ಬೆಳಗಾವಿ 22: ಮಾನಸಿಕ ಮತ್ತು ದೈಹಿಕ ಆರೋಗ್ಯ ವಂತ ಯುವಕರಿಂದ ಮಾತ್ರ ಶ್ರಮದಾನ ಸಾಧ್ಯ. ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಶಿಸ್ತುಬದ್ಧ, ಸಮಯಪ್ರಜ್ಞೆಯ ಮೂಲಕ ಯುವಕರು ಸಮಾಜ ಸುಧಾರಣೆಯಲ್ಲಿ ತೊಡಗಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ನೈಜ ಸಂಘಟನೆಯ ಹೋರಾಟ ಅನಿವಾರ್ಯವಾಗಿದೆ ಎಂದು ಕರ್ನಾಟಕ ಪರಿಶಿಷ್ಠ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯ ರಾಜ್ಯಾಧ್ಯಕ್ಷ ಮಹೇಶ ಶಿಗಿಹಳ್ಳಿ ತಿಳಿಸಿದರು.ಕರ್ನಾಟಕ ಪರಿಶಿಷ್ಠ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೂತನ ನೇಗಿನಹಾಳ ಗ್ರಾಮ ಘಟಕ ಮತ್ತು ಕುರುಗುಂದ ಗ್ರಾಮ ಘಟಕ ಶನಿವಾರ (ಮಾ.21) ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಸಂಚಾಲಕರಾಗಿ ಆಯ್ಕೆಯಾದ ಭೀಮಪ್ಪ ಗಣಿಕೊಪ್ಪ, ಬೆಳಗಾವಿ ಜಿಲ್ಲೆಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಿದ್ದು ಜೋಡಗೇರಿ, ಬೆಳಗಾವಿ ಜಿಲ್ಲಾ ಪ್ರಧಾನ ಸಂಚಾಲಕರಾಗಿ ಅಯ್ಕೆಯಾದ ಅಜ್ಜಪ್ಪ ತಳಕಟನಾಳ, ನೆಗಿನಹಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಫಕ್ಕೀರ್ಪ ತಳವಾರ, ನೆಗಿನಹಾಳ್ ಗ್ರಾಮದ ಉಪದ್ಯಕ್ಷರಾಗಿ ಫಕ್ಕೀರ್ಪ ಲಿ ತಳವಾರ್, ಕುರುಗುಂದ ಗ್ರಾಮದ ಅಧ್ಯಕ್ಷರಾಗಿ ಫಕ್ಕೀರ್ಪ ಗುಮ್ಮಗೋಳ, ಕುರುಗುಂದ ಗ್ರಾಮದ ಉಪಾಧ್ಯಕ್ಷರಾಗಿ ಸಂಗಪ್ಪ ತಳವಾರ್, ಈರಣ್ಣ ಲಕ್ಕುಂಡಿ, ಕುರುಗುಂದ ಗ್ರಾಮ ಘಟಕ ಶಿವಾನಂದ್ ಮುತ್ನಳ ಆಯ್ಕೆ ಮಾಡಿ ಪದಗ್ರಹಣ ಮಾಡಲಾಯಿತು.ಇದೇ ಸಂದರ್ಭದಲ್ಲಿ ರಾಜ್ಯ ಕಮಿಟಿಯ ಪದಾಧಿಕಾರಿಗಳು ಬೆಳಗಾವಿ ಜಿಲ್ಲಾ ಕಮಿಟಿಯ ಪದಾಧಿಕಾರಿಗಳು ಬೆಳಗಾವಿ ನಗರ ಹಾಗೂ ಗ್ರಾಮೀಣ ಪದಾಧಿಕಾರಿಗಳು ಮತ್ತು ಗ್ರಾಮದ ಎಲ್ಲ ಯುವಕರು ಗುರು ಹಿರಿಯರು ಉಪಸ್ಥಿತರಿದ್ದರು.