ಲೋಕದರ್ಶನ ವರದಿ
ಸಿರುಗುಪ್ಪ 01: ದುಶ್ಚಟಗಳನ್ನು ದೂರ ಮಾಡಿ ಆರೇೂಗ್ಯ ಅರಿವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕ್ಷೇತ್ರ ಧರ್ಮಸ್ದಳ ಗ್ರಾಮಭಿವೃದ್ದಿ ಯೋಜನೆ ತಾಲ್ಲೂಕು ಅಧಿಕಾರಿ ವೆಂಕಟೇಶ್ ಹೇಳಿದರು.
ನಗರದ ಬಿಸ್ಮಿಲ್ಲಾ ವಿದ್ಯಾಸಂಸ್ಥೆ ಜವಾಹರ್ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ದಳ ಗ್ರಾಮೀಣಾಭಿವೃದ್ಧಿ ಯೋಜನೆ ಅಖಿಲ ಕನಾಟಕ ಜನಜಾಗೃತಿ ವೇದಿಕೆ ಬಿಸ್ಮಿಲ್ಲಾ ವಿದ್ಯಾಸಂಸ್ಥೆಗಳ ಸಹಯೋಗದಿಂದ ವಿಶ್ವತಂಬಾಕು ವಿರೋಧಿ ದಿನ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಸ್ಮಿಲ್ಲಾ ವಿದ್ಯಾಸಂಸ್ಥೆ ಕಾರ್ಯದಶರ್ಿ ಶಹಿನಾಜ್ಬೇಗಂ, ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹೈದರಾಬಾದ್ ಕರ್ನಾಟಕದ ಭಾಗದ ಯೇಜನಾ ಧಿಕಾರಿ ನಾಗರಾಜ್, ಸರ್ಕರಿ ಆಸ್ಪತ್ರೆಯ ಐಸಿಟಿಸಿ ಅಧಿಕಾರಿ ಪ್ರವೀಣ್ ಕುಮರ್, ಮೇಲ್ವಿಚಾರಕ ಮಂಜುನಾಥ, ಈರಣ್ಣ ಸರ್ಕಾರಿ ಆಸ್ಪತ್ರೆಯ ಸಿಹೆಚ್ಡಬ್ಲ್ಯೂ ಅಧಿಕಾರಿಗಳಾದ ಶಿವ ಕುಮಾರ್ ರಾಜೇಶ್ ಸೇರಿದಂತೆ ನೂರಾರು ಮಹಿಳಿಯರು ಸೇರಿದ್ದರು.
ತಂಬಾಕು ಸೇವನೆ ಯಂತಹ ದುಶ್ಚಟದಿಂದ ದೂರವಿದ್ದರೆ ಸುಖಕರವಾದ ಜೀವನ ನಡೆಸಲು ಸಾಧ್ಯ ಧೂಮಪಾನ ಮಾಡುವುದರಿಂದ ಆರೇೂಗ್ಯದ ಮೇಲೆ ಹಲವಾರು ದುಷ್ಪರಿಣಾಮಗಳು ಸಿಗರೇಟ್, ಬೀಡಿ, ಸಿಗಾರ್ ವಿವಿಧ 7ಸಾವಿರ ರಾಸಾಯನಿಕ ವಸ್ತುಗಳಿದ್ದು ಅದರಲ್ಲಿ 69ರಷ್ಟು ಕ್ಯಾನ್ಸರ್ ಕಾರಕ ವಸ್ತು ಗಳಾಗಿವೆ ಧೂಮರಹಿತ ಜಿಗಿಯುವ ತಂಬಾಕುಗಳು ತಂಬಾಕು ಉತ್ಪನ್ನಗಳಲ್ಲಿ 3095 ರಾಸಾಯನಿಕಗಳಿದ್ದು ಅದರಲ್ಲಿ 28ರಷ್ಟು ಕ್ಯಾನ್ಸರ್ ಕಾರಕ ವಸ್ತುಗಳಿವೆ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ಅರ್ಜುನ ಎಸ್.ವಲ್ಲೂರು ವಿವರಿಸಿರುತ್ತಾರೆ