ಜಾನಮಟ್ಟಿ ತಾಂಡಾ ಕೂಡುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ
ಹಾನಗಲ್ 26: ತಾಲೂಕಿನ ಕರೆಕ್ಯಾತನಹಳ್ಳಿ ಹತ್ತಿರ 2023-24 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಕಾರ್ಯಕ್ರಮದಡಿ 34 ಲಕ್ಷ ರೂ. ವೆಚ್ಚದಲ್ಲಿ ಕರೆಕ್ಯಾತನಹಳ್ಳಿ-ಕೂಸನೂರು ರಸ್ತೆಯಿಂದ ಜಾನಮಟ್ಟಿ ತಾಂಡಾ ಕೂಡುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ಕರೆಕ್ಯಾತನಹಳ್ಳಿ-ಕೂಸನೂರು ರಸ್ತೆಯಿಂದ ಜಾನಮಟ್ಟಿ ತಾಂಡಾ ಕೂಡುವ ರಸ್ತೆ ಹದಗೆಟ್ಟು ಹೋಗಿದ್ದರಿಂದ ಕೆಲವರಕೊಪ್ಪ, ಮಾಳಾಪುರ, ಬ್ಯಾತನಾಳ ಸೇರಿದಂತೆ ಆ ಭಾಗದ ಗ್ರಾಮಸ್ಥರು ಕೂಸನೂರು ಮಾರ್ಗವಾಗಿ ಹಾನಗಲ್ ಸೇರಿದಂತೆ ಮತ್ತಿತರೆಡೆ ಸಂಚರಿಸಲು ಅನಾನುಕೂಲ ಉಂಟಾಗುತ್ತಿತ್ತು. ಹಾಗಾಗಿ ಆದ್ಯತೆ ಮೇರೆಗೆ ಈ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಒಳಮಾರ್ಗದ ಈ ರಸ್ತೆ ನಿರ್ಮಾಣದಿಂದ ಕೂಸನೂರು ಗ್ರಾಮವನ್ನು ಸಂಪರ್ಕಿಸಲು ಸುತ್ತಾಡುವುದು ತಪ್ಪಲಿದೆ ಎಂದು ಹೇಳಿದ ಶಾಸಕ ಮಾನೆ, ನಿಗದಿತ ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಭೀಮಣ್ಣ ಲಮಾಣಿ, ಭಾಷಾಸಾಬ ಕೋಟಿ, ಕುಮಾರ ಗದ್ದಿ, ಮಂಜು ಆಲದಕಟ್ಟಿ, ನಾಗರಾಜ ವಡ್ಡರ, ನಾಗಪ್ಪ ಪೂಜಾರ, ಗುರುಲಿಂಗಪ್ಪ ಡೊಳ್ಳೇಶ್ವರ, ರಬ್ಬಾನಿ ಕೂಸನೂರ, ಅಲ್ತಾಹಿರ್ ಕಚವಿ, ಬಂಗಾರೆಪ್ಪ ಕಲಕೇರಿ, ಪ್ರಕಾಶ ಮಾಸಣಗಿ, ಬಸವಂತ ನಾಯ್ಕ, ವೀರಭದ್ರ್ಪ ಕೋಳೂರ ಸೇರಿದಂತೆ ಗ್ರಾಪಂ ಸದಸ್ಯರು,ಗ್ರಾಮಸ್ಥರು ಇದ್ದರು.