ಬೆಳಗಾವಿ : ಸಿನೀಮಿಯ ರೀತಿಯಲ್ಲಿ ಹಾಡುಹಗಲಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿದ ಖದೀಮರ ತಂಡವೊAದು ಉದ್ಯಮಿಗೆ ಮತ್ತು ಕುಟುಂಬಸ್ಥರ ತಲೆಗೆ ಗನ್ (ಬಂದೂಕು) ಹಿಡಿದು ಮನೆ ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ಬೆಳಗಾವಿ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಐದು ದರೋಡೆಕೋರರಿದ್ದ ತಂಡವು ರಿಯಲ್ ಎಸ್ಟೇಟ್ ಉದ್ಯಮಿ ಮೈನುದ್ದೀನ ಪಠಾಣ್ ಅವರ ಬೆಳಗಾವಿ ನಗರದ ಬುಡಾ ಕಚೇರಿ ಪಕ್ಕದ ಅಸೋದಾ ಸೊಸೈಟಿಯಲ್ಲಿರುವ ಮನೆಗೆ ನುಗ್ಗಿದೆ. ಬಳಿಕ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಅವರ ಪತ್ನಿ ಮತ್ತು ಮಗಳ ತಲೆಗೆ ಐವರು ದುಷ್ಕರ್ಮಿಗಳು ಗನ್ (ಬಂದೂಕು) ಇಟ್ಟು ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಮೈನುದ್ದೀನ ಪಠಾಣ್ ಮನೆಗೆ ನುಗ್ಗಿ ದರೋಡೆಕೋರರು ಗನ್ ಹಿಡಿದು ರಿಯಲ್ ಎಸ್ಟೇಟ್ ಉದ್ಯಮಿಗೆ ಎಂಟ್ರಿ ಕೊಟ್ಟಿದ್ದ ಗನ್ ಗ್ಯಾಂಗ್. ಫಿಲ್ಮ್ ಸ್ಟೆöÊಲ್‌ನಲ್ಲಿ ಮನೆಯಲ್ಲಿದ್ದವರಿಗೆ ಗನ್ ಹಿಡಿದು ದರೋಡೆಗೆ ಯತ್ನ ನಡೆಸಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಮೈನುದ್ದೀನ ಪಠಾಣ್, ಹೆಂಡತಿ ಮಗಳ ತಲೆಗೆ ಗನ್ ಇಟ್ಟು ಕಳ್ಳತನಕ್ಕೆ ಯತ್ನ ನಡೆದಿದೆ. ಪ್ರತಿರೋಧ ತೋರಿದಾಗ ಬಾತರೂನಲ್ಲಿ ದರೋಡೆಕೋರ ಗ್ಯಾಂಗ್ ಕೂಡಿಹಾಕಿ ಕಳ್ಳತನಕ್ಕೆ ಯತ್ನಿಸಿದೆ. ಬಳಿಕ ಬಾತ್ ರೂಮಿನಲ್ಲಿ ಬಂಧಿಯಾಗಿದ್ದ ಮೈನುದ್ದೀನ ಪಠಾಣ್ ಕುಟುಂಬವು ಶೌಚಾಲಯದ ಒಳಗಿನಿಂದ ತಾವೂ ಲಾಕ್ ಮಾಡಿಕೊಂಡು ಗ್ಲಾಸ್‌ಗಳನ್ನ ಕೆಳಗಡೆ ಚೆಲ್ಲಿ ಕೂಗಾಟ ಮಾಡಿದೆ. ಕುಟುಂಬಸ್ಥರು ಕೂಗಾಟ ಚೀರಾಟ ಹೆಚ್ಚಾಗ್ತಿದ್ದಂತೆ ಕಳ್ಳತನ ಮಾಡೋದನ್ನ ಬಿಟ್ಟು ಖದೀಮರು ಓಡಿದ ಹೋಗಿದ್ದಾರೆ.
ಕಳ್ಳತನಕ್ಕೆ ವಿಫಲವಾಗಿ ಪರಾರಿಯಾಗಿರುವ ದರೋಡೆಕೋರ ಗ್ಯಾಂಗ್ ಪತ್ತೆಗೆ ಪೊಲೀಸರು ಜಾಲಬೀಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಪರಾಧ ವಿಭಾಗದ ಎಸಿಪಿ ಸದಾಶಿವ ಕಟ್ಟಿಮನಿ, ಮಾರ್ಕೆಟ್ ಮತ್ತು ಮಾಳಮಾರುತಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.