ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿ ಸೂಕ್ತ

ಕಂಪ್ಲಿ 12: ಮಕ್ಕಳಲ್ಲಿ ಅಡಗಿರುವ ಸೂಪ್ತ ಕಲಾ ಪ್ರತಿಭೆಯನ್ನು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸೂಕ್ತ ವೇದಿಕೆಯಾಗಿದೆ ಎಂದು ಇಸಿಒ ಎಂ.ರೇವಣ್ಣ ಹೇಳಿದರು ತಾಲೂಕಿನ ಎಮ್ಮಿಗನೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕ್ಲಸ್ಟರ್‌ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ. ಪ್ರತಿಯೊಬ್ಬ ಮಕ್ಕಳುಪಠ್ಯೆತರ ಚಟವಟಿಕೆಯಲ್ಲಿ ಯಾವುದಾದರೊಂದು ಪ್ರತಿಭೆಯಿದ್ದು ಶಿಕ್ಷಕರು ಗುರುತಿಸಿ ಜಾಗೃತಿಗೊಳಿಸುವ ಮೂಲಕ ಪ್ರತಿಭಾವಂತನನ್ನಾಗಿಸಬೇಕಿದೆ. ಮಕ್ಕಳ ಮನಸ್ಸನ್ನರಿತು ಶಿಕ್ಷಣ ನೀಡುವಲ್ಲಿ ಮುಂದಾಗಬೇಕು ಮಕ್ಕಳಲಿನ ಪ್ರತಿಭೆಯನ್ನು ಗುರುತಿಸಿ ಅಹ್ ಮಕ್ಕಳನ್ನು ಆಯ್ಕೆ  ಮಾಡುವಲ್ಲಿ ತೀಪುಗಾರರು ನಿಗಾವಹಿಸಬೇಕು ಎಂದರು.   

ಸಿಆರ್‌ಪಿ ಸ್ವಯಂಪ್ರಭಾ ಮಾತನಾಡಿ, ಮಕ್ಕಳು ತಮ್ಮಲ್ಲಿನ ಕಲೆಯನ್ನು ಪ್ರದರ್ಶಿಸುವಲ್ಲಿ ಮುಂದಾಗಬೇಕು. ಜಿಲ್ಲಾ, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಗೊಳ್ಳುವ ಪ್ರದರ್ಶನ ತೋರುವಂತೆ ಸಲಹೆ ನೀಡಿದರು. ಮಕ್ಕಳ ಛದ್ಮವೇಷ ಪಾಲಕ ಪೋಷಕರು, ಸಹಪಾಠಿಗಳ ಗಮನಸೆಳೆದರು. ಗ್ರಾಪಂ ಅಧ್ಯಕ್ಷೆ ಶಾರದಾ ಜಡೆಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಪಿಟಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ಮುಖ್ಯಶಿಕ್ಷಕ ಬಿ.ಎಸ್‌.ಸದ್ಯೋಜಾತಪ್ಪ, ಎಸ್‌ಡಿಎಂಸಿ ಅಧ್ಯಕ್ಷರಾದ ರಾಜ, ಎಚ್‌.ಚಂದ್ರಶೇಖರ, ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್‌.ಮಲ್ಲೇಶ, ತಾಲೂಕು ಅಧ್ಯಕ್ಷ ಎಸ್‌.ರಾಮಪ್ಪ, ಶಿಕ್ಷಕರಾದ ಆದೇಶ ಜವಳಿ, ಕೆ.ವೈ.ಪಾಂಡುರಂಗ, ಸರ್ವೇಶ್ ಸೇರಿ ಇತರರಿದ್ದರು.