ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ರಾಜ್ಯ ಸಕರ್ಾರ ಬದ್ಧ: ಸಚಿವ ಸಿ.ಸಿ.ಪಾಟೀಲ

ಗದಗ 19:   ಗ್ರಾಮೀಣ ಭಾಗದಲ್ಲಿ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ದಸರಾ ಕ್ರೀಡಾಕೂಟಗಳ ಆಯೋಜನೆಯನ್ನು ರಾಜ್ಯ ಸಕರ್ಾರ  ಪುನಹ ಆರಂಭಿಸಿದೆ. ವಿದ್ಯಾರ್ಥಿಗಳು ಯುವ ಜನ ಕ್ರೀಡಾಪಟುಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ನಾಡಿನ ಕಿತರ್ಿ ಹೆಚ್ಚಿಸಬೇಕು ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು. 

   ಗದುಗಿನ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿಂದು ಕ್ರೀಡಾ ದ್ವಜಾರೋಹಣ ನೆರವೇರಿಸಿ  ಶಾಂತಿದ್ಯೂತಕವಾಗಿ ಪಾರಿವಾಳಗಳನ್ನು ಹಾರಿಬಿಟ್ಟು ಜಿಲ್ಲಾ ಮಟ್ಟದ  ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಒತ್ತಡದ ಜೀವನದಲ್ಲಿ ಸದೃಢ ಆರೋಗ್ಯ ಮತ್ತು ಮನಸ್ಸನ್ನು ಹೊಂದಿರಲು ಆಟೋಟಗಳ ನಮ್ಮ ನಿತ್ಯ ಜೀವನದ ಅಂಗವಾಗಬೇಕು ಎಂದರು. 

     ಗದಗ ಜಿಲ್ಲೆಯಲ್ಲಿ ಇರುವ ಸುಸಜ್ಜಿತ ಕ್ರೀಡಾಂಗಣ ಹಾಗೂ ಕ್ರೀಡಾ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕು. ಆಟದಲ್ಲಿ ಸೋಲಿಗೆ ಕುಗ್ಗದೇ ಅದನ್ನೆ ಗೆಲುವಿನ ಸೋಪಾನವಾಗಿಸಿಕೊಳ್ಳುವ ಛಲ ರೂಡಿಸಿಕೊಳ್ಳಬೇಕು. ಇದಕ್ಕೆ ದೈಹಿಕ ಶಿಕ್ಷಕರು, ಶಾಲೆ ಹಾಗೂ ಪಾಲಕರು ವಿದ್ಯಾಥರ್ಿ ಕ್ರೀಡಾಪಟುಗಳಗೆ ಅಗತ್ಯದ ಸಹಕಾರ ನೀಡಿ ಹುರದುಂಬಿಸಬೇಕು. ಕ್ರೀಡೆಗಳ ಬೆಳವಣಿಗೆಗೆ ಹೆಚ್ಚಿನ ಸೌಲಭ್ಯ ಒದಗಿಸಲು ತಾವೂ ಪ್ರಯತ್ನಿಸುವುದಾಗಿ ನುಡಿದ ಸಚಿವ ಸಿ.ಸಿ.ಪಾಟೀಲ ಅವರು ದೇಶಿಯ ಆಟಗಳಾದ ಕಬ್ಬಡ್ಡಿ, ಖೋಖೋಗಳನ್ನು ಮುನ್ನಲೆಗೆ ತರಲು ಪ್ರಯತ್ನಗಳು ನಡೆಯಬೇಕು ಎಂದರು. 

ರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿದ ಜಿ.ಪಂ ಪ್ರಭಾರಿ ಅಧ್ಯಕ್ಷೆ ಶಕುಂತಲಾ ಮೂಲಿಮನಿ ಮಾತನಾಡಿ ಜಿಲ್ಲೆಯಲ್ಲಿ ಕ್ರೀಡಾಪ್ರತಿಭೆಗಳಿಗೆ ಕೊರತೆ ಇಲ್ಲ. ಅವರಿಗೆ ಸೂಕ್ತ ಪ್ರೋತ್ಸಾಹ, ತರಬೇತಿ ಹಾಗೂ ಅವಕಾಶದ ಅಗತ್ಯವಿದೆ ಎಂದರು. ಶಾಲಾ ಮಟ್ಟದಲ್ಲಿ ಅಂತಹ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಆಗಬೇಕು. ಮಕ್ಕಳು ಬರೀ ಓದುವುದೇ ಮುಖ್ಯವಾಗಿಸಿಕೊಳ್ಳದೇ ಮನಸ್ಸಿಗೆ ಉಲ್ಲಾಸ ನೀಡುವ ಆಟೋಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಕುಂತಲಾ ಮೂಲಿಮನಿ ನುಡಿದರು. 

