ಅಕ್ರಮವಾಗಿ ಗಾಂಜ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸರ ಬಲೆಗೆ

ಬಳ್ಳಾರಿ 10: ನಗರದಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ  ಅಕ್ರಮವಾಗಿ ಗಾಂಜ ಮಾರಾಟ ಮಾಡುತ್ತಿದ್ದ  ಇಬ್ಬರಿಗೆ   ಪೊಲೀಸರು ಬಲೆ ಬೀಸಿದ್ದು  ಇಬ್ಬರನ್ನು ಹೊಸಕೆ ತೆಗೆದು ಕೊಂಡಿದ್ದಾರೆ. ನಲ್ಲಾಚರುವ ಏರಿಯಾದ ಇಟ್ಟಂಗಿ ಭಟ್ಟಿಯ ಆಂಜನೇಯ ಗುಡಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಆರೋಪಿಗಳು ಗಂಜ ಮಾರಾಟ ಮಾಡುತ್ತಿದ್ದು ಖಚಿತ ಮಾಹಿತಿ ಮೇರೆಗೆ  ಕೋಲ್ ಬಜಾರ್ ಪೊಲೀಸರು ದಾಳಿ ಮಾಡಿ  ಇಬ್ಬರನ್ನು ಬಂಧಿಸುವ  ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.  

ಬಂದಿದ್ದರಾದ   ಜಕ್ಕರಿಯ ಮಾಜಿ ತಂದೆ ರುಶಿಯಾ ಮಾಜಿ, (30 ವರ್ಷ) ಬಲ್ ಶಾಹಿ ಚೇಲಘಡ ಪಿ ಎಸ್ ಉದಯಗಿರಿ ಗಜಪತಿ ಜಿಲ್ಲೆ, ಒಡಿಸ್ಸಾ ಮೂಲದವರಾಗಿದ್ದು  ಈ ಇಬ್ಬರು ಸಕ್ರಿಯವಾಗಿ ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದಾಗ ಇವರನ್ನು ಬಂಧಿಸಿ  ಆರೋಪಿಗಳಿಂದ  ನಗದು ಹಣ 850/ರೂಪಾಯಿಗಳು ಮತ್ತು 4 ಕೆಜಿ 310 ಗ್ರಾಂ ಗಾಂಜಾವನ್ನು ಅಂದಾಜು ಮೌಲ್ಯ ರೂ 2,00,000/- ಜಪ್ತಿಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ಪ್ರಕಾರ  ಕ್ರಮ ಒಳಪಡಿಸಲಾಗಿದೆ.  

ಈ ಕಾರ್ಯಾಚರಣೆಯಲ್ಲಿ  ಚಂದ್ರಕಾಂತ ನಂದರೆಡ್ಡಿ, ಡಿ ಎಸ್ ಪಿ ನಗರ ಉಪವಿಭಾಗ, ಟಿ ಸುಭಾಷ್ ಚಂದ್ರ ಪಿ ಐ ಕೌಲ್ ಬಜಾರ್ ಪೊಲೀಸ್ ಠಾಣಿ, ಲಾರೆನ್ಸ್‌ ಪಿ ಎಸ್ ಐ,ಕೆ ಮಂಜುನಾಥ ಎ ಎಸ್ ಐ,ಸಿಬ್ಬಂದಿಯವರಾದ ನಾಗರಾಜ ಕೆ,  ಕೆ ಎನ್ ಸೋಮಪ್ಪ, ಕೃಷ್ಣಮೂರ್ತಿ, ಮಂಜುನಾಥ, ಕೃಷ್ಣ ರೆಡ್ಡಿ, ಗಾಡಿ ಕೃಷ್ಣ, ಶಿವಪುತ್ರ,ಸಂತೋಷ್ ಕುಮಾರ್ ಇವರಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಕುರಿತು ಪತ್ರಿಕೆ ಪ್ರಕಟಣೆಗೆ ತಮ್ಮ ಸಿಬ್ಬಂದಿಯನ್ನು   ಜಿಲ್ಲಾ ವರಿಷ್ಠ ಧಿಕಾರಿಗಳಾದ  ಡಾ. ಶೋಭಾ ರಾಣಿ  ವಿ. ಜೆ, ಪೊಲೀಸ್ ಅಧಿಕ್ಷಕರು ರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.