ಮೂವರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

Woman commits suicide with three children

ರಾಯಬಾಗ 05: ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬುಧವಾರ ನಸುಕಿನ ಜಾವ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ವರದಿಯಾಗಿದೆ. 

ತಾಲೂಕಿನ ಚಿಂಚಲಿ ಪಟ್ಟಣದ ಶಾರದಾ ಅಶೋಕ ಢಾಲೆ(32), ಅಮೃತಾ ಢಾಲೆ(14), ಅನೂಷಾ ಢಾಲೆ(10), ಆದರ್ಶ ಢಾಲೆ(8) ಮೃತಪಟ್ಟ ದುರ್ದೈವಿಗಳು. ಶಾರದಾ ಇತಳ ಗಂಡ ಅಶೋಕ ಢಾಲೆ(45) ಇತನು ನಿತ್ಯ ಕುಡಿದು ಬಂದು ಕಿರುಕುಳದಿಂದ ಬೇಸತ್ತ ಶಾರದಾ ಇವಳು ತನ್ನ ಮೂವರು ಮಕ್ಕಳೊಂದಿಗೆ ಬುಧವಾರ ನಸುಕಿನ ಜಾವ ಚಿಂಚಲಿ ಸಮೀಪದ ಕೃಷ್ಣಾ ನದಿಗೆ ಹಾರಿದ್ದಾಳೆ. 

ಘಟನಾ ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.