ಹೂವಿನಹಡಗಲಿ ಜಿಬಿಆರ್ ಕಾಲೇಜಿನಲ್ಲಿ ಜಾನಪದ ಜಾತ್ರೆಗೆ ಚಾಲನೆ

Folklore fair kicks off at GBR College in Huivanahadagali

ಹೂವಿನಹಡಗಲಿ ಜಿಬಿಆರ್ ಕಾಲೇಜಿನಲ್ಲಿ ಜಾನಪದ ಜಾತ್ರೆಗೆ ಚಾಲನೆ 

ಲೋಕದರ್ಶನ ವರದಿ 

ಹೂವಿನಹಡಗಲಿ   26:  ಪಟ್ಟಣದ ಜಿಬಿಆರ್ ಪದವಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ’ಜಾನಪದ ಜಾತ್ರೆ-2025’ ಅಂಗವಾಗಿ ಕಾಲೇಜು ಅಂಗಳದಲ್ಲಿ ಗ್ರಾಮೀಣ ಸೊಗಡು ಅನಾವರಣಗೊಂಡಿತ್ತು. ಕಾಲೇಜಿನ ಪ್ರವೇಶ ದ್ವಾರದಲ್ಲಿ ಜೋಳ, ರಾಗಿಯ ಧಾನ್ಯದ ರಾಶಿಗೆ ಗಣ್ಯರು ಪೂಜೆ ಸಲ್ಲಿಸಿ ಜಾನಪದಜಾತ್ರೆಗೆ ಚಾಲನೆ ನೀಡಿದರು. ಸಮಾಳ, ನಂದಿಕೋಲು ವಾದ್ಯ ವೈಭವದೊಂದಿಗೆ ವಿದ್ಯಾದೇವತೆ ಶಾರದೆಯ ಚಿತ್ರವನ್ನು ಎತ್ತಿನ ಬಂಡಿಯಲ್ಲಿ ಅಳವಡಿಸಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಜರತಾರಿ ಸೀರೆಯುಟ್ಟು, ತಲೆಗೆ ಹೂಮುಡಿದು,   ವಿವಿಧ ಆಭರಣತೊಟ್ಟು ಕಂಗೊಳಿಸಿದ ವಿದ್ಯಾರ್ಥಿನಿಯರು.ಲುಂಗಿ, ಅಂಗಿ ಧರಿಸಿ ಹೆಗಲ ಮೇಲೆ ಟವೆಲ್ ಹಾಕಿ ಬೀಗಿದಚಿಗರು ಮೀಸೆ ಹುಡುಗರಜತೆಯಲ್ಲಿ ಸಾಂಪ್ರದಾಯಿಕಉಡುಗೆಯಲ್ಲಿ ಸಂಭ್ರಮಿಸಿದ ಪ್ರಾಚಾರ್ಯರು, ಸಿಬ್ಬಂದಿ. 

ಇಡೀ ದಿನ ದೇಸಿ ಆಟ, ಊಟ, ಮನರಂಜನೆಯ ಪಾಠ.ವಿದ್ಯಾರ್ಥಿಗಳ ಜಾನಪದ ನೃತ್ಯ, ಲಂಬಾಣಿ ನೃತ್ಯ, ಕಿರು ನಾಟಕ, ಹಾಡುಕುಣಿತ ಮನಸೊರೆಗೊಂಡಿತು.ಹರಪನಹಳ್ಳಿ ಎಡಿಬಿ ಕಾಲೇಜಿನ ಆಡಳಿತ ಮಂಡಳಿ ಅದ್ಯಕ್ಷಕೊಟ್ರೇಶಜಾನಪದಜಾತ್ರೆಗೆ ಚಾಲನೆ ನೀಡಿ ಮಾನವೀಯ ಸಂಬಂಧಗಳನ್ನು ಜಾನಪದಜಾತ್ರೆಗಟ್ಟಿಯಾಗಿ ಮಾಡುತ್ತದೆಎಂದರು.ವಿವಿ ಸಂಘದ ಮಾಜಿ ಸಹ ಕಾರ್ಯ ದರ್ಶಿ ಐಗೋಳ ಚಿದಾನಂದ ಮಾತನಾಡಿದರು.ಕಾಲೇಜಿನ ಆಡಳಿತ ಮಂಡಳಿ ಅದಕ್ಷ ಸಿ.ಮೋಹನ ರೆಡ್ಡಿಅದ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ.ಪ್ರಾಚಾರ್ಯರಾದ ಎಸ್‌.ಎಸ್‌.ಪಾಟೀಲ್‌.ನಿವೃತ್ತಿ ಪ್ರಮುಖ ಪ್ರಾಚಾರ್ಯರಾದ ಶಾಂತಮೂರ್ತಿ ಬಿ.ಕುಲಕರ್ಣಿ. ವರಕುಮಾರಗೌಡ.ಪುರಸಭೆಉಪಾಧ್ಯಕ್ಷ ಮಂಜುನಾಥ.ಎಂ.ಪಿ.ಎಂ.ವೀರಭದ್ರದೇವರು.ಕೋಡಿಹಳ್ಳಿ ಮುದಕಪ್ಪಇದ್ದರು.