ತಾಂಬಾ 05: ಪ್ರಸ್ತುತ ಬಹುತೇಕ ಗ್ರಾಮೀಣ ಭಾಗದಲ್ಲಿ ರಸ್ತೆಗಳನ್ನು ಅತೀಕ್ರಮಣ ಮಾಡಿ ರಸ್ತೆ ಮೇಲೆ ಮನೆ ಕಟ್ಟುವುದು. ಇಲ್ಲ ಕಟ್ಟೆ ಕಟ್ಟುವುದು ಸಾಮಾನ್ಯ ಸಂಗತಿ. ಆದರೆ, ತಾಂಬಾ ಗ್ರಾಮದಲ್ಲಿ ರಸ್ತೆಗಳನ್ನೆ ಒತ್ತುವರಿ ಮಾಡುವ ದುರಳರಿಗೆ ಹೇಳುವವರು ಕೇಳುವವರು ಇಲ್ಲದಂತಾಗಿದೆ ಹಿಗಾಗಿ ಗ್ರಾಮಸ್ಥರು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಈ ಕುರಿತು ಸಂಬಂಧಪಟ್ಟ ತಾಲೂಕಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ರಸ್ತೆಗಳನ್ನು ಪರೀಶೀಲನೆ ಮಾಡಿದ್ದರು. ಇದುವರೆಗೆ ಯಾವುದೇ ಪರಿಹಾರವಾಗಿಲ್ಲ. ರಸ್ತೆ ಒತ್ತುವರಿ ಮಾಡಿದವರು ಪ್ರಬಲರಾಗಿರಬಹುದು. ಅದಕ್ಕೆ ಅಂತವರ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪ ಮಾಡುತ್ತಿದ್ದಾರೆ. ರಸ್ತೆಗಳ ಮೇಲೆ ಮನೆಗಳನ್ನು ಕಟ್ಟಿ ಬಡವರ ಜಾಗವನ್ನು ಒತ್ತುವರಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹಿಗಿದ್ದರೂ ಗ್ರಾ.ಪಂ ಸದಸ್ಯರಾಗಲಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಿಡಿದು ಗ್ರಾಮದ ಯಾವೊಬ್ಬ ಹಿರಿಯರು ಕೂಡಾ ಈ ಕುರಿತು ಚಕಾರ ಎತ್ತುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಗ್ರಾಮದ ದುಂಡವ್ವ ಶಿವಪ್ಪ ಹಿರೇಕುರಬರ ಅವರು ಹಿಟ್ಟಿನ ಗಿರಣಿ ಹಾಗೂ ಬಾತ್ ರೂಮ್ ರಸ್ತೆಯ ಮೇಲೆ ಕಟ್ಟಿರುವದರಿಂದ ವಾಹಾನಗಳು ಹೊರಳಿಸಲು ಹರಸಾಹಾಸ ಪಾಡುತ್ತಿದ್ದಾರೆ ಮತ್ತು ವಿಶಿಷ್ಟಚೇತನ ಸೈಪನ್‌ಸಾಬ ಮುಲ್ಲಾ. ಇವರಿಗೆ 1995ರಲ್ಲಿ ಸರ್ಕಾರ ವಸತಿ ಯೋಜನೆ ಅಡಿಯಲ್ಲಿ 30*40 ಅಳತೆಯ ನಿವೇಶನ ನೀಡಿ ಅಧಿಕಾರಿಗಳು ಹಕ್ಕು ಪತ್ರ ನೀಡಿದ್ದಾರೆ. ಆದರೆ, ವಿಶಿಷ್ಟಚೇತನ ಸೈಪನಸಾಬನ ಮೇಲೆ ವಿನಃ ಕಾರಣ ಕೆಲವರು ದಬ್ಬಾಳಿಕೆ ಮಾಡಿ ಇತನ ಜಾಗದಲ್ಲಿ ಕಲ್ಲುಗಳನ್ನು ಕೂಡಿ ಹಾಕಿ ತೊಂದರೆ ಕೊಡುತ್ತಿದ್ದಾರೆ.
ಗ್ರಾಪಂ ನಿಂದ ಶ್ರೀ.ಮಾಹಾಲಕ್ಷ್ಮೀ ದೇವಸ್ಥಾನಕ್ಕೆ ಹೊಗುವ ಮುಖ್ಯ ರಸ್ತೆಯ ಮೇಲೆ ಹಿಟ್ಟು ಬೀಸುವ ಗಿರಣಿ, ಮನೆ ಮುಂದೆ ಸ್ಥಾನ ಬಳಕೆಗೆ ರೂಮ್, ಕಟ್ಟೆಯನ್ನು ಕಟ್ಟಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಹಾದು ಹೊಗಲುತೀವ್ರ ತೊಂದರೆಯಾಗುತ್ತಿದೆ. ಈ ಕೂಡಲೇ ಅಧಿಕಾರಿಗಳು ರಸ್ತೆ ಅತಿಕ್ರಮಣ ಮಾಡಿ ಕಟ್ಟಿರುವ ಹಿಟ್ಟಿನ ಗಿರಣಿ ಹಾಗೂ ಬಾತ್ ರೂಮ್ ಅನ್ನು ತೆರವುಗೊಳಿಸಿ ರಸ್ತೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ವಿಳಂಬ ನೀತಿ ಅನುಸರಿಸಿದಲ್ಲಿ ಗ್ರಾಪಂ ಎದುರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ನಿಜವಾದ ಫಲಾನುಭವಿ ಇದ್ದಲ್ಲಿ ಕೆಪಿಆರ್ ಆಕ್ಟ್ ಪ್ರಕಾರ ಕ್ರಮ ಕೈಗೊಳ್ಳಲು ಪಿಡಿಒ ಅವರಿಗೆ ಸೂಚಿಸುತ್ತೇನೆ. ಪ್ರಾಮಾಣಿಕವಾಗಿ ನ್ಯಾಯ ಕೊಡಿಸುತ್ತೇನೆ.
-ನಂದೀಪ ರಾಠೋಡ, ತಾಪಂ ಇಓ ಇಂಡಿ.
ಈಗಾಗಲೆ ರಸ್ತೆಯನ್ನು ಒತ್ತುವರಿ ಮಾಡಿ ಹಿಟ್ಟಿನ ಗೀರಣಿ ಹಾಗೂ ಬಾತ್ ರೂಮ್ ಕಟ್ಟಿದವರಿಗೆ ನೋಟಿಸ್ ಜಾರಿ ಮಾಡಿ ತೆರವು ಗೊಳಿಸಲು ಸೂಚಿಸಲಾಗಿದೆ. ತೆರವು ಗೊಳಿಸ ದಿದ್ದರೆ ಮೂಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವದು.
-ಶ್ರೀಕಾಂತ ಹಡಲಸಂಗ ಪಿಡಿಒ ತಾಂಬಾ.