ಲೋಕದರ್ಶನ ವರದಿ
ಕೊಪ್ಪಳ 05: ಕೊರೊನಾ ವೈರಸ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಇಡೀ ದೇಶವೇ ಲಾಕ್ಡೌನ್ ಆಗಿದೆ. ಭಾಗ್ಯನಗರದಲ್ಲಿಯೂ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಅನೇಕರು ಸಮಾಜಕ್ಕೆ ತಮ್ಮದೇ ಆದ ಶಕ್ತಿ ಅನುಸಾರ ಸಹಾಯ ಮಾಡಿ ಮಾನವೀಯತೆ ತೋರುತ್ತಿದ್ದಾರೆ.
ಭಾಗ್ಯನಗರದ ದುರಗಮುರಗಿಯವರ ಕಾಲೋನಿಯ ನಿತ್ಯ ದುಡಿಮೆಯ ಮೇಲೆ ಅವಲಂಬಿತವಾದ ಅಲೇಮಾರಿ ಕುಟುಂಬಗಳಿಗೆ, ಮಹಿಳೆಯರಿಗೆ-ಮಕ್ಕಳಿಗೆ, ವೃದ್ಧರಿಗೆ ಊಟ, ನೀರಿನಬಾಟಲ್, ಬ್ರೇಡ್, ಕೆಲವು ನಿತ್ಯ ಬಳಕೆಯ ಸಾಮಗ್ರಿಗಳನ್ನು ಧನ್ವಂತರಿ ಕಾಲೋನಿಯ ನಕ್ಷತ್ರ ಸ್ವ-ಸಹಾಯ ಸಂಘದ ಪದಾಧಿಕಾರಿಗಳು ನೀಡಿದರು.
ಈ ಸಂದರ್ಭದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಿ.ಬಾಬು, ಸಮುದಾಯ ಸಂಘಟನಾ ಅಧಿಕಾರಿ ಮಂಗಳಾ ಕುಲಕಣರ್ಿ, ಆರೋಗ್ಯ ನಿರೀಕ್ಷಕಿ ಅಕ್ಕಮಹಾದೇವಿ, ಜಿಲ್ಲಾ ಕೌಶಲ್ಯಭಿವೃದ್ಧಿಚಿು ಅಭಿಯಾದ ಅಹ್ಮದ್ಹುಸೇನ, ಪ್ರವೀಣ,ನಕ್ಷತ್ರ ಸ್ವ-ಸಹಾಯ ಸಂಘದ ಲಲಿತಾ ಅಳವಂಡಿ, ಸುಜಾತ ಪ್ರಜ್ವಲ್, ಪದ್ಮಾವತಿ ನುಗಡೋಣಿ, ವೀಣಾ ನಾಯಕ, ರಾಖಿ ಜಾಣದ, ಸಿಂಧೂ ಉಜ್ವಲ್, ಅನಿತಾ ಶ್ಯಾವಿ,ಮಂಜುಳಾ ಅಳವಂಡಿ,ಶಂಕ್ರಮ್ಮ ಸಿಂಗಾಡಿ, ರೇಖಾ ಮಡಿವಾಳರ ಸೇರಿದಂತೆ ಅನೇಕ ಸಂಘದ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.