ಕಷ್ಟಪಟ್ಟು ದುಡಿಯುವ ವ್ಯಾಪಾರಿಗಳು ಒಂದಿಷ್ಟು ಹಣ ಉಳಿತಾಯ ಮಾಡಿ : ಅಶ್ವತ್ಥ ವೈದ್ಯ

ಉಗರಗೋಳ 12 : ಕಷ್ಟಪಟ್ಟು ದುಡಿಯುವ ವ್ಯಾಪಾರಿಗಳು ಒಂದಿಷ್ಟು ಹಣ ಉಳಿತಾಯ ಮಾಡಿ, ಧಾರ್ಮಿಕ ಕಾರ್ಯಕ್ಕೆ ಬಳಸುತ್ತಿರುವುದು ಶ್ಲಾಘನೀಯ ಎಂದು ಕಾಂಗ್ರೆಸ್ ಮುಖಂಡ ಅಶ್ವತ್ಥ ವೈದ್ಯ ಹೇಳಿದರು. 

ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣೇಶನ ಹಬ್ಬಕ್ಕೆ ಜಾತಿ ಭೇದವಿಲ್ಲ. ಸರ್ವಧರ್ಮದ ವ್ಯಾಪಾರಸ್ಥರು ಕೂಡಿಕೊಂಡು ಈ ಹಬ್ಬ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಈ ಪರಂಪರೆ ಮುಂದುವರಿಯಲಿ ಎಂದರು. 

ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ, ಮಾತನಾಡಿ ‘ಮಕ್ಕಳು ಹೆತ್ತವರ ಬಗ್ಗೆ ಕಾಳಜಿ ವಹಿಸಬೇಕು. ಸಂಧ್ಯಾಕಾಲದಲ್ಲಿ ಪ್ರೀತಿಯಿಂದ ಅವರ ಆರೈಕೆ ಮಾಡಬೇಕು. ಒತ್ತಡದ ಬದುಕಿನಲ್ಲೂ ಧಾರ್ಮಿಕ ಚಟುವಟಿಕೆಗೆ ಒಂದಿಷ್ಟು ಸಮಯ ಮೀಸಲಿಡಬೇಕು’ ಎಂದರು. 

ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ‘ಎಲ್ಲರ ಅಮ್ಮ‘ ಯಲ್ಲಮ್ಮ ದೇವಿ ದರ್ಶನಕ್ಕಾಗಿ ಬಂದಿದ್ದ ಭಕ್ತರು, ದೇವಸ್ಥಾನದಲ್ಲೇ ಪಕ್ಕದಲ್ಲೇ ಪ್ರತಿಷ್ಠಾಪಿಸಿದ ಗಣಪನ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು.  

ಬಿ ಎನ್ ಪ್ರಭುನವರ, ಆರ್ ಎಚ್ ಸವದತ್ತಿ, ಮಲ್ಲನಗೌಡ ಪಾಟೀಲ, ಮುತ್ತು ಹನಶಿ, ವಿನಾಯಕ ಕುಂಕುಗಾರ, ಸೋಮಲಿಂಗ ಬಾರ್ಕಿ, ಬಿ ಎ ಚೋರಿಖಾನ, ಸಂತೋಷ ಕುಂಕುಮಗಾರ, ಪ್ರಕಾಶ ರಾವಳ, ಮಾದೇವ ಚಿನಗುಡಿ, ಪ್ರಕಾಶ ರಜಪುತ, ಹಸನ್ ಮುಲ್ಲನ್ನವರ, ನವೀಣ ಹನಶಿ, ಮಂಜು ಸುಂಕದ, ದಿಲಾವರ ಚೂರೊಖಾನ, ಆನಂದ ಕಲಾಲ ಹಾಗೂ ಭಕ್ತರು ಮತ್ತು ದೇವಸ್ಥಾನ ಸಿಬ್ಬಂದಿ, ವ್ಯಾಪಾರಸ್ಥರು ಇದ್ದರು. ಬಸವರಾಜ ಹನಶಿ ನಿರೂಪಿಸಿ ವಂದಿಸಿದರು.