ಹಿರಿಯ ವಕೀಲ ಸುಬ್ಬಾರೆಡ್ಡಿ ನಿಧನ

ಹೈದರಾಬಾದ್, ಏ 20, ಹಿರಿಯ ವಕೀಲ, ಮಾಜಿ ಸರ್ಕಾರಿ ನ್ಯಾಯವಾದಿ ಮತ್ತು ಅವಿಭಜಿತ ಆಂಧ್ರಪ್ರದೇಶದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎನ್ ಸುಬ್ಬಾರೆಡ್ಡಿ ಸೋಮವಾರ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಸೋಮವಾರ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನೆರವೇರಿತು. ಅವರ ಮಗ, ಮೊಮ್ಮೊಗ ಮತ್ತು ತೆಲಂಗಾಣ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಜಿ.ಚಂದ್ರಯ್ಯ ಮಾತ್ರ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು.ಸುಬ್ಬಾ ರೆಡ್ಡಿ ಅವರು ಎರಡು ಬಾರಿ ಸರ್ಕಾರದ ನ್ಯಾಯವಾದಿಯಾಗಿ ಆಯ್ಕೆಯಾಗಿದ್ದರು. ಅವರು ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು.