ವಿದ್ಯಾರ್ಥಿಗಳು ವ್ಯರ್ಥ ಸಮಯ ಕಳೆಯದೆ ಸದಾ ಚಟುವಟಿಕೆಯಲ್ಲಿ ಇರಬೇಕು
ಹೊಸಪೇಟೆ 04: ಹೊಸಪೇಟೆ ನಗರದ ಹೋಟಲ್ ಮಲ್ಲಿಗೆ ಸಭಾಂಗಣದಲ್ಲಿ ದಿ.3ರಂದು ಸ್ವರಗಂಗಾ ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನೆಯನ್ನು ಹಾರ್ಮೋನಿಯಮ್ ಬಾರಿಸುವುದರ ಮೂಲಕ ಡಾಽಽ ಟಿ.ಮಂಜುನಾಥ ಡಿ.ಎಸ್.ಪಿ. ಹೊಸಪೇಟೆ ಇವರು ಮಾತನಾಡುತ್ತಾ ನಾಟಕ, ಕಲೆ, ಸಾಹಿತ್ಯ, ಸಂಗೀತ, ಚಿತ್ರಕಲೆ ಮುಂತಾದ ಸೃಜನಾತ್ಮಕ ಕಲೆಗಳ ಪಠ್ಯೇತರ ಚಟುವಟಿಕೆಗಳನ್ನು ನಮ್ಮ ವಿದ್ಯಾರ್ಥಿಗಳು ಮರೆಯುತ್ತಿದ್ದಾರೆ. ದುಚ್ಛಟಗಳಿಗೆ ಬಲಿಯಾಗಿ ವ್ಯಸನಿಗಳಾಗಿ ದಾಸರಾಗಿ ತಮ್ಮ ಜೀವನವನ್ನು ತಾವೆ ತಮ್ಮ ಕೈಯಾರ ಹಾಳು ಮಾಡಿಕೊಳ್ಳುತ್ತಿದ್ದಾರೆ ಇಂತಹ ಸಂಘ ಸಂಸ್ಥೆಗಳು ಸಮಾಜದಲ್ಲಿ ಹೆಚ್ಚಾಗಿ ಸ್ಥಾಪನೆಯಾಗಿ ಒಳ್ಳೆಯ ಸಮಾಜ ಮುಖಿ ಕಾರ್ಯಗಳನ್ನು ನಡೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಲಿ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆಯ ಅಧ್ಯಕ್ಷರಾದ ರೂಪೇಶ್‌ಕುಮಾರ್ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹಾಗೂ ಸಮಾಜ ಸೇವಕರಾದ ಅಶೋಕ್ ನಾಯ್ಕ, ಸಮಾಜ ಸೇವಕರು ಹೊನ್ನೂರ್ ವಲಿಸಾಬ್, ರಂಗ ನಟರಾದ ಗುಂಡಿ ರಮೇಶ್, ಗಜಾನಂದ ನಾಯ್ಕ ನಿವೃತ್ತ ಪೊಲೀಸ್ ಅಧಿಕಾರಿ, ಅಂಜಲಿ ಭರತನಾಟ್ಯ ಕಲಾಕೇಂದ್ರದ ಮುಖ್ಯ ಶಿಕ್ಷಕಿಯಾದ ಅಂಜಲಿ, ಗಾನಗಂಗಾ ಕಲಾ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಗಾಯಕರಾದ ಯಲ್ಲಪ್ಪ ಭಂಡಾರ್‌ದಾರ್ ಹಾಗೂ ಕಂಪ್ಲಿಯ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಹೇಮಯ್ಯ ಸ್ವಾಮಿ, ಭಾಗವಹಿಸಿದ್ದು. ಕಾರ್ಯಕ್ರಮದಲ್ಲಿ ಅಂಜಲಿ ಭರತನಾಟ್ಯ ಕಲಾಕೇಂದ್ರದ ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ ಜರುಗಿತು. ಹಾಗೂ ಹೊಸಪೇಟೆಯ ವಿವಿಧ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಸ್ವಾಗತ ನಿರೂಪಣೆಯನ್ನು ಯಮುನಾ ಕುಲಕರ್ಣಿ ಟ್ರಸ್ಟ್‌ನ ಅಧ್ಯಕ್ಷರಾದ ಕಲ್ಯಾಣಿ ನಿರ್ವಹಿಸಿದರು. ಟ್ರಸ್ಟ್‌ನ ಕಾರ್ಯದರ್ಶಿಯಾದ ರಮೇಶ್.ಕೆ.ರವರು ವಂದಿಸಿದರು.