ಲೋಕದರ್ಶನ ವರದಿ
ಸಿಂದಗಿ 18: ಬುಡಕಟ್ಟು ಜನಾಂಗದಲ್ಲಿ ನಾವು ಹೆಚ್ಚು ಜಾನಪದ ಕಲೆಗಳನ್ನು ಕಂಡು ಕೊಳ್ಳುತ್ತೇವೆ. ಅವರ ಜೀವನವೇ ಜಾನಪದವಾಗಿದೆ ಎಂದು ಜಾನಪದ ವಿದ್ವಾಂಸ ಹಾಗೂ ಬೆಳಗಾವಿ ಸಿಐಡಿ ಇಲಾಖೆ ಸಿಪಿಐ ಜೋತಿರ್ಲಿಂಗ ಹೊನಕಟ್ಟಿ ಹೇಳಿದರು.
ಪಟ್ಟಣದ ಸಿ.ಎಂ.ಮನಗೂಳಿ ಮಹಾವಿದ್ಯಾಲಯದ ಸಭಾಭವನದಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕಾ ಶಾಖೆ, ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಬುಡಕಟ್ಟು ದಿನಾಚರಣೆಯಲ್ಲಿ ಬುಡಕಟ್ಟು ಪರಂಪರೆಯ ಕುರಿತು ಬಗ್ಗೆ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಅಶೋಕ ಸಿಂದಗಿ ಮಾತನಾಡಿದರು. ಪರಿಷತ್ ಅಧ್ಯಕ್ಷ ಪಂಡಿತ ಅವಜಿ, ಪ್ರೊ.ಸಿದ್ದಲಿಂಗ ಕಿಣಗಿ, ಪತ್ರಕರ್ತ ಪಂಡಿತ ಯಂಪೂರೆ, ಡಾ.ಎಸ್.ಡಿ.ನಾಟೀಕಾರ, ಗಿರೀಶ ಗತಾಟೆ ಅವರು ವೇದಿಕೆ ಮೇಲೆ ಇದ್ದರು.
ಪ್ರಾಧ್ಯಾಪಕರಾದ ಡಾ.ಬಿ.ಜಿ.ಪಾಟೀಲ, ಎಸ್.ಎಂ.ಬಿರಾದಾರ, ಎಸ್.ಎಸ್.ಪಾಟೀಲ, ಬಿ.ಜಿ.ಪಾಟೀಲ, ಡಾ.ಜೆ.ಜಿ.ಜೋಶಿ, ಬಿ.ಎ.ಪಾಟೀಲ, ಎಸ್.ಎ.ಕೆರೂಟಗಿ ಎಸ್.ಕೆ.ಪೂಜಾರಿ, ಜಿ.ಜಿ.ಕಾಂಬಳೆ, ಬಿ.ಡಿ.ಮಾಸ್ತಿ, ಶೋಭಾ ಪೂಜಾರಿ, ಪ್ರಕಾಶ ಪೂಜಾರಿ, ಪ್ರದೀಪ ಕತ್ತಿ, ರಮೇಶ ಯಂಕಂಚಿಕರ, ಗ್ರಂಥಪಾಲಕ ಎಸ್.ಎಂ.ಕುಂಬಾರ ಹಾಗೂ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪಂಡಿತ ಅವಜಿ ಸ್ವಾಗತಿಸಿದರು. ಪ್ರೊ. ಬಿ.ಜಿ.ಮಠ ನಿರೂಪಿಸಿದರು. ಸತೀಶ ದೊಡಮನಿ ವಂದಿಸಿದರು.