ಲಾಠಿ ಬದಿಗಿಟ್ಟು ಚಿತ್ರೀಕರಣದಲ್ಲಿ ಪೊಲೀಸ್ ಭಾಗಿ

ಬೆಂಗಳೂರು,  ಏ.19, ಸಿಲಿಕಾನ್ ಸಿಟಿ ಪೊಲೀಸರು ಲಾಕ್ ಡೌನ್ ಜಾರಿ ಆದಾಗಿನಿಂದ ಕೊರೊನಾ  ಕುರಿತು ಜಾಗೃತಿ ಮೂಡಿಸಲು ಹಾಡು ಹೇಳಿದ್ದು ಆಯಿತು,  ಜಾದೂ ಮಾಡಿ ಜನಜಾಗೃತಿ‌  ಮೂಡಿಸಿದ್ದು ಆಯಿತು. ಇದೀಗ, ಕೊರೊನಾ ಬಗ್ಗೆ ಅರಿವು ಮೂಡಿಸಲು ಸಾಕ್ಷ್ಯಚಿತ್ರ (ಡಾಕ್ಯೂಮೆಂಟರಿ) ಒಂದನ್ನು ಮಾಡಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ‌. ಲಾಠಿ ಬದಿಗಿಟ್ಟ ಪೊಲೀಸರು  ಸದ್ಯ ನಗರದ ಚನ್ನಮ್ಮಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನಡೆಯುತ್ತಿರುವ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ .ಕೊರೊನಾ ವೈರಸ್ ಮಾದರಿಯಲ್ಲೇ ಪೊಲೀಸರು ವೇಷ ಧರಿಸಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಅತ್ಯಂತ ಆಕರ್ಷಕವಾಗಿದೆ.ಇನ್ನು, ಪೊಲೀಸರು ನಟಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರೀಕರಣ ನೋಡಲು ಜನ ಬರುತ್ತಿದ್ದು, ನಿಯಂತ್ರಿಸುವುದು ಒಂದು ಹರಸಾಹಸವೇ ಆಗಿದೆ.ಕೊರೊನಾ ಬಗ್ಗೆ ಅರಿವು ಮೂಡಿಸಲು ಪೊಲೀಸರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.