ಮಂಗಳೂರು, ಏ ೨೪, ರಂಜಾನ್ ಮಾಸದ ಪ್ರಥಮ ಚಂದ್ರ ದರ್ಶನ ಕೇರಳದ ಕಲ್ಲಿ ಕೋಟೆಯಲ್ಲಿ ಗುರುವಾರ ಗೋಚರಿಸಿರುವ ಹಿನ್ನಲೆಯಲ್ಲಿ ಇಂದಿನಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ರಂಜಾನ್ ಉಪವಾಸ ವ್ರತ ಆರಂಭವಾಗಿದೆ ಎಂದು ಉಡುಪಿ ಸಂಯುಕ್ತ ಖಾಝಿ ಅಲ್ ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಖಾಝೀ ಅಲ್ ಹಾಜ್ ತ್ವಾಕ ಅಹಮದ್ ಮುಸ್ಲಿಯಾರ್ ತಿಳಿಸಿದ್ದಾರೆ.ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಶನಿವಾರದಿಂದ ರಂಜಾನ್ ಉಪವಾಸ ವ್ರತ ಆರಂಭವಾಗಲಿದೆ.