ಇಂದು ಡಾ.ಪ್ರಭುಗೌಡ ಲಿಂಗದಳ್ಳಿ ಬಳಗದಿಂದ ಇಫ್ತಾರ ಕೂಟ

ಇಂದು ಡಾ.ಪ್ರಭುಗೌಡ ಲಿಂಗದಳ್ಳಿ ಬಳಗದಿಂದ ಇಫ್ತಾರ ಕೂಟ Iftar party organized by Dr. Prabhugowda Lingadalli group today

ತಾಳಿಕೋಟಿ 14:  ಪವಿತ್ರ ರಮಜಾನ ಮಾಸದ ಅಂಗವಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಪಾಟೀಲ(ಲಿಂಗದಳ್ಳಿ) ಅಭಿಮಾನಿಗಳ ಬಳಗದ ವತಿಯಿಂದ ಮುಸ್ಲಿಂ ಬಾಂಧವರಿಗಾಗಿ ತಾಳಿಕೋಟಿ ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರದ ಪೀರಾಪೂರ ಗ್ರಾಮದಲ್ಲಿ ನಾಳೆ (ಮಾ.15) ರವಿವಾರ ಸೌಹಾರ್ದ ಇಫ್ತಾರ ಕೂಟವನ್ನು ಆಯೋಜಿಸಲಾಗಿದೆ. ಪೀರಾಪೂರ ಗ್ರಾಮದ ಎಸ್‌.ಬಿ.ಬಿರಾದಾರ ಸರಕಾರಿ ಪ್ರೌಢಶಾಲೆ ಹತ್ತಿರ ಸಂಜೆ 6-15 ಘಂಟೆಗೆ ನಡೆಯಲಿರುವ ಈ ಸೌಹಾರ್ದ ಇಫ್ತಾರ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಡಾ.ಪ್ರಭುಗೌಡ ಲಿಂಗದಳ್ಳಿ ಅಭಿಮಾನಿ ಗೆಳೆಯರ ಬಳಗದ ಪ್ರಕಟಣೆ ತಿಳಿಸಿದೆ.