ದೈರ್ಯದಿಂದ ಪರೀಕ್ಷೆ ಬರೆಯಿರಿ: ಶಿಕ್ಷಕ ಹಿರೇಹೊಳಿ

ದೈರ್ಯದಿಂದ ಪರೀಕ್ಷೆ ಬರೆಯಿರಿ: ಶಿಕ್ಷಕ ಹಿರೇಹೊಳಿ Write the exam with courage: Teacher Hireholi

ತಾಳಿಕೋಟಿ 14 :  2025-2026ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ನಿರ್ಬಿತಿ, ಆತ್ಮ ವಿಶ್ವಾಸದೊಂದಿಗೆ ಪರೀಕ್ಷೆ ಬರೆಯಿರಿ ಕರ್ನಾಟಕ ರಾಜ್ಯದ ಎಲ್ಲಾ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗೆ ಬೆಸ್ಟ್‌ ಆಫ್ ಲಕ್ ಎಂದು ತಾಳಿಕೋಟಿ ಸಂಗಮೇಶ್ವರ ಪ್ರೌಢಶಾಲೆಯ ಹಿರಿಯ ಹಿಂದಿ ವಿಷಯ ಶಿಕ್ಷಕ ಬಿ.ಆಯ್‌.ಹಿರೇಹೊಳಿ ಅವರು ತಿಳಿಸಿದ್ದಾರೆ.  

ಪರೀಕ್ಷೆ ಪ್ರಾರಂಭಗೊಂಡಿವೆ ಎಂಬ ಭಯಬೇಡ, ಆತ್ಮ ವಿಶ್ವಾಸದಿಂದ ಪರೀಕ್ಷೆಯನ್ನು ನಿರ್ಭಯವಾಗಿ ಬರೆಯಿರಿ. ಪರೀಕ್ಷೆಗಳು ತಮ್ಮಲಿನ ಸಾಮರ್ಥ್ಯವನ್ನು ಹೊರಹಾಕುವ ಸಾಧನ,ಮುಂದಿನ ತರಗತಿಗೆ ಹೋಗಲು ಅರ್ಹತಾ ಮೆಟ್ಟಿಲು ಆಗಿದೆ ಪರೀಕ್ಷೆ ಎನ್ನುವುದು ಅಂಕಪಟ್ಟಿಗೆ ಸೀಮಿತವಲ್ಲ,ಇದರಿಂದ ಭಯಪಟ್ಟು ಊಟ ಬಿಡುವುದಾಗಲಿ ಬೇಡ,ಪರೀಕ್ಷಾ ಭಯದಿಂದ ಓದದೇ ಇಷ್ಟದಿಂದ ಓದಿರಿ,ತಿಳಿದುಕೊಂಡು ಓದಿದ್ದೆ ಆದಲ್ಲಿ ಅದು ಸಂಪೂರ್ಣ ನಿರ್ಭಯದ ಕಲಿಕೆಯಾಗುವುದು. 

ವರ್ಷವಿಡಿ ಓದಿದ್ದು ಇದ್ದೆ ಇರುತ್ತದೆ,ಈಗ ಅದನ್ನು ನೆನಪಿಸಿಕೊಂಡು ಬರೆಯುವ ಕೆಲಸ ಮಾತ್ರ ನಿಮ್ಮದಾಗಲಿ ಪರೀಕ್ಷೆಯಲ್ಲಿ ಮೊದಲು ತಮಗೆ ಸಂಪೂರ್ಣ ಉತ್ತರ ಗೊತ್ತಿದ್ದನ್ನು ಬರೆಯಿರಿ,ಗೊತ್ತಿಲ್ಲದ್ದನ್ನು ನೆನಪಿಸಿಕೊಂಡು ಬರೆಯಿರಿ,ಸರಯಾದ ಪ್ರಶ್ನೆ ಸಂಖ್ಯೆಯನ್ನು ಹಾಕಿ ಉತ್ತರ ಬರೆಯಿರಿ,ತರಗತಿಗಳಲ್ಲಿ ಇದೂವರೆಗೆ ಪರೀಕ್ಷೆಯಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಉತ್ತರಗಳನ್ನು ತಯಾರಿಸಿಕೊಳ್ಳಿ. 

ಒತ್ತಡಕ್ಕೆ ಒಳಗಾಗಿ ಉತ್ತರವನ್ನು ಬರೆಯಬೇಡಿ.ನಿಧಾನವಾಗಿ ನೆನಪಿಸಿಕೊಂಡು ಬರೆದು ನಿಮ್ಮ ಸಾಮರ್ಥ್ಯವನ್ನು ಹೊರಹಟಕುವಂತಹ ಕಾರ್ಯ ಮಾಡಿರಿ ಎಂದು ಶಿಕ್ಷಕ ಬಿ.ಆಯ್‌.ಹಿರೇಹೊಳಿ ಅವರು ಎಸ್‌ಎಸ್‌ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಬೆಸ್ಟ್‌ ಆಪ್ ಲಕ್ ಶುಭಾಶಯ ತಿಳಿಸಿದ್ದಾರೆ.