ಸಂಬರಗಿ 24: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ 200 ಕೋಟಿ ಅನುದಾನ ಮಂಜೂರು ಮಾಡಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸುತ್ತಿವೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಮನಕ್ಕೆ ತಂದಿದ್ದೇವೆ ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಸತೀಶ್ ಜಾರಕಿಹೊಳಿ ಹೇಳಿದರು.
ಅವರು ಯಂಕಂಚಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರಗಿ ಮಾತನಾಡಿ ಅವರು ಯೋಜನೆಗೆ 80 ಅ ಅನುದಾನ ನೀಡಿದ್ದೇವೆ ಇನ್ನು ಉಳಿದ ಹಣ ಶೀಘ್ರದಲ್ಲಿ ಬಿಡುಗಡೆ ಮಾಡಿ ಈ ಯೋಜನೆ ಪೂರ್ಣಗೊಳಿಸುತ್ತೇವೆ. ಇಗಾಗಲೇ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು ಆದರೆ ಕಾರಣಾಂತರವಾಗಿ ತಡವಾಗಿದೆ. ಈಗ ಕಾಮಗಾರಿ ಭರದಿಂದೆ ಸಾಗುತ್ತಾ ಇದೆ ಗಡಿ ಗ್ರಾಮಗಳನ್ನು ಬರ ಮುಕ್ತ ಮಾಡುತ್ತೇವೆ ಎಂದರು
ಅನಧಿಕೃತ ಕಲ್ಲು ಗಣಿಗಾರಿಕೆ ಕುರಿತು ಮಾತನಾಡಿ ಅವರು ಈ ಕುರಿತು ತಹಸೀಲ್ದಾರ್ ಇವರಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಬೇಕೆಂದು ಆದೇಶ ಮಾಡುತ್ತೇವೆ ಈ ಕುರಿತು ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿ ಮಾತನಾಡಿ ಅವರು ನಾನು ಪಕ್ಷ ಸಂಘಟನೆ ಮಾಡಿ ಮುಂಬರುವ ಚುನಾವಣೆಯಲ್ಲಿ ಪಕ್ಷ ಸ್ಪಷ್ಟ ಬಹುಮತದಿಂದ 2028 ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು. ನಮ್ಮಲ್ಲಿ ಯಾವುದೇ ಪ್ರಕಾರ ಭಿನ್ನಾಭಿಪ್ರಾಯ ಇಲ್ಲ ಪಕ್ಷದ ಹೈಕಮಾಂಡ್ ಮಾಡಿರುವ ಆದೇಶಗೆ ನಾವು ಬದ್ಧವಾಗುತ್ತವೆ
ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗೆ ಹೆಚ್ಚು ಹಣದಾನ ನೀಡಿದ್ದೇವೆ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ನಡೆಸಿದ್ದೇವೆ ಮುಂಬರುವ ಚುನಾವಣೆಗೆ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸಿ ಪಕ್ಷ ಸಂಘಟನೆ ಮಾಡ್ತಾ ಇದ್ದೇವೆ ಎಂದು ಸ್ಪಷ್ಟಪಡಿಸಲು ಮುಖ್ಯಮಂತ್ರಿ ಯಾರು ಆಗುವುದೆಂದು ಆ ವಿಷಯ ಪಕ್ಷದ ವರಿಷ್ಠರು ಬಿಟ್ಟುಕೊಟ್ಟು ಸದ್ಯದಲ್ಲಿ ಆ ಕುರಿತು ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಚಿಕ್ಕೋಡಿ ಜಿಲ್ಲಾ, ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಚಿಂಗಳೇ, ಸಿದ್ದಾರ್ಥ ಸಿಂಗೆ, ಗಜಾನನ ಮಂಗಸೂಳಿ, ಬಸವರಾಜ್ ಬೂಟಾಳಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಆಪ್ತರು ರಮೇಶ್ ಸಿಂದಗಿ ರಾಹುಸಾಹೇಬ ಐಹೋಳೆ, ಸುನಿಲ್ ಸಂಕ ಉಪಸ್ಥಿತಿ ಇದ್ದರು.