ತಬ್ಲೀಘಿ ಜಮಾತ್ ಕುರಿತು ಹೇಳಿಕೆ; ಐಎಎಸ್ ಅಧಿಕಾರಿಗೆ ರಾಜ್ಯ ಸರ್ಕಾರ ನೋಟೀಸ್

ಬೆಂಗಳೂರು, ಮೇ 02,  ತಬ್ಲೀಘಿ  ಜಮಾತ್  ಸದಸ್ಯರ ಕುರಿತು  ಅಭಿಪ್ರಾಯ ಹಂಚಿಕೊಂಡಿದ್ದ  ಹಿರಿಯ ಐಎಎಸ್  ಅಧಿಕಾರಿಯೊಬ್ಬರಿಗೆ   ರಾಜ್ಯ ಸರ್ಕಾರ  ಶೋಕಾಸ್  ನೋಟೀಸ್  ಜಾರಿ ಮಾಡಿದೆ.  ತಬ್ಲೀಘಿ   ಸದಸ್ಯರ ಪ್ಲಾಸ್ಮಾ ದಾನ ಕುರಿತು   ಅಧಿಕಾರಿ  ಮಾಡಿದ್ದ ಟ್ವೀಟ್  ಕುರಿತ   ಮಾಧ್ಯಮಗಳ  ಪ್ರತಿಕೂಲ  ವರದಿಯನ್ನು ಗಂಭೀರವಾಗಿ  ಪರಿಗಣಿಸಿದ ರಾಜ್ಯ ಸರ್ಕಾರ  ಹಿಂದುಳಿದ ವರ್ಗಗಳ ಇಲಾಖೆಯ  ಪ್ರಧಾನ  ಕಾರ್ಯದರ್ಶಿ  ಮೊಹಮದ್  ಮೊಹ್ಸಿನ್  ಅವರಿಗೆ  ಶೋಕಾಸ್  ನೋಟೀಸ್ ನೀಡಿದೆ ಎಂದು  ಅಧಿಕೃತ ಮೂಲಗಳು ಹೇಳಿವೆ. ನವದೆಹಲಿ ಒಂದರಲ್ಲೇ   ದೇಶಕ್ಕಾಗಿ ಸೇವೆಯ ಭಾಗವಾಗಿ   300ಕ್ಕೂ ಹೆಚ್ಚು ತಬ್ಲೀಘಿ  ಹೀರೋಗಳು ದಾನ ಮಾಡಿದ್ದಾರೆ.   ಈ  ಹೀರೋಗಳು ಮಾಡಿರುವ ಮಾನವೀಯ ಕೆಲಸವನ್ನು  ಮಾಧ್ಯಮಗಳು  ತೋರಿಸುತ್ತಿ  ಏಕೆ ? ಎಂದು  ಐಎಎಸ್ ಅಧಿಕಾರಿ ಇತ್ತೀಚಿಗೆ  ಟ್ವೀಟ್ ಮಾಡಿದ್ದರು 1968ರ ಅಖಿಲ ಭಾರತ ಸೇವಾ ನಿಯಮಗಳ  7ನೇ  ನಿಯಮದ ಉಲ್ಲಂಘನೆ ಎಂದು ಏಕೆ ಪರಿಗಣಿಸ ಬಾರದು ಎಂದು ಪ್ರಶ್ನಿಸಿ, ಒಂದು   ವಾರದೊಳಗೆ  ಲಿಖಿತವಾಗಿ   ವಿವರಣೆ ನೀಡುವಂತೆ  ನೋಟೀಸ್ ನಲ್ಲಿ ತಿಳಿಸಲಾಗಿದೆ.2019ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ  ಹೆಲಿಕಾಪ್ಟರ್ ಅನ್ನು ತಪಾಸಣೆ ನಡೆಸಿದ್ದಕ್ಕಾಗಿ  ಐ ಎಸ್ ಎಸ್ ಅಧಿಕಾರಿ  ಮಹಮದ್ ಮೊಯ್ಸಿನ್ ಅವರನ್ನು ಚುನಾವಣಾ ಆಯೋಗ  ಕಳೆದ ವರ್ಷ ಸೇವೆಯಿಂದ ಅಮಾನತ್ತು ಗೊಳಿಸಿತ್ತು.