ಪ್ರಧಾನಿ ಮೋದಿ, ಶ್ರೇಷ್ಠ ನಾಯಕ, ವಿಶೇಷ ವ್ಯಕ್ತಿ: ಮೋದಿಯನ್ನು ಹಾಡಿಹೊಗಳಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

President Donald Trump hails PM Modi, great leader, special person

ವಾಷಿಂಗ್ಟನ್ 14: ನಿಮ್ಮನ್ನು ಭೇಟಿಯಾಗಲು ಖುಷಿಯಾಗುತ್ತಿದೆ. ನೀವು ನನ್ನ ದೀರ್ಘಕಾಲದ ಉತ್ತಮ ಸ್ನೇಹಿತ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದು  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡು ಸ್ವಾಗತಿಸಿದರು.

ಶ್ವೇತಭವನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಡೊನಾಲ್ಡ್ ಟ್ರಂಪ್ ಹಾಡಿ ಹೊಗಳಿದ್ದಾರೆ.

ಪ್ರಧಾನಿ ಮೋದಿ ನನಗಿಂತಲೂ ಕಟ್ಟುನಿಟ್ಟಿನ ಚೌಕಾಶಿ ಮಾಡಬಲ್ಲರು, ನನಗಿಂತಲೂ ಸಾಕಷ್ಟು ಚೆನ್ನಾಗಿ ಚೌಕಾಶಿ ಮಾಡುವವರು. ಇಲ್ಲಿ ಸ್ಫರ್ಧೆಯೇ ಇಲ್ಲ ಎಂದು ಟ್ರಂಪ್  ಮೋದಿ ಬಗ್ಗೆ ಮಾತನಾಡಿದ್ದಾರೆ. ಎಲ್ಲರೂ ಅವರ ಕುರಿತು ಮಾತನಾಡುತ್ತಾರೆ. ನಿಜಕ್ಕೂ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಶ್ರೇಷ್ಠ ನಾಯಕ, ವಿಶೇಷ ವ್ಯಕ್ತಿ ಎಂದು ಗುಣಗಾನ ಮಾಡಿದ್ದಾರೆ.

ಉಭಯ ನಾಯಕರೂ ಟ್ರಂಪ್ ಮೊದಲ ಅವಧಿಯಲ್ಲಿ ಭಾರತ-ಅಮೆರಿಕ ಉತ್ತಮ ಬಾಂಧವ್ಯದ ಕುರಿತಾಗಿಯೂ ಮೆಲುಕು ಹಾಕಿದ್ದಾರೆ.

ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಅವರ್ ಜರ್ನಿ ಟುಗೇದರ್' ಪುಸ್ತಕವನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಪುಸ್ತಕದಲ್ಲಿ 'ಮಿಸ್ಟರ್ ಪಿಎಂ ಯು ಆರ್ ಗ್ರೇಟ್' ಎಂದು ಮೋದಿ ಕುರಿತು ಬರೆದುಕೊಂಡಿದ್ದಾರೆ.