ಕೊರೋನಾ ವಾರಿಯರ್ಸ್‌ಗೆ ಸಲಾಂ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಏ.30, ಕೋವಿಡ್19ರ ವಿರುದ್ಧದ ಹೋರಾಟದಲ್ಲಿ ಕರ್ತವ್ಯಕ್ಕಾಗಿ, ವೈಯಕ್ತಿಕ ತ್ಯಾಗಗಳ ಜತೆಗೆ, ಜೀವದ ಹಂಗು ತೊರೆದು ಸೇವೆಗಾಗಿ ಅರ್ಪಿಸಿಕೊಂಡಿರುವ ಪೌರಕಾರ್ಮಿಕರು, ಪೊಲೀಸರು, ವೈದ್ಯರು, ದಾದಿಯರು, ಕಮಾಂಡೊ ಪಡೆ, ಅಗ್ನಿಶಾಮಕ ಮತ್ತು ಭದ್ರತಾ ಸಿಬ್ಬಂದಿ, ಅಡುಗೆಯವರು, ಚಾಲಕರು, ಆಶಾ ಕಾರ್ಯಕರ್ತೆಯರೆಲ್ಲರಿಗೂ ಸಲಾಂ ಹೇಳೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೋನಾ ವಿರುದ್ಧ ಇವರೆಲ್ಲರೂ ಅಹರ್ನಿಶಿ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಧನ್ಯವಾದ ಸಲ್ಲಿಸೋಣ ಎಂದು ವಿವಿಧ ಗಾಯಕರು ಹಾಡಿರುವ "ನಿಮಗೊಂದು ಸಲಾಂ" ಎಂಬ ವಿಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.