ಭಾರತ ಸಂಸ್ಥೆವತಿಯಿಂದ ಉಚಿತ ಸಾಮೂಹಿಕ ವಿವಾಹ
ಶಿಗ್ಗಾವಿ 06 : ತಾಲೂಕಿನ ಬನ್ನೂರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಇದೇ ಮಾ 30 ರಂದು ಭಾರತ ಸೇವಾ ಸಂಸ್ಥೆ (ರಿ) ಬನ್ನೂರು ವತಿಯಿಂದ ಹಾಗೂ ಬನ್ನೂರ ಗ್ರಾಮಸ್ಥರಸಹಕಾರದೊಂದಿಗೆ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಸೇವಾ ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ 11 ನೇ ವರ್ಷದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾ 30 ರಂದು ಯುಗಾದಿಯ ದಿನದಂದು ಹಮ್ಮಿಕೊಂಡಿದ್ದು ವಿವಾಹವಾಗಲು ಇಚ್ಚಿಸುವವರು ಹೆಸರು ನೋಂದಾಯಿಸಲು ರೇವಣಸಿದ್ದಯ್ಯ ಹಿರೇಮಠ -7259241155 ಶಂಕರಗೌಡ ಪೊಲೀಸ್ ಗೌಡ್ರ- 9902662177, ನಿಸ್ಸಿಮಪ್ಪ ಗಾಣಿಗೇರ- 9380243861,ಬಸವರಾಜ ಮಾಯಣ್ಣವರ- 9972223817 9886820436 ಸಂಪರ್ಕಿಸಲು ತಿಳಿಸಿದರು.