ಹಿರಿಯ ನಾಗರಿಕರು ಕ್ರೀಡೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ: ಸಿದ್ಧಲಿಂಗೇಶ್ವರ

ಗದಗ 23:  ಹಿರಿಯ ನಾಗರಿಕರು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ  ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು  ಸಾಧ್ಯ ಎಂದು ಗದಗ ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ   ನುಡಿದರು.

         ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿಂದು  ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ  ಏರ್ಪಡಿಸಲಾಗಿದ್ದ  ಹಿರಿಯ ನಾಗರಿಕರಿಗಾಗಿ  ಕ್ರೀಡಾ ಮತ್ತು ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು  ಉದ್ಘಾಟಿಸಿ ಅವರು ಮಾತನಾಡಿದರು.   ಗದಗ ಜಿಲ್ಲೆಯು ಕ್ರೀಡೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಹಿರಿಯ ನಾಗರಿಕರು   ಇಳಿವಯಸ್ಸಿನಲ್ಲಿ  ಆಟೋಟಗಳಿಂದ ಮಾನಸಿಕ ಹಾಗೂ ದೈಹಿಕ ಚೈತನ್ಯವನ್ನು ಹೊಂದಬಹುದಾಗಿದೆ ಎಂದು ಸಿದ್ಧಲಿಂಗೇಶ್ವರ ಪಾಟೀಲ ನುಡಿದರು.  

        ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ ಹಿರಿಯ ನಾಗರಿಕರು ಕ್ರೀಡೆಯಲ್ಲಿ ಭಾಗವಹಿಸುವುದು  ಪ್ರಶಂಸನೀಯವಾದದ್ದು.  ಮನರಂಜನೆ ಹಾಗೂ ಕ್ರೀಡೆಗಳಿಗೆ ವಯಸ್ಸು ಯಾವಾಗಲೂ ಅಡ್ಡಿಯಾಗಬಾರದು.  ಉತ್ಸಾಹದಿಂದ ಎಲ್ಲ  ಕ್ರೀಡೆಗಳಲ್ಲಿ ಹಿರಿಯರು ಭಾಗವಹಿಸಬೇಕು ಎಂದರು.   

         ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ  ಎಸ್.ಜಿ. ಸಲಗರೆ ಅವರು ಮಾತನಾಡಿ  ಹಿರಿಯ ನಾಗರಿಕರು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ    ಬಾಲ್ಯಾವಸ್ಥೆಯಲ್ಲಿ   ಇರುವ  ಚೈತನ್ಯ ಎದ್ದು ಕಾಣುತ್ತದೆ ಎಂದು ಪ್ರಶಂಶಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇ ಶಕ ಬಿ.ಬಿ. ವಿಶ್ವನಾಥ ,  ನಿವೃತ್ತ  ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್.ಬೇಲೂರ,  ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ. ಹೂಗಾರ ಅಲ್ಲದೇ  ಜಿ.ಎಸ್. ಹಿರೇಮಠ, ಪ್ರೋಬ್ಸ್ ಕ್ಲಬ್ದ  ಅಧ್ಯಕ್ಷ ಸುಭಾಸಚಂದ್ರ ಪೆಂಟಾ, ಐ.ಕೆ. ಕಮ್ಮಾರ್  ಹಾಗೂ  ವಿವಿಧ ಹಿರಿಯ ನಾಗರಿಕರು ಸಮಾರಂಭದಲ್ಲಿದ್ದರು.  ಕಾರ್ಯಕ್ರಮದಲ್ಲಿ ವಾಗ್ದೇವಿ ಕುಲಕಣರ್ಿ ಪ್ರಾಥರ್ಿಸಿದರು.  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ  ಆಶು ನದಾಫ್ ಸ್ವಾಗತಿಸಿದರು.   ರಾಜಶೇಖರ ಕರಡಿ ಕಾರ್ಯಕ್ರಮ ನಿರೂಪಿಸಿದರು.   ಹುಚ್ಪಪ್ಪ ವಂದಿಸಿದರು. ಅಕ್ಟೋಬರ್ 1 ರಂದು ಹಿರಿಯ ನಾಗರಿಕರ ದಿನಾಚರಣೆಯು ನಗರದ ಅಂಬೇಡ್ಕರ ಭವನದಲ್ಲಿ ಜರುಗಲಿದೆ.