ಗ್ರಾಮಗಳ ಸ್ವಚ್ಛತೆಗೆ ಶೌಚಾಲಯ ನಿಮರ್ಿಸಿಕೊಳ್ಳಿ: ಸಿಇಒ ರಾಮಚಂದ್ರನ್


ಬೆಳಗಾವಿ:: ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಮನೆಗೊಂದು ಶೌಚಾಲಯ ನಿಮರ್ಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಮಚಂದ್ರನ್.ಆರ್. ಅವರು ಕರೆ ನೀಡಿದರು. 

ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮಕ್ಕೆ ಶನಿವಾರ (ಆ.4) ಬೆಳಿಗ್ಗೆ 6.30 ಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.

ಒಬ್ಬ ವ್ಯಕ್ತಿ ಶುಚಿತ್ವ ಹಾಗೂ ಆರೋಗ್ಯವಾಗಿ ಬದುಕಲು ಶೌಚಾಲಯದ ಅವಶ್ಯಕತೆ ಇದೆ. ಬಯಲು ಶೌಚಕ್ಕೆ ಹೋಗುವುದರಿಂದ ವಯಸ್ಕ ಹೆಣ್ಣು ಮಕ್ಕಳು, ಮಹಿಳೆಯರ ಪರಿಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ಮನೆಗೊಂದು ಶೌಚಾಲಯವನ್ನು ಕಟ್ಟಿಸಿಕೊಂಡು, ಬಳಕೆ ಮಾಡಲು ತಿಳಿಸಿದರು.    

"ನಿಮ್ಮದೇ ಗ್ರಾಮ ನಿಮ್ಮದೇ ಸ್ವಚ್ಛತೆ" ಎಂಬ ಸಂದೇಶವನ್ನು ನೀಡುತ್ತಾ, ಗ್ರಾಮದಲ್ಲಿ ಈಗಾಗಲೇ ಶೌಚಾಲಯಗಳನ್ನು ಕಟ್ಟಿಸಿಕೊಂಡಿರುವ ಮಹಿಳೆಯರು ಬೇರೆಯವರಿಗೂ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಪ್ರೇರೆಪಿಸಬೇಕೆಂದು ತಿಳಿಸಿದರು. 

ಸ್ವಚ್ಛ ಬಾರತ ಮಿಷನ್ ಯೋಜನೆಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೂ ಶೌಚಾಲಯ ನಿಮರ್ಾಣದ ಗುರಿಯನ್ನು ನೀಡಿದ್ದು, ಪ.ಜಾ ಮತ್ತು ಪರಿಶಿಷ್ಟ ಪಂಗಡದವರಿಗೆ ತಲಾ ರೂ.15 ಸಾವಿರ ಹಾಗೂ ಉಳಿದ ಫಲಾನುಭವಿಗಳಿಗೆ ರೂ.12 ಸಾವಿರ ಸಹಾಯಧನವನ್ನು ನೀಡಲಾಗುವುದು ಶೌಚಾಲಯ ನಿಮರ್ಾಣ ಮಾಡಲು ಕೇವಲ 4ಥ4 ಪೂಟ್ ಜಾಗವಿದ್ದರೆ ಸಾಕು, ಅಷ್ಟರಲ್ಲಿ ಶೌಚಾಲಯ ನಿಮರ್ಾಣ ಮಾಡಿಕೊಳ್ಳಬಹುದು ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. 

ಮಕ್ಕಳೊಂದಿಗೆ ಸಮಾಲೋಚನೆ:

ಗ್ರಾಮದ ಶಾಲೆಗೆ ಭೇಟಿ ನೀಡಿದ ಸಿಇಒ ರಾಮಚಂದ್ರನ್ ಅವರು, ಸತ್ಯಾಗ್ರಹದ ಮೂಲಕ ತನ್ನ ಮನೆಯಲ್ಲಿ  ಶೌಚಾಲಯವನ್ನು ಕಟ್ಟಿಸಿಕೊಂಡ ಕೊಪ್ಪಳ ಜಿಲ್ಲೆಯ ಮಲ್ಲಮ್ಮ ಎಂಬ ವಿದ್ಯಾಥರ್ಿನಿಯ ಬಗ್ಗೆ ಶಾಲೆಯ ವಿದ್ಯಾಥರ್ಿಗಳಿಗೆ ತಿಳಿಸಿದರು.

ಶೌಚಾಲಯದ ಮಹತ್ವ ಮತ್ತು ಬಯಲು ಶೌಚಕ್ಕೆ ಹೋಗುವುದರಿಂದ ಆರೋಗ್ಯದ ಮೇಲೆ ಆಗುವಂತಹ ತೊಂದರೆಗಳು ಬಗ್ಗೆ ಮಕ್ಕಳಿಗೆ ತಿಳಿಹೇಳಿದರು. ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಮತ್ತು ಶೌಚಾಲಯಗಳನ್ನು ಬಳಸುವಂತೆ ಪೋಷಕರಿಗೆ, ಹಿರಿಯರಿಗೆ ಮನವೊಲಿಸಲು ಹೇಳಿದರು. 

ನಂತರ ಕನರ್ಾಟಕ ಕಸ್ತೂರಿಬಾ ಬಾಲಿಕಾ ವಸತಿ ನಿಲಯ ಮತ್ತು ಹಿಂದುಳಿದ ವರ್ಗಗಳ ವಸತಿ ನಿಲಯಗಳ ವಿದ್ಯಾಥರ್ಿನಿಯರೊಂದಿಗೆ ಮಾತನಾಡಿದ ರಾಮಚಂದ್ರನ್ ಅವರು, ಜೀವನದ ಸರ್ವತೋಮುಖ ಆಭಿವೃದ್ಧಿಗೆ ವಿದ್ಯೆ ಪ್ರಮುಖ ಅಸ್ತ್ರವಾಗಿದೆ. ಎಂದರು.

