ಶಶಿ ಥರೂರ್, ನಂದ ಕಿಶೋರ್ ಸೇರಿ 23 ಬರಹಗಾರರಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ

ನವದೆಹಲಿ, ಡಿ 18ಪ್ರಸಿದ್ದ  ಇಂಗ್ಲೀಷ್  ಬರಹಗಾರ ಹಾಗೂ ರಾಜಕಾರಣಿ  ಶಶಿ ಥರೂರ್,  ಸಾಹಿತಿ ಹಾಗೂ  ನಾಟಕಕಾರ  ನಂದಕಿಶೋರ್  ಆಚಾರ್ಯ  ಸೇರಿದಂತೆ   23 ಸಾಹಿತಿಗಳಿಗೆ ಈ ಬಾರಿಯ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಬುಧವಾರ ನಡೆದ  ಸಾಹಿತ್ಯ ಅಕಾಡೆಮಿ ಕಾರ್ಯಕಾರಿ  ಮಂಡಳಿ ಸಭೆಯಲ್ಲಿ  ಪ್ರಶಸ್ತಿ ಪಟ್ಟಿಗೆ  ಅನುಮೋದನೆ ನೀಡಿದ್ದು,  ಈ ಬಾರಿ  ನೇಪಾಳಿ ಭಾಷೆಗೂ  ಪ್ರಶಸ್ತಿಯನ್ನು ಪ್ರಕಟಿಸಲಾಗುತ್ತಿದೆ.ಜನವರಿ 25ರಂದು  ನಡೆಯಲಿರುವ    ಸಮಾರಂಭದಲ್ಲಿ  ಪ್ರಶಸ್ತಿ  ಪುರಸ್ಕೃತ   ಸಾಹಿತಿಗಳಿಗೆ  1 ಲಕ್ಷ ರೂಪಾಯಿ ನಗದು,  ಸ್ಮರಣಿಕೆ,   ಪ್ರಶಸ್ತಿ ಪತ್ರ  ನೀಡಿ ಗೌರವಿಸಲಾಗುವುದುರಾಜಸ್ಥಾನದ  ಬಿಕನೇರ್ ನ   ನಂದ ಕಿಶೋರ್  ಆಚಾರ್ಯ ಅವರ  ಕವನ ಸಂಕಲನ  "ಚಿಲ್ತೆ ಹೂ ಅಪ್ನೆ ಕೊ"  ಕೃತಿಗೆ  ಪ್ರಶಸ್ತಿ ನೀಡಲಾಗಿದೆಶಶಿ ಥರೂರ್   ತಮ್ಮ  ಸೃಜನಶೀಲವಲ್ಲದ ಗದ್ಯ " ಅನ್  ಎರಾ ಆಫ್  ಡಾರ್ಕ್ ನೆಸ್ "  ಕೃತಿಗೆ  ಪುರಸ್ಕಾರ ಪಡೆದುಕೊಂಡಿದ್ದಾರೆ