ಏರ್ ಇಂಡಿಯಾದ ಪುನರುಜ್ಜೀವನಕ್ಕೆ ಸರ್ಕಾರ್ ಬದ್ಧ'

ನವದೆಹಲಿ; ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾದ ಪುನರುಜ್ಜೀವನಕ್ಕಾಗಿ ಕಾರ್ಯತಂತ್ರ ಹೂಡಿಕೆಗೆ ಬದ್ಧ ಎಂದು ಸಕರ್ಾರ ಲೋಕಸಭೆಗೆ ತಿಳಿಸಿದೆ   ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ ದೀಪ್ ಸಿಂಗ್ ಪುರಿ, ಜೆಟ್ ಏರ್ ವೇಸ್ ಮುಚ್ಚಿದ ಹೊರತಾಗಿಯೂ, ದೇಶೀಯ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ 17ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

      ಜೆಟ್ ಏರ್ ವೇಸ್ ಮುಚ್ಚಿದ್ದರೂ, ವಿಮಾನಗಳ ಹಾರಾಟದಲ್ಲಿ ಯಾವುದೇ ಕೊರತೆ ಕಂಡುಬಂದಿಲ್ಲ.  ಕೇವಲ ಏರ್ ಇಂಡಿಯಾ ಮಾತ್ರವಲ್ಲದೆ ಇತರ ಹಲವು ವಿಮಾನಯಾನ ಸಂಸ್ಥೆಗಳು ಸಹ ಆಥರ್ಿಕ ಸಂಕಷ್ಟದಲ್ಲಿವೆ.  ಏವಿಯೇಷನ್ ಟಬರ್ೈನ್ ಇಂಧನ (ಎಟಿಎಫ್) ಬೆಲೆಗಳು ಮತ್ತು ಇಂಧನದ ಮೇಲೆ ವಿಧಿಸಲಾಗುವ ಶೇ 28 ರಿಂದ 30ರ ವ್ಯಾಟ್ ಮತ್ತು ಕರೆನ್ಸಿಯ ಏರಿಳಿತದ ಕಾರಣದಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ಅವರು ವಿವರಿಸಿದ್ದಾರೆ.  

     ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಲು ಸಕರ್ಾರ ನಿರ್ಧರಿಸಿದ್ದು, ನಾಗರಿಕರಿಗೆ ಇದರ ಪ್ರಯೋಜನ ಸಿಗಲಿದೆ.  "ನಾವು ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಮೂಲಕ ಕಂಪನಿಯು ಭಾರತೀಯರ ಕೈಯಲ್ಲಿ ಉಳಿಯುವಂತೆ ನೋಡಿಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.   ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಸಚಿವರು, "ಏರ್ ಇಂಡಿಯಾಗೆ ಹೂಡಿಕೆ ಮಾಡಲು ಸಕರ್ಾರ ಬದ್ಧವಾಗಿದ್ದರೂ ಸಹ, ಹಣಕಾಸಿನ ನೆರವಿನೊಂದಿಗೆ ಏರ್ ಇಂಡಿಯಾದ ಪುನರುಜ್ಜೀವನ ಯೋಜನೆಗೆ ಸಕರ್ಾರ ಅನುಮೋದನೆ ನೀಡಿದೆ, ಇದು ಸ್ಪಧರ್ಾತ್ಮಕ ಮತ್ತು ಲಾಭದಾಯಕ ವಿಮಾನಯಾನ ಸಮೂಹವನ್ನು ನಿಮರ್ಿಸುವತ್ತ ಗಮನಹರಿಸುತ್ತದೆ" ಎಂದಿದ್ದಾರೆ.  

      ಏರ್ ಇಂಡಿಯಾಗಿ 3,975 ಕೋಟಿ ರೂ. ಸೇರಿದಂತೆ ಆಥರ್ಿಕ ಸಹಕಾರ ಒದಗಿಸಲಾಗುವುದು, ಏರ್ ಇಂಡಿಯಾ ಲಿಮಿಟೆಡ್ ನಿಂದ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್ ಪಿವಿ)ಗೆ 29,464 ಕೋಟಿ ಸಾಲದ ಮೊತ್ತ ವಗರ್ಾವಣೆ ಮಾಡಲಾಗುವುದು.  2018-19ನೇ ಸಾಲಿನ ಬಡ್ಡಿಗಾಗಿ ಏರ್ ಇಂಡಿಯಾ ಲಿಮಿಟೆಡ್ ಗೆ 7,600 ಕೋಟಿ ಮತ್ತು ಎಸ್ ಪಿವಿಗೆ 1300 ಕೋಟಿ ರೂ, ಸಕರ್ಾರದ ಖಾತರಿ ನೀಡಲಾಗುವುದು ಎಂದು ಸಚಿವ ಹರ್ ದೀಪ್ ಸಿಂಗ್ ಪುರಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.