌ಗಳನ್ನು ಅಳವಡಿಸಿವೆ. ಪ್ರತಿಯೊಂದು ಪಂಪ್‍ 135 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿದ್ದು,  24 ಗಂಟೆಗಳಲ್ಲಿ 0.25 ಟಿಎಂಸಿಎಫ್ ನೀರನ್ನು ನದಿಯಿಂದ ಕಾಲುವೆಗೆ ಎತ್ತುತ್ತವೆ.