ವಾಷಿಂಗ್ಟನ್ 05: ಭಾರತ, ಸೇರಿದಂತೆ ಮತ್ತಿತರ ರಾಷ್ಟ್ರಗಳಿಗೆ ಪ್ರತಿಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಅಮೆರಿಕದ ಉತ್ಪನ್ನಗಳ ಬಗ್ಗೆ ಹೆಚ್ಚಿನ ಸುಂಕ ವಿಧಿಸುವ ಬಗ್ಗೆ ಕಿಡಿಕಾರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುರೋಪಿಯನ್ ಒಕ್ಕೂಟ, ಚೀನಾ, ಬ್ರೆಜಿಲ್, ಭಾರತ, ಮೆಕ್ಸಿಕೊ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳು ನಾವು ಅವರ ಉತ್ಪನ್ನಗಳ ಮೇಲೆ ವಿಧಿಸುವುದಕ್ಕಿಂತ ಹೆಚ್ಚಿನ ಸುಂಕ ವಿಧಿಸುತ್ತವೆ. ಇದು ಅಮೆರಿಕಕ್ಕೆ ಆಗುತ್ತಿರುವ 'ಅನ್ಯಾಯ'. ಇದರಿಂದಾಗಿ ಮುಂದಿನ ತಿಂಗಳಿನಿಂದ ಪ್ರತಿ ಸುಂಕ ವಿಧಿಸುವ ನಿರ್ಣಯ ತೆಗೆದುಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ
ಪ್ರತಿ ಸುಂಕ ಏಪ್ರಿಲ್ 2 ರಂದು ಜಾರಿಗೆ ಬರಲಿದ್ದು, ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕದಷ್ಟೇ ವಿದೇಶಿ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಸುಂಕ ವಿಧಿಸಲಾಗುವುದು. ಇತರ ದೇಶಗಳು ದಶಕಗಳಿಂದಲೂ ನಮ್ಮ ಉತ್ಪನ್ನಗಳ ಮೇಲೆ ಸುಂಕ ವಿಧಿಸುತ್ತಲೇ ಇವೆ. ಈಗ ಪ್ರತಿಯಾಗಿ ಅಂತಹ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಸುಂಕು ವಿಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಭಾರತ ದೇಶ ನಮ್ಮ ಮೇಲೆ ಶೇ. 100 ಕ್ಕಿಂತ ಹೆಚ್ಚಿ ಸುಂಕ ವಿಧಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.