ರೇಷ್ಮೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ತಂದಿದ್ದ ರೇಷ್ಮೆ ಕಳ್ಳತನವಾಗಿದೆ

Silk for sale at silk market stolen

ರೇಷ್ಮೆ  ಮಾರುಕಟ್ಟೆಯಲ್ಲಿ ಮಾರಾಟಕ್ಕೆ ತಂದಿದ್ದ ರೇಷ್ಮೆ ಕಳ್ಳತನವಾಗಿದೆ 

 ಶಿರಹಟ್ಟಿ  18 : ಸ್ಥಳೀಯ ರೇಷ್ಮೆ ಗೂಡು ಮಾರುಕಟ್ಟೆಗೆ ರೇಷ್ಮೆ ಗೂಡು ಮಾರಲು ತಂದಿದ್ದ ರೈತನ ರೇಷ್ಮೆಗೂಡನ್ನ  ಖರಿದಿದಾರನ ಮಗ ಕಳುವು ಮಾಡಿದ ಘಟನೆ  ಸೋಮವಾರ ನಡೆದಿದೆ. 

 ಲಕ್ಷ್ಮೇಶ್ವರ ತಾಲೂಕಿನ ರೈತನಾದ ಬೀರ​‍್ಪ ಪೂಜಾರ್ ಎಂಬುವರು ರೇಷ್ಮೆ ಗೂಡು ಮಾರಾಟ ಕೇಂದ್ರಕ್ಕೆ ಮಾರಲು ಬಂದಿದ್ದು,  ಹೊರಗಡೆ ಬಂದ ಸಮಯದಲ್ಲಿ ರೇಷ್ಮೆ ಗೂಡು ಕಳ್ಳತನವಾಗಿದ್ದು ಗೊತ್ತಾಗಿದೆ. ರೈತನು ನಾನು ತಂದ ರೇಷ್ಮೆ ಗೂಡು ಕಡಿಮೆಯಾಗಿದೆ ಎಂದು ಕೆಳುವಷ್ಟರಲ್ಲಿ ಕಳುವು ಮಾಡಿದ ವ್ಯಕ್ತಿ ರೈತನನ್ನು ನೋಡಿ ಗೂಡು ಚೆಲ್ಲಿ ಪರಾರಿಯಾಗಿದ್ದಾನೆ.  ಈ ರೀತಿ ಅನೇಕ ಬಾರಿ ಕಳ್ಳತನ ಮಾಡಿದ್ದನ್ನು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಈ ಮಾರುಕಟ್ಟೆಯಲ್ಲಿ ಸಿಸಿಟಿವಿ ಕ್ಯಾಮೆರಾ ಗಳು ಹೆಸರಿಗೆ ಮಾತ್ರ ಇವೆ. ಆದರೆ ಸರಿಯಾಗಿ ಸಿಸಿಟಿವಿ ಕೆಲಸ ಮಾಡುತ್ತಿಲ್ಲ. ಇಂತಹ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಉತ್ತಮವಾದ ಅಧಿಕಾರಿಗಳನ್ನು ನೇಮಿಸಿ ಎಂದು ಗುಡುಗಿದರು.   

 ರಿಲಿಂಗ್ ಕೋಣೆಯಲ್ಲಿ ಕೋಳಿ ಸಾಕಾಣಿಕೆ  ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರಿಲರಗಳು ಅಧಿಕಾರಿಗಳ ಬೆಂಬಲದೊಂದಿಗೆ ಭರ್ಜರಿಯಾಗಿ ಕೋಳಿ ಸಾಕಾಣಿಕೆಯನ್ನು ರಾಜಾ ರೋಷವಾಗಿ ಮಾಡುತ್ತಿದ್ದಾರೆ. ರಿಲಿಂಗ ಮಾಡುವವರು ಇದುವರೆಗೂ ತಮ್ಮ ಪರವಾನಿಗೆ ಅವದಿ ಮುಗಿದರು ಕೂಡಾ ಹಾಗೆ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಕೂಡಲೇ ರಿಲಿಂಗ ಮಾಡುವ 6 ಜನರ ಪರವಾನಿಗೆಯನ್ನು ನವಿಕರಿಸಿದ ಮೇಲೆ ಅವರಿಗೆ ರಿಲಿಂಗ ಮಾಡಲು ಅವಕಾಶ ಕೊಡಿ ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ದ ಎಲ್ಲ ರೈತರು ಸೇರಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ರೈತರು ಆಗ್ರಹಿಸಿದರು.ಬಾಕ್ಸಲ್ಲಿ  

ಶ್ರೀಶೈಲ ಮೂರ್ತಿ  ಜಿಲ್ಲಾ ರೇಷ್ಮೆಉಪನಿರ್ದೇಶಕಶಿರಹಟ್ಟಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಇಂತಹ ತೊಂದರೆಗಳು ನನ್ನ ಗಮನಕ್ಕೆ ಬಂದಿದ್ದು, ನಾನು ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳುತ್ತೇನೆ.ಈ ಸಮಯದಲ್ಲಿ ಸಂತೋಷ ಕುರಿ, ಎಚ್,ಎಮ್, ದೇವದಿರಿ, ಈರಣ್ಣ ಕಲ್ಯಾಣಿ, ಗೂಳಪ್ಪ ಕರಿಗಾರ, ನೀಲಪ್ಪ ಖಾನಾಪುರ, ನಿಂಗಪ್ಪ ತುಳಿ, ಪಕ್ಕಿರೇಶ ಮೂರಾರಿ, ಆನಂದ ಸ್ವಾಮಿ,ನಾಗೇಶ ಇಂಗಳಗಿ, ಹಾಗೂ ಶಿವನಗೌಡ ಪಾಟೀಲ ಅನೇಕರು ಇದ್ದರು.