ಯುವಜನ ಒಕ್ಕೂಟ ಸಂಘದ ಜಿಲ್ಲಾಧ್ಯಕ್ಷ ರವಿಕಾಂತ ಅಂಗಡಿ ಯುವ ಜನರ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಕ್ರೀಡಾ ಇಲಾಖೆಗೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು ಎಂದರು.  ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ ಬಿ.ಬಿ.ವಿಶ್ವನಾಥ ಮಾತನಾಡಿ ಜಿಲ್ಲಾ ಸೆ. 19,20 ರಂದು ನಡೆಯುವ  ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಐದು ತಾಲೂಕುಗಳು ಭಾಗವಹಿಸಲಿವೆ. ದಸರಾ ಕ್ರೀಡಾಕೂಟದಲ್ಲಿ 37 ಕ್ರೀಡೆಗಳಲ್ಲಿ ಪುರುಷರ ಹಾಗೂ ಮಹಿಳೆಯರ ಅಥ್ಲೆಟಿಕ್ಸ ಸ್ವಧರ್ೆಗಳು : 100ಮೀ,200ಮೀ, 400ಮೀ, 800ಮೀ, 1500ಮೀ, 5000ಮೀ ಓಟ,  ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವಲಿನ ಎಸೆತ, ಡಿಸ್ಕಸ್ ಎಸೆತ, ಹರ್ಡಲ್ಸ್, 4*400ಮೀ,ರಿಲೇ. ಹಾಗೂ  ಗುಂಪು ಸ್ವಧರ್ೆಗಳಲ್ಲಿ ವಾಲಿಬಾಲ್,ಕಬಡ್ಡಿ, ಖೋಖೋ, ಕುಸ್ತಿ, ಬ್ಯಾಡ್ಮಿಂಟನ್,ಫುಟ್ಬಾಲ್, ಬ್ಯಾಸ್ಕೆಟ್ಬಾಲ್, ಹ್ಯಾಂಡ್ಬಾಲ್, ಥ್ರೋಬಾಲ್, ಟೇಬಲ್ ಟೆನ್ನೀಸ್, ಬಾಲ್ಬ್ಯಾಡ್ಮಿಂಟನ್, ಹಾಕಿ, ಜಿಮ್ನಾಸ್ಟಿಕ್, ಈಜು, ನೆಟ್ ಬಾಲ್, ಆಯ್ಕೆ ಮಾಡುವ ಕ್ರೀಡೆಗಳು ಟೆನ್ನೀಸ್, ನೆಟ್ಬಾಲ್, ಈಜು. ಕ್ರೀಡೆಗಳಲ್ಲಿ 1 ಸಾವಿರ ಕ್ರೀಡಾ ಪಟುಗಳು ಭಾಗವಹಿಸಲಿದ್ದಾರೆ. ಎಲ್ಲಾ ಕ್ರೀಡಾಪಟುಗಳನ್ನು  ಕ್ರೀಡಾ ಸ್ಪೂತರ್ಿಯಿಂದ ಭಾಗವಹಿಸಬೇಕು ಎಂದು ಬಿ.ಬಿ. ವಿಶ್ವನಾಥ ತಿಳಿಸಿದರು. 

    ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ ಮುಖ್ಯಕಾರ್ಯನಿವರ್ಾಹಣಾಧಿಕಾರಿ ಡಾ|| ಆನಂದ.ಕೆ,  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ರಾಜ್ಯ ಹಾಗೂ ಅಂತರಾಷ್ರ್ಟೀಯ ಕ್ರೀಡಾ ಕುಸ್ತಿ ಪಟುಗಳಾದ ಕುಮಾರಿ ಪ್ರೇಮಾ ಹುಚ್ಚಣ್ಣವರ, ಬಸಿರಾ ವಕಾರದ, ಸಂಗೀತಾ ತಾರಳ್ಳಿ, ಜಯಶ್ರೀ ಗುಡಗುಂಟಿ, ಶ್ವೇತಾ ಬೆಳಗಟ್ಟಿ ಕ್ರೀಡಾ ಜ್ಯೋತಿ ತಂಡದಲ್ಲಿದ್ದರು.  ಎನ್.ಆರ್.ನಿಡಗುಂದಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಎಮ್.ಡಿ.ತಳ್ಳಳ್ಳಿ ವಂದಿಸಿದರು, ಪ್ರತಿಭಾ ರೂಗಿ ಪ್ರಾಥರ್ಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಗದಗ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನರ್ಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಜಿಲ್ಲಾ ಯುವಜನ ಒಕ್ಕೂಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಆಯೋಜಿಸಿದೆ.