ಗದಗ 11: ಪಕ್ಷದ ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿದ್ದು ತದನಂತರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪ್ರಥಮಾದ್ಯತೆ ನೀಡುವುದೇ ಪ್ರತಿಯೊಬ್ಬ ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ ಅವರು ನುಡಿದರು.
ಗದಗ ತಾಲೂಕಿನ ಲಿಂಗಧಾಳದಲ್ಲಿಂದು ಸರಕಾರಿ ಪ್ರೌಢಶಾಲೆಯಲ್ಲಿ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಶಾಲೆಯ ಹಾಗೂ ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಜಿಲ್ಲಾ , ತಾಲೂಕಾ ಹಾಗೂ ಗ್ರಾ. ಪಂ . ಮಟ್ಟದಲ್ಲಿ ಪಕ್ಷಾತೀತವಾಗಿ ತಮ್ಮ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗಳನ್ನೇ ಗುರಿಯಾಗಿಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಸಂವಿಧಾನ ವ್ಯಾಪ್ತಿಯಲ್ಲಿ ಚುನಾಯಿತ ಪ್ರತಿನಿಧಿಗಳು ಅಧ್ಯಕ್ಷರುಗಳು , ಕಾರ್ಯನಿರ್ವಹಿಸಬೇಕು. ಲಿಂಗಧಾಳ ಗ್ರಾಮದ ಕೆರೆ ಗ್ರಾಮಕ್ಕೆ ಪೂರ್ವಜರು ನೀಡಿದ ಬಹುದೊಡ್ಡ ಕೊಡುಗೆ. ಅದನ್ನೀಗ ಗಟಾರದ ನೀರು ಹರಿಸುತ್ತಿರುವುದು ಖೇದಕರ ವಿಷಯ. ಲಿಂಗಧಾಳ ಗ್ರಾ. ಪಂಚಾಯತಿಯ ಕೆರೆ ಪುನಶ್ಚೇತನಕ್ಕೆ ಸಂಬಂಧಿಸದಿಂತೆ ಮೊದಲೇ ಕ್ರಿಯಾ ಯೋಜನೆ ರೂಪಿಸಿದ್ದಲ್ಲಿ ಒಳ್ಳೆಯದಾಗುತ್ತಿತ್ತು. ಪ್ರಸಕ್ತ ಕೆರೆಯ ಪುನಶ್ಚೇತನಕ್ಕಾಗಿ ಗ್ರಾ. ಪಂಚಾಯತಿ ಉದ್ಯೋಗ ಖಾತ್ರಿ ಯೋಜನೆಯಡಿ ಸೂಕ್ತ ಕಾಮಗಾರಿಯನ್ನು ಸಂಯೋಜಿಸಬೇಕು. ಹಾಗೂ ಗಟಾರದ ನಿಮರ್ಾಣಕ್ಕೆ ಸಕರ್ಾರದಿಂದ 50 ಲಕ್ಷ ರೂ. ಬಿಡುಗಡೆ ಮಾಡುವಂತೆ ತಾವು ಕ್ರಮ ವಹಿಸುವುದಾಗಿ ತಿಳಿಸಿದ ಸಚಿವರು ಪ್ರಾಥಮಿಕ ಶಾಲಾ ಕೊಠಡಿಗಳ ದುರಸ್ತಿಗೆ 5 ಲಕ್ಷ ರೂ. ಬಿಡುಗಡೆ ಮಾಡಿಸುವುದಾಗಿ ಗಿ ಭರವಸೆ ನೀಡಿದರು. ಕೆರೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಲಿಂಗಧಾಳ ಗ್ರಾ. ಪಂ. ಅಗತ್ಯದ ಕ್ರಮ ಜರುಗಿಸಿ ಕ್ರಿಯಾ ಯೋಜನೆಯನ್ನು ಸಲ್ಲಿಸಲು ಪಿ.ಡಿ.ಓಗಳಿಗೆ ಸಚಿವ ಸಿ.ಸಿ.ಪಾಟೀಲ ಸೂಚನೆ ನೀಡಿದರು.