ರಾಮದುರ್ಗ :ಪಟ್ಟಣದಲ್ಲಿ ದುಡಿಯುವ ಜನತೆಗೆ ಸ್ವಯಂ ಉದ್ಯೋಗಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ, ಉತ್ತಮ ವಹಿವಾಟು ನಡೆಸುವ ಮೂಲಕ 2017-18 ನೇ ಸಾಲಿನಲ್ಲಿ ಸುಮಾರು 14 ಲಕ್ಷ ರೂ. ಲಾಭಾಂಶದಲ್ಲಿದೆ ಎಂದು ಸೊಸೈಟಿಯ ಅಧ್ಯಕ್ಷ ಶಶಿಧರ ಮಾಳವಾಡ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ದಿ. ಮಹಾಂತೇಶ ಅರ್ಬನ್ ಕೋ-ಆಪ್ ಕ್ರೇಡಿಟ್ ಸೊಸೈಟಿಯಲ್ಲಿ ಜರುಗಿದ ಸಂಘದ 25 ನೇ ವಾಷರ್ಿಕ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಸೊಸೈಟಿ 951 ಶೇರುದಾರರು, 424 ಸಹಶೇರುದಾರ ಸೇರಿದಂತೆ 1375 ಸದಸ್ಯರನ್ನು ಹೊಂದಿದ್ದು, 30 ಲಕ್ಷಕ್ಕೂ ಅಧಿಕ ಶೇರು ಬಂಡವಾಳ, 4 ಕೋಟಿಗೂ ಅಧಿಕ ದುಡಿಯುವ ಬಂಡವಾಳ ಹೊಂದಿದೆ. ಸಂಘ ಹೊಸ ಕಟ್ಟಡ ನಿಮರ್ಾಣ ಮಾಡುತ್ತಿದ್ದು, ಮುಂಬರುವ ವರ್ಷದಲ್ಲಿ ಕಟ್ಟಡ ಸಂಪೂರ್ಣಗೊಳ್ಳಿದೆ. ಗ್ರಾಹಕರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅಧಿಕ ಅಂಕ ಪಡೆದ ಸರಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾಥರ್ಿಗಳ ಪೈಕಿ ಇಬ್ಬರು ವಿದ್ಯಾಥರ್ಿಗಳಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು. ಸಂಘದ ಜೊತೆಗೆ ಉತ್ತಮ ಸಂಬಂಧ ಹೊಂದಿ ಸಕಾಲಕ್ಕೆ ವಹಿವಾಟು ನಡೆಸಿದ 5 ಸದಸ್ಯರನ್ನು ಸನ್ಮಾನಿಸಲಾಯಿತು.
ಸೊಸೈಟಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಗೋವಿಂದ ಮಡ್ಡಿ, ನಿದರ್ೇಶಕರಾದ ಮಹಾದೇವಪ್ಪ ಕಲಹಾಳ, ಶಿವಾನಂದ ಅಂಗಡಿ, ಜಗದೀಶ ಲಾಗೋಟಿ, ಅಶೋಕ ಶಿರೋಳ, ಶಂಕರ ಸೂಳಿಭಾಂವಿ ಭರಮಣ್ಣ ಗ್ವಾಡಿ, ಎಸ್. ಎಸ್. ದಡೇದ, ಗಂಗಣ್ಣವರ ಸೇರಿದಂತೆ ಸೊಸೈಟಿಯ ಸಿಬ್ಬಂದಿ ಹಾಗೂ ಇತರರಿದ್ದರು. ಆಡಳಿತ ಮಂಡಳಿಯ ಸದಸ್ಯ ಬಸವೃಆಜ ಯಾದವಾಡ ವಂದಿಸಿದರು.