ಬಾಲ್ಯವಿವಾಹದಿಂದ ಬಾಲಕಿಯರ ರಕ್ಷಣೆ: ಕಲ್ಯಾಣ ಸಮಿತಿಗೆ ಹಾಜರು

ಕೊಪ್ಪಳ 21 :ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಒಂದೇ ದಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋನಸಾಗರ, ಮುರುಡಿ ಮತ್ತು ನೆಲಜೇರಿ ಗ್ರಾಮಗಳಲ್ಲಿ ಸರಣಿ ಬಾಲ್ಯವಿವಾಹ ತಡೆಗಟ್ಟಿ, ಬಾಲ್ಯವಿವಾಹದಿಂದ ಬಾಲಕಿಯರ ರಕ್ಷಣೆ ಮಾಡಿ, ಬಾಲಕಿಯರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಿದೆ.  

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿ ಸಂಖ್ಯೆ-1098ಗೆ ಬಾಲಕಿಯರ ಬಾಲ್ಯವಿವಾಹವನ್ನು ಮಾಡುತ್ತಿರುವುದಾಗಿ ಬಂದ ಮಾಹಿತಿ ಹಿನ್ನೆಲೆಯಲ್ಲಿ ಆಗಸ್ಟ್‌ 14ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಯಲಬುರ್ಗಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು, ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಮಕ್ಕಳ ಸಹಾಯವಾಣಿ-1098ರ ಸಿಬ್ಬಂದಿಗಳ ತಂಡವು, ಕೋನಸಾಗರ, ಮುರುಡಿ ಮತ್ತು ನೆಲಜೇರಿ, ಈ ಮೂರು ಗ್ರಾಮಗಳಿಗೆ ಭೇಟಿ ನೀಡಿ ವಿಚಾರಿಸಿದ್ದು, ಮುಂದಿನ ವರ್ಷ ಬಾಲಕಿಯರ ವಿವಾಹ ಮಾಡಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಮಾಹಿತಿ ತಿಳಿದು ಬಂದಿರುತ್ತದೆ.  

ಈ ವೇಳೆಯಲ್ಲಿ ಬಾಲಕಿಯರ ಪೋಷಕರಿಗೆ ಬಾಲ್ಯವಿವಾಹದ ನಿಷೇಧ ಕಾಯ್ದೆ ಹಾಗೂ ದುಷ್ಪರಿಣಾಮಗಳ ಅರಿವು ನೀಡುವುದರೊಂದಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗುವಂತೆ ಸೂಚನಾ ಪತ್ರ ನೀಡಿ, ಬಾಲಕಿಯರನ್ನು ರಕ್ಷಿಸಿ ಮುಂದಿನ ಆರೈಕೆ ್ಘ ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ಹಾಜರುಪಡಿಸಲಾಗಿದೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.