ಅಥಣಿ 09: ಅಥಣಿ ಸಾರಿಗೆ ಘಟಕದಿಂದ ಶಾಲಾ ಮಕ್ಕಳ ಸಂಖ್ಯೆಯ ಅನುಗುಣವಾಗಿ ಅಗತ್ಯ ಮಾರ್ಗಗಳಲ್ಲಿ ಬಸ್ಸಗಳನ್ನು ಓಡಿಸುತ್ತಿಲ್ಲ. ಒಂದೇ ಬಸ್ದಲ್ಲಿ ನೂರಾರು ಮಕ್ಕಳು ಸಂಕಟಪಟ್ಟು ಗ್ರಾಮಗಳಿಗೆ ಹೋಗುತ್ತಿದ್ದಾರೆ. ಕೂಡಲೇ ಹೆಚ್ಚುವರಿ ಬಸ್ಸಗಳ ವ್ಯವಸ್ಥೆ ಮಾಡಬೇಕು ಎಂದು ವಿವಿಧ ಕನ್ನಡಪರ ಸಂಘಟನೆಗಳಿಂದ ಪ್ರತಿಭಟಿಸಿ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರವೇ ತಾಲೂಕಾಧ್ಯಕ್ಷ ಅಣ್ಣಾಸಾಹೇಬ ತೆಲಸಂಗ ಮಾತನಾಡಿ ತಾಲೂಕಿನ ವಿವಿಧ ಹಳ್ಳಿಗಳಿಂದ ಶಿಕ್ಷಣಕ್ಕಾಗಿ ಬರುವ ವಿದ್ಯಾಥರ್ಿಗಳಿಗೆ ಸಕಾಲಕ್ಕೆ ಸಾರಿಗೆ ಬಸಗಳು ಸಿಗದೇ ಒಂದೇ ಬಸದಲ್ಲಿ ಪ್ರಯಾಣಿಕರ ಜೊತೆ ವಿದ್ಯಾಥರ್ಿಗಳು ಜೋತು ಬಿದ್ದು ಗ್ರಾಮಕ್ಕೆ ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ. ಬೆಳಿಗ್ಗೆ ಸಾರಿಗೆ ಬಸ್ಗಳಲ್ಲಿ ಅಥಣಿಗೆ ಬರುವ ವಿದ್ಯಾಥರ್ಿಗಳು ಮಧ್ಯಾಹ್ನದ ವೇಳೆಗೆ ಶಾಲಾ ಕಾಲೇಜುಗಳು ಏಕ ಕಾಲಕ್ಕೆ ಬೀಡುವದರಿಂದ ಬಸ್ಗಳಿಗೆ ಪರದಾಡಬೇಕಾಗುತ್ತದೆ. ಕೆಲವೊಮ್ಮೆ ಬಸ್ಗಳು ಸಿಗದೇ ಖಾಸಗಿ ವಾಹನಗಳಲ್ಲಿ ಗ್ರಾಮಕ್ಕೆ ಹೋಗಬೇಕಾಗುತ್ತದೆ. ಅಲ್ಲದೇ ಸಾರಿಗೆ ಬಸ್ನಲ್ಲಿ ವಿಪರೀತ ಪಾಸ ವಿದ್ಯಾಥರ್ಿಗಳು ಹೋಗುವದರಿಂದ ವಯೋವೃದ್ಧರಿಗೆ ಮತ್ತು ಮಹಿಳೆಯರಿಗೆ ತೀವ್ರ ಸಮಸ್ಯೆಯಾಗುತ್ತಿದೆ.ಕೂಡಲೇ ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ಮಾತನಾಡಿ ಅಥಣಿಗೆ ಶಿಕ್ಷಣಕ್ಕೆ ಬರುವ ಗ್ರಾಮೀಣ ವಿಧ್ಯಾಥರ್ಿಗಳು ಹೆಚ್ಚಾಗಿ ರೈತರ ಮಕ್ಕಳಾಗಿದ್ದು, ಪಾಸ ನೀಡಿದಂತೆ ಸಂಕ್ಯೆಗೆ ಅನುಗುಣವಾಗಿ ಸಾರಿಗೆ ಬಸ್ಗಳನ್ನು ನೀಡೆಬೇಕು. ಈಗಾಗಲೇ ಸಾರಿಗೆ ಘಟಕದಿಂದ ಪ್ರಮುಖವಾಗಿ ಅಥಣಿ-ಮುರಗುಂಡಿ-ಸಿದ್ದೇವಾಡಿ, ಅಬ್ಬಿಹಾಳ-ಶಿವನೂರ,ಅಥಣಿ- ಮಲಾಬಾದ-ಖಿಳೇಗಾಂವ, ಅಥಣಿ-ಕಿರಣಗಿ-ತಾಂವಶಿ-ನಾಗನೂರ, ಅಥಣಿ-ಹುಲಗಬಾಳ,ಅಥಣಿ-ಹಲ್ಯಾಳ,ಅವರಖೋಡ, ಅಥಣಿ-ಬಡಚಿ, ಅಡಹಳ್ಳಿ,ಚಮಕೇರಿ, ಅಥಣಿ-ಅರಟಾಳ-ಬಾಡಗಿ, ಅಥಣಿ-ಶಂಕರಹಟ್ಟಿ, ಚಿಕ್ಕೂಡ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ಸಗಳನ್ನು ಓಡಿಸುವ ಮೂಲಕ ವಿದ್ಯಾಥರ್ಿಗಳಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದ ಅವರು ಹೆಚ್ಚುವರಿ ಸಾರಿಗೆ ಬಸಗಳನ್ನು ಓಡಿಸುವಂತೆ ಈಗಾಗಲೇ ವಿದ್ಯಾಥರ್ಿಗಳು ಮನವಿ ಮಾಡಿದರೂ ಬಸಗಳನ್ನು ಒದಗಿಸಿಲ್ಲ. ಈ ಮನವಿಗೆ ಸ್ಪಂದಿಸಿ ಹೆಚ್ಚುವರಿ ಬಸ್ಗಳ ಸೇವೆ ನೀಡದಿದ್ದರೆ ನೂರಾರು ವಿದ್ಯಾಥರ್ಿಗಳು ಸಮೇತ ಪತ್ರಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಯಕನರ್ಾಟಕ ಸಂಘಟನೆ ಅಧ್ಯಕ್ಷ ಗಜಾನನ ಕಾಂಬಳೆ, ಕನ್ನಡ ಸೇನೆಯ ಅಧ್ಯಕ್ಷ ಚಿದಾನಂದ ಶೇಗುಣಸಿ, ಕರವೇ ಕಾರ್ಯದಶರ್ಿ ಜಗನ್ನಾಥ ಬಾಮನೆ, ರಾಜು ತಂಗಡಿ, ಪುಂಡಲಿಕ ಸೂರ್ಯವಂಸಿ, ಸಿದ್ದು ಹಂಡಗಿ ಇನ್ನಿತರರು ಉಪಸ್ಥಿತರಿದ್ದರು.