ಹುಬ್ಬಳ್ಳಿ, ಡಿ 17 ಆರ್ಯನ್
ಜುಯೆಲ್ ( ಔಟಾಗದೆ 35 ರನ್) ಅವರ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ಉತ್ತರ ಪ್ರದೇಶ ತಂಡ 2019-20ರ ಆವೃತ್ತಿಯ ರಣಜಿ ಟ್ರೋಫಿ ಎಲೈಟ್
ಎ ಮತ್ತು ಬಿ ಎರಡನೇ ಸುತ್ತಿನ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಕರ್ನಾಟಕ ವಿರುದ್ಧ ಉತ್ತಮ ಆರಂಭ
ಪಡೆದಿದೆ.ಇಲ್ಲಿನ, ಕೆಎಸ್ ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್
ಆರಂಭಿಸಿದ ಉತ್ತರ ಪ್ರದೇಶ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 32 ಓವರ್ ಗಳಿಗೆ ಒಂದು ವಿಕೆಟ್ ನಷ್ಟಕ್ಕೆ
74 ರನ್ ಗಳಿಸಿದೆ. ಆ ಮೂಲಕ ಉತ್ತಮ ಆರಂಭ ಪಡೆದಿದೆ.ಆರಂಭಿಕರಾಗಿ ಕಣಕ್ಕೆ ಇಳಿದ ಅಲ್ಮಾಸ್ ಶೌಕತ್
ಹಾಗೂ ಆರ್ಯನ್ ಜುಯೆಲ್ ಜೋಡಿಯು ಮುರಿಯದ ಮೊದಲನೇ ವಿಕೆಟ್‌ಗೆ
56 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿತ್ತು. 76 ಎಸೆತಗಳಲ್ಲಿ 22 ರನ್ ಗಳಿಸಿ ದೊಡ್ಡ ಇನಿಂಗ್ಸ್
ಕಟ್ಟುವ ಮುನ್ಸೂಚನೆ ನೀಡಿದ್ದ ಅಲ್ಮಾಸ್ ಶೌಕತ್ ಅವರು ರೋನಿತ್ ಮೋರೆ ಎಸೆತದಲ್ಲಿ ಆರ್. ಸಮರ್ಥ್
ಗೆ ಕ್ಯಾಚ್ ನೀಡಿ ನಿರಾಸೆಯಿಂದ ಪೆವಿಲಿಯನ್ ಸೇರಿದರು.ಅದ್ಭುತ ಬ್ಯಾಟಿಂಗ್ ಮಾಡಿದ ಆರ್ಯನ್ ಜಯೆಲ್
ಕರ್ನಾಟಕ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. 88 ಎಸೆಗಳಲ್ಲಿ 35 ರನ್ ಗಳಿಸಿ ಬ್ಯಾಟಿಂಗ್
ಮುಂದುವರಿಸಿದ್ದಾರೆ. ಇವರ ಜತೆ ಮತ್ತೊಂದು ತುದಿಯಲ್ಲಿ ಮಾಧವ್ ಕೌಶಿಕ್ (13) ಇದ್ದಾರೆ.ಸ್ಟಾರ್ ಆಟಗಾರರಾದ
ಕೆ.ಗೌತಮ್, ಮಯಾಂಕ್ ಅಗರ್ವಾಲ್ ಹಾಗೂ ಪವನ್ ದೇಶ್‌ಪಾಂಡೆ
ಅವರ ಅನುಪಸ್ಥಿಯಲ್ಲಿ ಕರ್ನಾಟಕ ಎರಡನೇ ಸುತ್ತಿನ ಪಂದ್ಯವಾಡುತ್ತಿದೆ. ಮಯಾಂಕ್, ವೆಸ್ಟ್ ಇಂಡೀಸ್
ವಿರುದ್ಧದ ಏಕದಿನ ಸರಣಿ ಆಡಲು ತೆರಳಿದ್ದಾರೆ. ಕೆ.ಗೌತಮ್ ಹಾಗೂ ಪವನ್ ಇಬ್ಬರೂ ಗಾಯಗೊಂಡಿದ್ದಾರೆ.ಮೊದಲ
ಪಂದ್ಯದಲ್ಲಿ ಕರ್ನಾಟಕ 26 ರನ್ ಗಳಿಂದ ತಮಿಳುನಾಡು ವಿರುದ್ಧ ರೀಚಕ ಜಯ ಸಾಧಿಸಿತ್ತು.ಸಂಕ್ಷಿಪ್ತ
ಸ್ಕೋರ್‌ಉತ್ತರ ಪ್ರದೇಶಪ್ರಥಮ ಇನಿಂಗ್ಸ್: 32 ಓವರ್‌ಗಳಿಗೆ 74/1 (ಆರ್ಯನ್ ಜುಯೆಲ್ ಔಟಾಗದೆ
35, ಅಲ್ಮಾಸ್ ಶೌಕತ್ 22; ರೋನಿತ್ ಮೋರೆ 11 ಕ್ಕೆ 1)