ಕೊಚ್ಚಿ, ಆ 26 ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿರುವ ಕಾಂಗ್ರೆಸ್ ಮುಖಂಡ, ತಿರುವನಂತಪುರಂ ಲೋಕಸಭಾ ಸಂಸದ ಶಶಿ ತರೂರ್ ಅವರನ್ನು ಕೇರಳದ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತಾಲ ಟೀಕಿಸಿದ್ದಾರೆ.
ಆಲಪ್ಪುಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್, ಮೋದಿಯವರನ್ನು ಹೊಗಳಿದವರನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುವುದಿಲ್ಲ ಎಂದರು
ಮೋದಿಯವರು ಈ ಹಿಂದೆ ನಡೆಸಿರುವ 'ಜನ ವಿರೋಧಿ' ಕೃತ್ಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಸಾವಿರಾರು ತಪ್ಪುಗಳನ್ನು ಮಾಡಿದ ಪ್ರಧಾನ ಮಂತ್ರಿಯ ಒಂದು ಒಳ್ಳೆಯ ಕಾರ್ಯವನ್ನು ನಾವು ವೈಭವೀಕರಿಸಬಾರದು ಅವರ ಆಡಳಿತ ಮತ್ತು ಕಾರ್ಯಗಳನ್ನು ಇಲ್ಲಿನ ಜನರು ಬೆಂಬಲಿಸುವುದಿಲ್ಲ "ಎಂದು ಹೇಳಿದರು.
ಇತ್ತೀಚೆಗಷ್ಟೆ ಕಾಂಗ್ರೆಸ್ ಮುಖಂಡ ಜೈ ರಾಮ್ ರಮೇಶ್ ಎಲ್ಲ ಸಂದರ್ಭದಲ್ಲಿಯೂ ಪ್ರಧಾನಿಯವರನ್ನು ಟೀಕಿಸಲಾಗದು ಉತ್ತಮ ಕೆಲಸಗಳನ್ನು ಮಾಡಿದಾಗ ಮೆಚ್ಚುಗೆ ವ್ಯಕ್ತಪಡಿಸಬೇಕು ಎಂದು ಹೇಳಿದ್ದರು. ಈ ಮಾತಿಗೆ ಅಭಿಷೇಕ್ ಮನು ಸಿಂಘ್ವಿ, ಶಶಿ ತರೂರ್ ಕೂಡ ಬೆಂಬಲ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಏತನ್ಮಧ್ಯೆ, ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಸಂಸದ ಕೆ ಮುರಳೀಧರನ್, ಮೋದಿಯನ್ನು ಹೊಗಳಲು ಬಯಸುವ ಕಾಂಗ್ರೆಸ್ ನಾಯಕರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರಬಹುದು ಎಂದು ಕಿಡಿ ಕಾರಿದ್ದು, "ಅಂತಹ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯಲು ಬಯಸಿದರೆ ಇಂತಹ ಸ್ವೀಕಾರಾರ್ಹವಲ್ಲದ ಕೆಲಸಗಳನ್ನು ನಿಲ್ಲಿಸಬೇಕು" ಎಂದಿದ್ದಾರೆ
ರಾಜ್ಯದ ಇತರ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿರುವ ಶಶಿ ತರೂರ್, ಈ ವಿಷಯದ ಬಗ್ಗೆ ವಿಭಿನ್ನ ಅಭಿಪ್ರಾಯ ಹೊಂದಿರುವ ನಾಯಕರ ಪಾಠ ಕೇಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ
ಕೇರಳ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್, ತರೂರ್ ಅವರು ಮೋದಿಯವರನ್ನು ಹೊಗಳಿರುವುದು 'ದುರದೃಷ್ಟಕರ' ಮತ್ತು ಅವರು ಅವರೊಂದಿಗೆ ಈ ಕುರಿತು ಮಾತನಾಡಲಾಗುವುದು ಎಂದು ಹೇಳಿದರು.