ನವದೆಹಲಿ 25: ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ಶುಕ್ರವಾರ (ಏ.25) ಛೀಮಾರಿ ಹಾಕಿದ್ದು, ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಇಂತಹ ಹೇಳಿಕೆ ನೀಡಲು ಅವಕಾಶ ನೀಡುವುದಿಲ್ಲ ಎಂದಿರುವ ಸುಪ್ರೀಂ ಒಂದು ವೇಳೆ ಮತ್ತೆ ಪುನರಾವರ್ತನೆಯಾದರೆ ಸ್ವಯಂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
2022ರ
ನವೆಂಬರ್ 17ರಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿತ್ತು. ಸಾವರ್ಕರ್ ಅವರು ಬ್ರಿಟಿಷ್ ಸೇವಕರಾಗಿದ್ದು, ವಸಾಹತುಶಾಹಿ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದರು ಎಂದು ರಾಹುಲ್ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು.
ಸಾವರ್ಕರ್
ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ತನಗೆ ನೀಡಿದ್ದ ಸಮನ್ಸ್ ಅನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಸುಪ್ರೀಂಕೋರ್ಟ್
ಪೀಠದ ಜಸ್ಟೀಸ್ ದೀಪಂಕರ್ ದತ್ತ ಮತ್ತು ಜಸ್ಟೀಸ್ ಮನ್ ಮೋಹನ್ ಅವರು ರಾಹುಲ್ ಗಾಂಧಿ ಅರ್ಜಿಯ ವಿಚಾರಣೆ ನಡೆಸಿದ್ದರು. ತಮ್ಮ ಕಕ್ಷಿದಾರರಿಗೆ ಹೇಳಿಕೆಯ ಮೂಲಕ ದ್ವೇಷವನ್ನು ಪ್ರಚೋದಿಸುವ ಯಾವ ಉದ್ದೇಶ ಹೊಂದಿರಲಿಲ್ಲ ಎಂದು ಗಾಂಧಿ ಪರ ವಕೀಲರು ವಾದ
ಮಂಡಿಸಿದ್ದರು.
“ನಿಮ್ಮ
ಕಕ್ಷಿದಾರರಿಗೆ ಅವರ ಅಜ್ಜಿ ಸಾವರ್ಕರ್ ಗೆ ಪತ್ರವನ್ನು ಕಳುಹಿಸಿರುವ
ವಿಚಾರದ ಬಗ್ಗೆ ಗೊತ್ತಾ?” ಎಂದು ಸುಪ್ರೀಂ ತರಾಟೆಗೆ ತೆಗೆದುಕೊಂಡಿತ್ತು.
ಏತನ್ಮಧ್ಯೆ
ಸುಪ್ರೀಂಕೋರ್ಟ್ ಸಂಸದ ರಾಹುಲ್ ಗೆ ಕಠಿಣ ಎಚ್ಚರಿಕೆ
ನೀಡಿದ್ದು, ನೀವೊಬ್ಬರು ರಾಜಕೀಯ ವ್ಯಕ್ತಿ. ಒಂದು ವೇಳೆ ಪ್ರಚೋದಿಸುವುದು ನಿಮ್ಮ ಉದ್ದೇಶ ಅಲ್ಲ ಎಂದಾದರೆ, ಇಂತಹ ಹೇಳಿಕೆ ಯಾಕೆ ನೀಡುತ್ತೀರಿ? ಎಂದು ಪ್ರಶ್ನಿಸಿದೆ.
ಆದರೆ
ಸಮನ್ಸ್ ಪ್ರಕ್ರಿಯೆಗೆ ಈಗ ತಡೆ ನೀಡಲು
ಒಪ್ಪಿರುವುದಾಗಿ ತಿಳಿಸಿರುವ ಸುಪ್ರೀಂಕೋರ್ಟ್, ಇನ್ಮುಂದೆ ಯಾವುದೇ ಕಾರಣಕ್ಕೂ ಇಂತಹ ಹೇಳಿಕೆಯನ್ನು ನೀಡಬಾರದು ಎಂದು ಸ್ಪಷ್ಟಪಡಿಸಿದೆ. ಒಂದು ವೇಳೆ ಅಂತಹ ಹೇಳಿಕೆಯ ಪುನರಾವರ್ತನೆಯಾದರೆ ಸ್ವಯಂ ಆಗಿ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.