ಉಗ್ರರ ದಾಳಿ ಖಂಡಿಸಿ ಭಜರಂಗದಳ ಸಂಘಟನೆಯಿಂದ ಪ್ರತಿಭಟನೆ

Bajrang Dal organization protests condemning terrorist attacks

ಉಗ್ರರ ದಾಳಿ ಖಂಡಿಸಿ ಭಜರಂಗದಳ ಸಂಘಟನೆಯಿಂದ ಪ್ರತಿಭಟನೆ

ರಾಯಬಾಗ, 26:  ಕಾಶ್ಮೀರದ ಪೆಹಲ್ಗಾಮನಲ್ಲಿ ಹಿಂದೂಗಳ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ತ, ಭಜರಂಗದಳ ಸಂಘಟನೆ ತಾಲೂಕು ಘಟಕದಿಂದ ಶನಿವಾರ ಪಟ್ಟಣದ ಅಭಾಜಿ  ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಉಗ್ರರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. 

   ಶಾಸಕ ಡಿ.ಎಮ್‌.ಐಹೊಳೆ ಮಾತನಾಡಿ, ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಅಮಾನವೀಯವಾಗಿದ್ದು, 28 ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.    ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ, ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತೀಯ ಸಂಚಾಲಕ ವೆಂಕಟೇಶ ದೇಶಪಾಂಡೆ, ಗೀತಾ ಮೇತ್ರಿ ಮಾತನಾಡಿದರು.  

   ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ, ಅನಂತ ಸ್ವಾಮೀಜಿ, ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಆನಂದ ಹೊಸಮನಿ, ಮಹೇಶ ಹಿರೇಮಠ, ಯಲ್ಲಪ್ಪ ವಡ್ಡರ, ವಿದ್ಯಾ ಕದ್ದು, ಭಾರತಿ ಪುಂಡಿಪಲ್ಲೆ, ಸಿದ್ದು ದೇಸಾಯಿ, ಪ್ರಸಾದ ಕಾತರಕಿ, ಏಕನಾಥ ಮಾಚಕನೂರ, ನಾರಾಯಣ ಮೇತ್ರಿ, ಸಂಗಣ್ಣಾ ದತ್ತವಾಡೆ , ಸದಾಶಿವ ಹಳಿಂಗಳಿ , ಸಂಜು ಜೊಷಿ , ಪ್ರಕಾಶ ಕುಲಕರ್ಣಿ , ದತ್ತಾ ಉಗ್ರಾಣಿ ,  ಭಜರಂಗ ದಳದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪಟ್ಟಣದ ದತ್ತ ಮಂದಿರದಿಂದ ವಿಶ್ವ ಹಿಂದೂ ಪರಿಷತ್ತ, ಭಜರಂಗದಳ ಸಂಘಟನೆ ಕಾರ್ಯಕರ್ತರು ಬೃಹತ್ತ ಮೆರವಣಿಗೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಅಭಾಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.