ಬಾಲ್ಯ ವಿವಾಹ ಸಮಾಜಕ್ಕೆ ದೊಡ್ಡ ಪಿಡುಗಾಗಿದ್ದು, ಪೋಷಕರು ಒತ್ತಾಯದಿಂದ ಬಾಲ್ಯವಿವಾಹ ಮಾಡುತ್ತಿದ್ದರೆ ತಾವು ನಾನು ಶಿಕ್ಷಣವನ್ನು ಪೂರೈಸಿಯೇ ಮದುವೆಯಾಗುವುದಾಗಿ ತಿಳಿಸಬೇಕೆಂದು ಹೇಳಿದರು. ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಬಾಲ್ಯವಿವಾಹ ನಡೆಯುವುದು ಕಂಡುಬಂದರೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಎಂದು ತಿಳಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದಶರ್ಿಗಳಾದ ಎ.ಎಂ. ಪಾಟೀಲ, ರಾಮದುರ್ಗ ತಾಲೂಕು ಪಂಚಾಯತ ಕಾರ್ಯ ನಿವರ್ಾಹಕ ಅಧಿಕಾರಿ ರಾಜಶೇಖರ ನಿಡೋನಿ, ಸಹಾಯಕ ನಿದರ್ೇಶಕ (ಗ್ರಾಉ) ಸೋಮರಡ್ಡಿ ಹೊಂಗಲ,  

ಸಹಾಯಕ ಕಾರ್ಯ ನಿವರ್ಾಹಕ ಅಭಿಯಂತರರು, ತೋಟಗಾರಿಕಾ ಇಲಾಖೆಯ ಸಹಾಯಕ ನಿದರ್ೇಶಕರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕೃಷಿ ಇಲಾಖೆಯ ಸಹಾಯಕ ನಿದರ್ೇಶಕರು, ತಾಲೂಕು ಯೋಜನಾಧಿಕಾರಿಗಳು, ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳು, ಸಹಾಯಕ ನಿದರ್ೇಶಕರು ಅಕ್ಷರ ದಾಸೋಹ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.




ಮಕ್ಕಳ ಹಕ್ಕುಗಳಿಗೆ ಧಕ್ಕೆ ಮಾಡದಿರಿ: ಕಿರಣ ಕಿಣಿ

ಬೆಳಗಾವಿ: ಮಕ್ಕಳು  ನಮ್ಮ ಸಂಪತ್ತು. ಮಕ್ಕಳ ಹಕ್ಕುಗಳಿಗೆ ದಕ್ಕೆಯಾಗದಂತೆ ನೋಡಿಕೊಳ್ಳುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ಕಿರಣ ಕಿಣಿ ಅವರು ಕರೆ ನೀಡಿದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ಸಹಾಯವಾಣಿ 1098 ಹಾಗೂ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕಾಕತಿಯ ಸೇಂಟ್ ಜಾನ್ಸ ಆಂಗ್ಲ ಮಾದ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಮತ್ತು ಮಕ್ಕಳ ಸಹಾಯವಾಣಿ ತಿಳುವಳಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀಮತಿ ಎಸ್.ವಿ. ಮೋಟಗಿ ಅವರು ಮಕ್ಕಳ ಹಕ್ಕುಗಳ ಕುರಿತು  ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಶ್ರೀಮತಿ ಭಾರತಿ.ಎಸ್. ವಾಳ್ವೇಕರ ಅವರು ಮಾದಕ ದ್ರ್ರವ್ಯದ ವ್ಯಸನಗಳ ಹಾಗೂ ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಮಾತನಾಡಿದರು.

ಎಎಸೈ ಸುರೇಶ.ಎ. ನೂಲಿ ಅವರು ಮಾತನಾಡಿ, 18 ವರ್ಷದೊಳಗಿನ ಮಕ್ಕಳಿಗೆ ಏನಾದರು ಸಮಸ್ಯೆ ಇದಲ್ಲಿ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ಅಥವಾ 100ಕ್ಕೆ ಕರೆ ಮಾಡಿ ಎಂದು ತಿಳಿಸಿದರು.

       ನಂತರ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು ಹಾಗೂ ಮಕ್ಕಳಿಗೆ ಮರ, ಗಿಡಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕುರಿತು ಮಾಹಿತಿ ನೀಡಲಾಯಿತು.

          ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿ 1098 ತಂಡದ ಸದಸ್ಯರಾದ ಶ್ರೀಮತಿ ಶಿವಲೀಲಾ ಹಿರೇಮಠ, ರಾಜು ಭೋಜಪ್ಪಗೋಳ, ಶ್ರೀಮತಿ ಸುಧಾ ಕೋಲಕಾರ ಹಾಗೂ ಶಾಲಾ ಸಿಬ್ಬಂದಿಯ ಉಪಸ್ಥಿತರಿದ್ದರು. 

ಶ್ರೀಮತಿ ಪಂಕಜಾ ನಿರೂಪಿಸಿದರು. ಶ್ರೀಮತಿ ಸುಜಾತಾ ಪೈ ಸ್ವಾಗತಿಸಿದರು, ವಿದ್ಯಾಶ್ರೀ ವಂದಿಸಿದರು.