ಲೋಕದರ್ಶನ ವರದಿ
ಬೆಳಗಾವಿ, 10: ನನಗೆ ಕನ್ನಡರಾಜ್ಯೋತ್ಸವ ದೊರೆತದ್ದು ಆಕಷ್ಕಿಕ, ಎಲ್ಲದಕ್ಕು ನಿರಂತರ ಪ್ರಯತ್ನ ಬೇಕು, ಯೋಗಕೂಡಿ ಬರಬೇಕು, ಶ್ರೀ ಗುರುವಿನ ಅನುಗ್ರಹ ಬೇಕು ಅಂದಾಗ ಸರ್ವ ಕಾರ್ಯಸಿದ್ದಿಯಾಗುತ್ತದೆ ಎಂದೂ ಹಾಗೂ ನಾನು ರಾಜಕಾರಣದಲ್ಲಿತೊಡಗಿ ಸಚಿವನಾಗಬೇಕಾದರೆ, ನಾಗನೂರು ರುದ್ರಾಕ್ಷಿಮಠದ ಶಿವಬಸವ ಮಹಾಸ್ವಾಮಿಗಳವರ ಆಶೀವರ್ಾದ ಅನುಗ್ರಹ ಕಾರಣವೆಂದು ಕನರ್ಾಟಕ ಸರಕಾರದ ಮಾಜಿ ಸಚಿವರಾದ ಶಿವಾನಂದ ಕೌಜಲಗಿಯವರು ತಮ್ಮ ಅನುಭವದ ನುಡಿಗಳನ್ನು ಹಂಚಿಕೊಂಡರು.
ಈ ವರ್ಷದರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದಇವರು ಬೆಳಗಾವಿಯ ಕಾರಂಜಿಮಠದ 221ನೇ ಮಾಜಿಕ ಶಿವಾನುಭವ ಹಾಗೂ ಸನ್ಮಾನ ಸಮಾರಂಭದಲ್ಲಿ ಮೇಲಿನಂತೆ ನುಡಿದರು.
ಈ ಸಮಾರಂಭದ ಪಾವನ ಸನ್ನಿಧಾನ ವಹಿಸಿದ ಶ್ರೀಮಠದ ಗುರುಸಿದ್ಧ ಮಹಾಸ್ವಾಮಿಗಳವರು ಮತ್ತು ಸಮ್ಮುಖವಹಿಸಿದ ಉತ್ತರಾಧಿಕಾರಿಗಳಾದ ಶಿವಯೋಗಿ ದೇವರುಜೊತೆಯಾಗಿ ಸೇರಿಕೊಂಡು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿವಾನಂದ ಕೌಜಲಗಿ, ಸಾಹಿತಿ ಸಿ. ಕೆ. ಜೋರಾಪುರ ಮತ್ತು ವೈದ್ಯಕೀಯ ರಂಗದ ವಿಶಿಷ್ಟ ಸೇವೆಯ ಮೂಲಕ ಜೀವಮಾನ ಸಾಧನೆ ಪ್ರಶಸ್ತಿ ಪಡೆದಡಾ. ಎಚ್. ಬಿ. ರಾಜಶೇಖರಅವರನ್ನು ಸನ್ಮಾನಿಸಿದರು. ಅದರಂತೆ ಚಲನಚಿತ್ರದ ಉದಯೋನ್ಮುಖ ಬಾಲನಟಕುಮಾರ ಆಯುಷ್ಆರ್ ಹೊಸಕೋಟಿ ಈತನನ್ನು ಶ್ರೀಗಳು ಆಶೀರ್ವದಿಸಿದರು.
ಗುರುಸಿದ್ಧ ಮಹಾಸ್ವಾಮಿಗಳವರು ಆಶೀರ್ವಚನ ನೀಡುತ್ತಾ ಮೇಲಿನ ಸಾಧಕರ ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿ ಅಭಿನಂದಿಸಿದರು. ಅಧ್ಯಕ್ಷತೆವಹಿಸಿದ ಖ್ಯಾತ ವೈದ್ಯರಾದಡಾ. ಎಚ್. ಬಿ. ರಾಜಶೇಖರವರು ಮಾತನಾಡುತ್ತಾ, ಶಿವಾನಂದ ಕೌಜಲಗಿಯವರು ರಾಜಕಾರಣದ ಜೊತೆಗೆ, ಡಾ. ಪ್ರಭಾಕರಕೋರೆಯವರಜೊತೆಗೆ ಸೇರಿಕೊಂಡು ಕೆ. ಎಲ್. ಇ ಸಂಸ್ಥೆಯನ್ನುಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಗೊಳಿಸಿದ್ದಾರೆ. ಅವರಕಾಯಕದಲ್ಲಿದಕ್ಷತೆ, ಪ್ರಾಮಾನಿಕತೆ, ತತ್ವಸಿದ್ದಾಂತವಿದೆ ಎಂದರು. ಜಾನಪದ ವಿದ್ವಾಂಸರಾದಡಾ. ಬಸವರಾಜ ಜಗಜಂಪಿಯವರು ಮೇಲಿನ ಮೂರುಜನ ಸಾಧಕರ ಸೇವೆಯನ್ನುಕುರಿತು ಮಾತನಾಡುತ್ತಾಇವರು ವರ್ತಮಾನದ ಶರಣರುಎಂದು ವಿಶೇಷ ಉಪನ್ಯಾಸ ನೀಡಿದರು. ಪ್ರೊ. ಎಮ್. ಆರ್. ಉಳ್ಳೇಗಡ್ಡಿಯವರು ಗ್ರಂಥಪುಷ್ಪ ಸಮಪರ್ಿಸಿದರು. ಡಾ. ಮಹೇಶ ಗುರನಗೌಡರ ಸ್ವಾಗತ, ಎ. ಕೆ. ಪಾಟೀಲ ನಿರೂಪಣೆ, ವಿ. ಕೆ. ಪಾಟೀಲ ಶರಣು ಸಮರ್ಪಣೆ ಮಾಡಿದರು. ಮಾತೃಮಂಡಳಿಯ ತಾಯಂದಿರು ಪ್ರಾರ್ಥನೆ ಸಮಪರ್ಿಸಿದರು.