ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಯಿಸುವ ಸಾಮಥ್ರ್ಯ ವಿದ್ಯಾರ್ಥಿಗಳು ಹೊಂದಬೇಕು: ಸಚಿವ ಪಾಟೀಲ

ಗದಗ 15: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ರಾಜ್ಯ ಸರ್ಕಾರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ವಿದ್ಯಾರ್ಥಿಗಳಿಗೆ  ಸಕಲ ಸೌಲಭ್ಯ ಒದಗಿಸಲು ಅಪಾರ ಹಣ ವೆಚ್ಚಮಾಡುತ್ತಿದೆ. ಎಂದು ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು ನುಡಿದರು.

     ಗದಗ ಬೆಟಗೇರಿ ನಗರದ ನಾಗಸಮುದ್ರ ರಸ್ತೆಯಲ್ಲಿನ ಸರ್ಕಾರಿ   ಪ್ರಥಮ ದರ್ಜೆ  ಕಾಲೇಜು ಅವರಣದಲ್ಲಿ 1.76 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 6 ಹೆಚ್ಚುವರಿ ಕೊಠಡಿಗಳ ಹಾಗೂ ಪ್ರಯೋಗಾಲಯದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಶಿಕ್ಷಣ ಸೌಲಭ್ಯಗಳಿಗೆ, ಪ್ರತಿಯಾಗಿ ವಿದ್ಯಾರ್ಥಿಗಳು ಉತ್ತಮ ಪ್ರಜೆ, ಜನಪ್ರತಿನಿಧಿ, ಉದ್ಯೋಗವಂತ ಅಥವಾ ಉದ್ಯೋಗ ನೀಡುವ ಸಾಮಥ್ರ್ಯ ಹೊಂದುವದು ದೇಶಕ್ಕೆ ನೀಡುವ ಅತ್ಯತ್ತಮ ಕೊಡುಗೆಯಾಗಿದೆ. ಪಠ್ಯ ಗಿಳಿಪಾಠವಾಗದಂತೆ ಜೀವನದ ಕೌಶಲ್ಯದ ಬೆಳವಣಿಗೆಗೆ ಒತ್ತು ನೀಡುವ ಹಾಗೂ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿ ಕುರಿತು ಜಾಗೃತಿಯೂ ಸೇರಿದಂತೆ  ಪಠ್ಯೇತರ ಚಟುವಟಿಕಗಳಿಗೂ ಉತ್ತೇಜನ ನೀಡುವಂತೆ ಇಂದಿನ ಶಿಕ್ಷಕರು, ಪ್ರಾಧ್ಯಾಪಕರು ಕಾರ್ಯನಿರ್ವಹಿಸಬೇಕು ಎಂದು ಸಚಿವ ಸಿ.ಸಿ.ಪಾಟೀಲ ಅಭಿಪ್ರಾಯಪಟ್ಟರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ ದೇಶದಲ್ಲಿರುವ 40 ಸಾವಿರ ಕಾಲೇಜುಗಳಲ್ಲಿ ಶೇ.20ಕ್ಕೂ ಹೆಚ್ಚಿನ ಕಾಲೇಜುಗಳಲ್ಲಿ 100ಕ್ಕೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಆದರೆ ಗದಗ ಸರ್ಕಾರಿ  ಕಾಲೇಜಿನಲ್ಲಿ 132 ಸ್ನಾತಕೋತ್ರ, 431 ಪದವಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂದಿನ ದೇಶದ ಶಿಕ್ಷಣ ವ್ಯವಸ್ಥೆಯ ಸಮಗ್ರ ಬದಲಾವಣೆ ಮೂಲಕ ಗುಣಾತ್ಮಕ ಮಟ್ಟ ಹೆಚ್ಚಿಸಲು ಕಸ್ತೂರಿ ರಂಗನ್ ನೇತೃತ್ವದ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಈಗ ಸಾರ್ವಜನಿಕವಾಗಿ ಪ್ರಸಿದ್ದಿಸಲಾಗಿದೆ. ಶಿಕ್ಷಕರು, ಪಾಲಕರು, ಸಾರ್ವಜನಿಕರು ಇದನ್ನು ಅಬ್ಯಸಿಸಿ ಅಗತ್ಯದ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದರು.

     ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹೆಚ್ಚಿನ ಪ್ರಯತ್ನಗಳು ನಡೆಸುವದು ಅಗತ್ಯವಾಗಿದೆ. ಈ ಕುರಿತು ಸಕರ್ಾರ ಅಧ್ಯನ ಕೂಡಾ ನಡೆಸುವ ಅಗತ್ಯವಿದೆ. ಸಕರ್ಾರಿ ಕಾಲೇಜುಗಳಲ್ಲಿ ಪ್ರಾಧ್ಯಪಕರ ಕೊರತೆ ಗಣನೀಯವಾಗಿದ್ದು ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕ ಎಚ್.ಕೆ.ಪಾಟೀಲ ಅವರು ಮಾತನಾಡಿ ಗದಗ ಸಕರ್ಾರಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಕನ್ನಡ, ಆಂಗ್ಲ, ರಾಜನೀತಿ, ಆರ್ಥಶಾಸ್ತ್ರ ಹಾಗೂ ಎಂ.ಕಾಮ್ ವಿಭಾಗಗಳ ಉತ್ತೀರ್ಣತೆ ಶೇಕಡಾ ನೂರರಷ್ಟಿದ್ದು ವಿದ್ಯಾಥರ್ಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ಸಂತೋಷದ ಸಂಗತಿ. ಉದ್ದೇಶಿತ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದ ದೇಶದ ಶಿಕ್ಷಣ ರಂಗದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ ಎಂದರು.

     ಜಿ.ಪಂ. ಪ್ರಭಾರ ಅಧ್ಯಕ್ಷೆ ಶಕುಂತಲಾ ಮೂಲಿಮನಿ, ಗದಗ ತಾ.ಪಂ. ಅಧ್ಯಕ್ಷ ಎಸ್.ಎಸ್.ಪಾಟೀಲ, ಜಿ.ಪಂ. ಸದಸ್ಯ ಸಿದ್ದು ಪಾಟೀಲ, ಸಕರ್ಾರಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಫ್. ಸಿದ್ನೇಕೊಪ್ಪ, ಕಾಲೇಜಿನ ಆಡಳಿತಮಂಡಳಿ ಸದಸ್ಯರಾದ ರಾಮಣ್ಣ ರಾಂಪುರೆ, ಕೆ.ಬಿ.ತಳಗೇರಿ, ಬಸವರಾಜ ಕಡೇಮನಿ, ಖಾಜಿ,  ತಹಶೀಲ್ದಾರ ಶ್ರೀನಿವಾಸಮೂತರ್ಿ ಕುಲಕಣರ್ಿ, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಡಾ. ಜನಗಿ, ಕಾಲೇಜಿನ ಪ್ರಾಧ್ಯಾಪಕ ವೃಂದ, ವಿದ್ಯಾಥರ್ಿಗಳು ಹಾಗೂ ನರಸಾಪುರ ಗ್ರಾಮಸ್ಥರು ಸಮಾರಂಭದಲ್ಲಿ ಭಾಗವಹಿಸಿದ್ದರು. ಡಾ. ರಮೇಶ ಕಲ್ಲನಗೌಡರ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ರೂಪಿಸಿದರು.