ಲಾಕ್ ಡೌನ್ ನಿಯಮ ಪಾಲನೆಗೆ ಮೇಲ್ವಿಚಾರಣಾ ತಂಡ ನೇಮಕ ಸಾಧ್ಯತೆ

ಬೆಂಗಳೂರು,  ಏ 20,ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹೊಸ ಮಾರ್ಗ   ಮತ್ತು  ಲಾಕ್ ಡೌನ್ ನಿಯಮ   ಸಡಿಲಗೊಳಿಸುವ ಬಗ್ಗೆ ಇಂದು ನಡೆಯಲಿರುವ ಸಂಪುಟ ಸಭೆ  ಅನೇಕ ಮಹತ್ವದ  ತೀರ್ಮಾನ ತೆಗೆದುಕೊಳ್ಳವ ಸಾಧ್ಯತೆಯಿದೆ. ಅನೇಕ  ಕಡೆ ಆರೋಗ್ಯ ,ಆಶಾ ಕಾರ್ಯಕರ್ತೆಯರ ಹಲ್ಲೆ  ನಡೆಯುತ್ತಿರುವ  ಘಟನೆಗಳನ್ನು ಹತ್ತಿಕ್ಕಲು ಪೊಲೀಸರಿಗೆ  ಹೆಚ್ಚಿನ  ಅಧಿಕಾರ  ನೀಡುವ ಬಗ್ಗೆಯೂ ಸಮಗ್ರ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಲಾಕ್ ಡೌನ್ ನಿಯಮ  ಪಾಲನೆಯಾಗಲಿರುವ ಬಗ್ಗೆ ಸತತ  ಮೇಲ್ವಿಚಾರಣೆ ವಹಿಸಲು ತಂಡಗಳನ್ನು ರಚಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಅನೇಕ ಮಹತ್ವ ವಿಷಯಗಳು ಚರ್ಚೆಗೆ ಬಂದು ಅನೇಕ  ತೀರ್ಮಾನ ತೆಗೆದುಕೊಳ್ಳುವ ಸಾದ್ಯತೆಯಿದೆ ಎನ್ನಲಾಗಿದೆ. ಇನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಬಗ್ಗೆ ಗಂಬೀರ ಆಲೋಚನೆ ಮಾಡಲಾಗಿದೆ. ಅಗತ್ಯ ಸೇವೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಮೇ. 3 ರವರೆಗೆ ಲಾಕ್ ಡೌನ್ ಮುಂದುವರಿಸಲು ಸರ್ಕಾರ ತೀರ್ಮಾನಿಸಿದ್ದು , ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಧಿಕೃತವಾಗಿ ಪ್ರಕಟಿಸಲಿದೆ ಎನ್ನಲಾಗಿದೆ.